ಬಿಗ್ ಬಾಸ್ ಶೋನಿಂದ ದೊರೆತ ಸಂಭಾವನೆ ಎಷ್ಟು?- ಬಹಿರಂಗಪಡಿಸಿದ ನೀತು ವನಜಾಕ್ಷಿ

Neethu Vanajakshi Remuneration: ಮಂಗಳಮುಖಿಯರ ಬಗ್ಗೆ ಸಮಾಜದಲ್ಲಿದ್ದ ಕೆಟ್ಟ ಯೋಚನೆಗಳನ್ನು ತೊಡೆದು ಹಾಕಿ, ಅವರಿಗೂ ಉತ್ತಮ ಸ್ಥಾನವನ್ನು ನೀಡಬೇಕೆಂದು ಹೋರಾಡುತ್ತಾ, ತನ್ನ ಮಾತಿನಂತೆ ನಡೆಯುತ್ತಿರುವ ನೀತು ವನಜಾಕ್ಷಿ ಅವರು ನಿಜಕ್ಕೂ ಮಾದರಿ ವ್ಯಕ್ತಿ.

Written by - Bhavishya Shetty | Last Updated : Nov 29, 2023, 07:39 PM IST
    • ಬಿಗ್ ಬಾಸ್ ಮನೆಯಿಂದ ಹೊರಬಂದ ನೀತು ವನಜಾಕ್ಷಿ
    • ಸಂಭಾವನೆ ಬಗ್ಗೆ ಬಹಿರಂಗಪಡಿಸಿದ ನೀತು
    • ಕ್ಯಾಪ್ಟನ್ ಆಗಿ ಆಯ್ಕೆಗೊಂಡಿದ್ದರೂ ಸಹ ನೀತು ಎಲಿಮಿನೇಟ್
ಬಿಗ್ ಬಾಸ್ ಶೋನಿಂದ ದೊರೆತ ಸಂಭಾವನೆ ಎಷ್ಟು?- ಬಹಿರಂಗಪಡಿಸಿದ ನೀತು ವನಜಾಕ್ಷಿ  title=
Neetu Vanajakshi

Neethu Vanajakshi Remuneration: ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ನೀತು ವನಜಾಕ್ಷಿ ತಮಗೆ ಸಿಕ್ಕ ಅತಿ ಅಮೂಲ್ಯವಾದ ಸಂಭಾವನೆ ಬಗ್ಗೆ ಮಾಧ್ಯಮದ ಮುಂದೆ ಬಹಿರಂಗವಾಗಿ ಹೇಳಿದ್ದಾರೆ. ಅಷ್ಟಕ್ಕೀ ನೀತು ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ,

ಇದನ್ನೂ ಓದಿ:  ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋದು ಟೀಂ ಇಂಡಿಯಾದ ಈ ಪ್ರಮುಖ: ವಿರಾಟ್, ರೋಹಿತ್’ಗೂ ಸಿಗಲ್ಲ ಇಷ್ಟು ಸಂಬಳ!

ಮಂಗಳಮುಖಿಯರ ಬಗ್ಗೆ ಸಮಾಜದಲ್ಲಿದ್ದ ಕೆಟ್ಟ ಯೋಚನೆಗಳನ್ನು ತೊಡೆದು ಹಾಕಿ, ಅವರಿಗೂ ಉತ್ತಮ ಸ್ಥಾನವನ್ನು ನೀಡಬೇಕೆಂದು ಹೋರಾಡುತ್ತಾ, ತನ್ನ ಮಾತಿನಂತೆ ನಡೆಯುತ್ತಿರುವ ನೀತು ವನಜಾಕ್ಷಿ ಅವರು ನಿಜಕ್ಕೂ ಮಾದರಿ ವ್ಯಕ್ತಿ. ಬಿಗ್ ಬಾಸ್ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದರು. ಆದರೆ ಎರಡನೇ ಬಾರಿ ತಮ್ಮ ಕ್ಯಾಪ್ಟನ್ಸಿ ಅಧಿಕಾರವನ್ನು ಅನುಭವಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ, ಎಲಿಮಿನೇಶನ್.

ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆಗೊಂಡಿದ್ದರೂ ಸಹ ನೀತು ಎಲಿಮಿನೇಟ್ ಆಗಿದ್ರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮಾತನಾಡಿದ ಅವರು, ಜನರು ತೋರಿದ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟಿವಿ9 ವಾಹಿನಿ ನಡೆಸಿದ ಸಂದರ್ಶನದಲ್ಲಿ ಬಿಗ್ ಬಾಸ್ ಮನೆಯಲ್ಲಿ ತನ್ನ ಅನುಭವ, ಜನರು ತೋರಿದ ಪ್ರೀತಿ ಹಾಗೂ ಅಲ್ಲಿ ಸಿಕ್ಕಂತಹ ಸಂಭಾವನೆ ಬಗ್ಗೆ ಮನಬಿಚ್ಚಿ ನೀತು ಮಾತನಾಡಿದ್ದಾರೆ.

ಇದನ್ನೂ ಓದಿ: Viral Video: ನೀರೆಯರು ನಾಚುವಂತ ಮೇಕಪ್… ಬ್ಯೂಟಿಶಿಯನ್ ಕಪಿಯ ವಿಡಿಯೋ ಇಲ್ಲಿದೆ

ಸಂದರ್ಶನದ ವೇಳೆ ಪತ್ರಕರ್ತೆ, ಬಿಗ್ ಬಾಸ್ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಎಷ್ಟು ಸಂಭಾವನೆ ಪಡೆದಿದ್ದೀರಿ ಎಂದು ಪ್ರಶ್ನೆಯಲ್ಲಿ ಕೇಳಿದ್ದಾರೆ. ಇದಕ್ಕೆ ನಯವಾಗಿ ಮತ್ತು ಜಾಣ್ಮೆಯಿಂದ ಉತ್ತರಿಸಿದ ನೀತು, “ಸಂಭಾವನೆಯಾಗಿ ನನಗೆ ಸಿಕ್ಕಿರೋದು ಜನರ ಪ್ರೀತಿ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News