ಜವಾನ್‌ ಚಿತ್ರದ ಟಿಕೆಟ್‌ ಪ್ರೈಸ್‌ ಕೇಳಿ ನೆಟ್ಟಿಗರು ಶಾಕ್‌...! ಸಿನಿಮಾ ನೋಡಬೇಕೋ ಬೇಡವೋ ತಿಳಿಸಿ ಎಂದ ಫ್ಯಾನ್ಸ್‌

Jawan advance booking price : ಶಾರುಖ್‌ ಅಭಿನಯದ ಜವಾನ್‌ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಮುಂಗಡ ಬುಕಿಂಗ್‌ ಪ್ರಾರಂಭವಾಗಿದ್ದು, ಟಿಕೆಟ್‌ ಪ್ರೈಸ್‌ ಕೇಳಿದ ನೆಟ್ಟಿಗರು ಶಾಕ್‌ ಆಗಿ ಸದ್ಯ ಸಿನಿಮಾ  ನೋಡಬೇಕೋ ಬೇಡವೋ ಎಂದು ಕನ್‌ಪ್ಯೂಸ್‌ ಆಗಿದ್ದಾರೆ.   

Written by - Savita M B | Last Updated : Sep 2, 2023, 03:13 PM IST
  • ಕಿಂಗ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ
  • ಟ್ರೇಲರ್‌ ಮೂಲಕವೇ ಸಖತ್‌ ಸೌಂಡ್‌ ಮಾಡಿದ್ದ ಈ ಸಿನಿಮಾ ಇದೀಗ ಟಿಕೆಟ್‌ ಬುಕಿಂಗ್‌ ವಿಚಾರವಾಗಿ ಹವಾ ಮಾಡುತ್ತಿದೆ
  • ಬಾಲಿವುಡ್‌ನಲ್ಲಿ ಹಿಂದೆಂದೂ ಯಾವ ಸಿನಿಮಾ ಟಿಕೆಟ್‌ಗೂ ಇರದ ಬೆಲೆ ಈ ಸಿನಿಮಾ ಟಿಕೆಟ್‌ಗಿದೆ
ಜವಾನ್‌ ಚಿತ್ರದ ಟಿಕೆಟ್‌ ಪ್ರೈಸ್‌ ಕೇಳಿ ನೆಟ್ಟಿಗರು ಶಾಕ್‌...! ಸಿನಿಮಾ ನೋಡಬೇಕೋ ಬೇಡವೋ ತಿಳಿಸಿ ಎಂದ ಫ್ಯಾನ್ಸ್‌ title=

Jawan : ಕಿಂಗ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್‌ ಮೂಲಕವೇ ಸಖತ್‌ ಸೌಂಡ್‌ ಮಾಡಿದ್ದ ಈ ಸಿನಿಮಾ ಇದೀಗ ಟಿಕೆಟ್‌ ಬುಕಿಂಗ್‌ ವಿಚಾರವಾಗಿ ಭರ್ಜರಿ ಹವಾ ಮಾಡುತ್ತಿದೆ. ಈಗಾಗಲೇ ಈ ಚಿತ್ರದ ಅಡ್ವಾನ್ಸ್‌ ಬುಕಿಂಗ್‌ ಪ್ರಾರಂಭವಾಗಿದ್ದು, ಒಂದು ಟಿಕೆಟ್‌ ಮೊತ್ತ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಹೌದು ಬಹುನಿರೀಕ್ಷಿತ ಜವಾನ್‌ ಸಿನಿಮಾದ ಮುಂಗಡ ಟಿಕೆಟ್‌ ಬುಕಿಂಗ್‌ ಶುಕ್ರವಾರದಿಂದಲೇ ಆರಂಭವಾಗಿತ್ತು. ಟ್ರೇಲರ್‌ ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು ಇದೀಗ ಟಿಕೆಟ್‌ ಬೆಲೆ‌ ಕೇಳಿ ತಲೆಕೆಡಿಸಿಕೊಂಡಿದ್ದಾರೆ. 

ಇದನ್ನೂ ಓದಿ-ʼಜೈಲರ್ʼ ರಜಿನಿಗೆ ನಿರ್ಮಾಪಕರಿಂದ BMW ಕಾರ್‌ ಗಿಫ್ಟ್‌..! ಬೆಲೆ ಎಷ್ಟು ಕೋಟಿ ಗೊತ್ತಾ..?

ಸದ್ಯ ಈ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆ ಪ್ರಾರಂಭವಾಗಿದ್ದು, ಬಾಲಿವುಡ್‌ನಲ್ಲಿ ಹಿಂದೆಂದೂ ಯಾವ ಸಿನಿಮಾ ಟಿಕೆಟ್‌ಗೂ ಇರದ ಬೆಲೆ ಈ ಸಿನಿಮಾ ಟಿಕೆಟ್‌ಗಿದೆ. ಕೆಲವರು ಇದನ್ನು ಕೇಳಿ ಶಾಕ್‌ ಆದರೆ ಇನ್ನು ಕೆಲವರು ಎಷ್ಟಾದರೂ ಇರಲಿನಾವು ಸಿನಿಮಾ ನೋಡೇ ನೋಡುತ್ತೇವೆ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. 

ಜವಾನ್‌ ಸಿನಿಮಾದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಶುಕ್ರವಾರ, ಟ್ವಿಟರ್‌ನಲ್ಲಿ  ಚಿತ್ರದ ಮುಂಗಡ ಬುಕಿಂಗ್ ಅನ್ನು ಪ್ರಕಟಿಸಿದೆ. ಮುಂಬೈನಲ್ಲಿ 2300 ರೂ. ಆದರೆ ದೆಹಲಿಯಲ್ಲಿ  2400 ರೂ. ಟಿಕೆಟ್ ದರವಿದೆ. ಇನ್ನು ಈಗಾಗಲೇ ಸಾಕಷ್ಟು ಟಿಕೆಟ್‌ಗಳು ಮಾರಾಟವಾಗಿದ್ದು, ಟಿಕೆಟ್‌ ಬೆಲೆ ಏರಿಕೆ ನೋಡಿ ಕೆಲವರು ಸಿನಿಮಾ  ನೋಡಬೇಕೋ ಬೇಡವೋ ಎಂದು ಕನ್‌ಪ್ಯೂಸ್‌ ಆಗಿ ಕಾಮೆಂಟ್‌ ಮಾಡುತ್ತಿದ್ದಾರೆ.  

ಇದನ್ನೂ ಓದಿ-ನಟಿ ರಮ್ಯಾ ಕೃಷ್ಣನ್ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News