ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ ನಟಸಿಂಹ ಬಾಲಕೃಷ್ಣ ʼಭಗವಂತ್‌ ಕೇಸರಿʼ ಟೀಸರ್‌..!

Bhagavath Kesari Teaser : ತೆಲುಗು ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾ ಭಗವಂತ್‌ ಕೇಸರಿ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ. ಬಾಲಯ್ಯ ಹೊಸ ಅವತಾರಕ್ಕೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Written by - Krishna N K | Last Updated : Jun 10, 2023, 12:13 PM IST
  • ನಟ ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾ ಭಗವಂತ್‌ ಕೇಸರಿ ಚಿತ್ರದ ಟೀಸರ್‌ ರಿಲೀಸ್‌.
  • ಭಗವಂತ್‌ ಕೇಸರಿ ಚಿತ್ರದ ಟೀಸರ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ.
  • ಅನಿಲ್ ರಾವಿಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ಕಾಜಲ್‌ ಅಗರ್ವಾಲ್‌, ಶ್ರೀಲೀಲಾ ನಟಿಸಿದ್ದಾರೆ.
ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ ನಟಸಿಂಹ ಬಾಲಕೃಷ್ಣ ʼಭಗವಂತ್‌ ಕೇಸರಿʼ ಟೀಸರ್‌..! title=

NBK Bhagavath Kesari movie : ಟಾಲಿವುಡ್‌ ನಟಸಿಂಹ ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಅನಿಲ್ ರಾವಿಪುಡಿ ಕಾಂಬಿನೇಷನ್‌ನ ʼಭಗವಂತ ಕೇಸರಿʼ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇಂಟರ್‌ನೆಟ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಬಾಲಯ್ಯ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡುವ ಮೂಲಕ ಬರ್ತ್‌ಡೇ ವಿಶ್‌ ಮಾಡಿದೆ.

ಹೌದು.. ಬಾಲಯ್ಯ ಅಂದ್ರೆ ಅಲ್ಲಿ ಅಬ್ಬರ ಇರಲೇಬೇಕು. ಇದೀಗ ಅವರ 108ನೇ ಸಿನಿಮಾ ಭಗವಂತ್‌ ಕೇಸರಿ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಅವರ ಸ್ಟೈಲ್, ಹೈ ಓಲ್ಟೇಜ್ ಆಕ್ಷನ್ ಡ್ರಾಮಾ ಸೂಪರ್‌ ಆಗಿದೆ. ಟೀಸರ್‌ ನೋಡಿದ್ರೆ, ಬಾಲಯ್ಯ ಮೂಡ್‌ಗೆ ಅನಿಲ್ ರವಿಪುಡಿ ಸಂಪೂರ್ಣವಾಗಿ ಬದಲಾಗಿದ್ದಾರೆ ಅಂತ ಅರ್ಥವಾಗುತ್ತದೆ. ಅಲ್ಲದೆ, ಟೀಸರ್‌ನಲ್ಲಿ ಕೊಟ್ಟ ಫಿನಿಶಿಂಗ್ ಟಚ್ ಮಾತ್ರ ಸಖತ್ತಾಗಿದೆ.

 

ಇದನ್ನೂ ಓದಿ: Gujarati Movie: ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನಿಮಾ; ʼರಾಯರು ಬಂದರು ಮಾವನ ಮನೆಗೆʼ...!

ಟೀಸರ್‌ ಆರಂಭದಲ್ಲಿ ಬರುವ ʼರಾಜ ತನ್ನ ಮುಂದಿರುವ ಜನರ ಗುಂಪುನನ್ನು ತೋರಿಸುತ್ತಾನೆ, ಆದ್ರೆ, ಮೊಂಡಿತನ ಇರುವವನು ತನ್ನ ಗುಂಡಿಯನ್ನು ತೋರಿಸುತ್ತಾನೆʼ ಎನ್ನುವ ಡೈಲಾಗ್‌ ಸೂಪರ್‌ ಆಗಿದೆ. ಅಲ್ಲದೆ, ಬಾಲಯ್ಯ ಸ್ಟೈಲ್, ಹಿಂದಿ ಡೈಲಾಗ್‌, ಆ್ಯಕ್ಷನ್, ಮಾಸ್ ಲುಕ್‌, ನೋಡಿದ್ರೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ.

ಅಲ್ಲದೆ, ಸಂಗೀತ ನಿರ್ದೇಶಕ ಥಮನ್ ಬ್ಯಾಕ್ ಗ್ರೌಂಡ್‌ ಸ್ಕೋರ್ ಟೀಸರ್‌ಗೆ ಪ್ಲಸ್‌ ಪಾಯಿಂಟ್‌. ಅನಿಲ್‌ ರಾವಿಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ಶೈನ್‌ ಸ್ಕ್ರೀನ್ಸ್‌ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್‌ ಮತ್ತು ಶ್ರೀಲೀಲಾ ಮುಖ್ಯಭೂಮಿಕೆ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News