ಮೈಸೂರು ಯುವ ದಸರಾ ಉದ್ಘಾಟಿಸಲಿರುವ ನಿಖಿಲ್ ಕುಮಾರಸ್ವಾಮಿ

ಅಕ್ಟೋಬರ್ 10ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6ಗಂಟೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, 7 ದಿನಗಳ ಕಾಲ ನಡೆಯಲಿದೆ.

Last Updated : Sep 18, 2018, 04:46 PM IST
ಮೈಸೂರು ಯುವ ದಸರಾ ಉದ್ಘಾಟಿಸಲಿರುವ ನಿಖಿಲ್ ಕುಮಾರಸ್ವಾಮಿ title=
Pic: Facebook

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಅಕ್ಟೋಬರ್ 10ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6ಗಂಟೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, 7 ದಿನಗಳ ಕಾಲ ನಡೆಯಲಿದೆ. ಮುಖ್ಯ ಅತಿಥಿಯಾಗಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದು, ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ರಕ್ಷಿತ್ ಶೆಟ್ಟಿ, ಧನಂಜಯ ಮತ್ತಿತರ ಚಿತ್ರ ತಾರೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ದಿನದ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ರಾಪ್ ಹಾಡುಗಳೊಂದಿಗೆ ಜನರನ್ನು ರಂಜಿಸಲಿದ್ದಾರೆ. 

ಅಕ್ಟೋಬರ್ 11 ರಂದು ಸಂಜೆ 7.30ಕ್ಕೆ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಅವರು ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಅಕ್ಟೋಬರ್ 12ರಂದು MTV Unpluged ಸಂಗೀತ ಕಾರ್ಯಕ್ರಮ, ಅಕ್ಟೋಬರ್ 13ರಂದು ಜೊನಿತಾ ಗಾಂಧಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 14 ರಂದು ಮಂಗನಿಯರ್ ಪ್ರೇಕ್ಷಕರನ್ನು ಮನರಂಜಿಸಲಿದ್ದು, ಅಕ್ತೊಬಲ್ 15 ರಂದು ಬಾಲಿವುಡ್ ನೈಟ್ ಆಯೋಜಿಸಲಾಗಿದೆ. ಅಂದು ಜಾನ್ ಅಬ್ರಹಾಂ, ಇಶಾ ಗುಪ್ತಾ, ಜೊಯಾ ಮಿರ್ಜಾ ಮತ್ತಿತರ ಬಾಲಿವುಡ್ ತಾರೆಯರು ಭಾಗವಹಿಸುವ ಸಾಧ್ಯತೆಯಿದೆ. ಅಕ್ಟೋಬರ್ 16 ರಂದು ಸ್ಯಾಂಡಲ್ವುಡ್ ನೈಟ್ ಆಯೋಜಿಸಿದ್ದು ಗಾಯಕಿ ಶಮಿತಾ ಮಲ್ನಾಡ್, ಅನುರಾಧಾ ಭಟ್, ಸಂಚಿತ್ ಹೆಗ್ಡೆ, ಇಂಪಾನಾ ಸೇರಿದಂತೆ ಇತರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದೊಂದಿಗೆ ಯುವ ದಸರಾಗೆ ತೆರೆ ಬೀಳಲಿದೆ.

Trending News