ಸದ್ಗುರುಗಳಿಂದ ದೀಕ್ಷೆ ಪಡೆದ ಮಿಲ್ಕಿ ಬ್ಯೂಟಿ: ತಮನ್ನಾ ಹಿಂಗ್ಯಾಕೆ ಮಾಡಿದ್ರು?

Tamannaah Bhatia: ಭಾರತದ ನಟಿ ತಮನ್ನಾ ಭಾಟಿಯಾ ಆಧ್ಯಾತ್ಮಿಕ ಗುರುಗಳು ಹಾಗೂ ಚಿಂತಕರಾಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರಿಂದ  ದೀಕ್ಷೆ ಪಡೆದಿದ್ದಾರೆ. ಈ ನಟಿ ಹೀಗ್ಯಾಕೆ ಮಾಡಿದ್ದಾರೆ? ಇದಕ್ಕೆ ಕಾರಣವಾದರೂ ಏನು? ಇನ್ಮುಂದೆ ಸಿನಿಮಾರಂಗದಿಂದ ದೂರವಿರುತ್ತಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Jan 29, 2024, 09:01 AM IST
  • ತಮನ್ನಾ ಭಾಟಿಯಾ ಬಹುಭಾಷಾ ನಟಿ ಮಾತ್ರವಲ್ಲದೆ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು.
  • ತಮನ್ನಾ ತಮಿಳುನಾಡಿನ ಕೊಯಮುತ್ತೂರ್‌ನಲ್ಲಿರುವ ಸದ್ಗುರುಗಳ 'ಈಶಾ ಯೋಗ ಸೆಂಟರ್ ನಲ್ಲಿ ಯೋಗ ತರಬೇತಿ ಪಡೆಯುತ್ತಿದ್ದು, ಇದೀಗ ಈ ನಟಿ ತಮ್ಮ ಆಧ್ಯಾತ್ಮಿಕ ಜರ್ನಿ ಬಗ್ಗೆ ಮಾತನಾಡಿದ್ದಾರೆ.
  • ಬಹುಭಾಷಾ ತಾರೆ ತಮನ್ನಾ ಸದ್ಗುರುಗಳಿಂದ 'ಶಾಂಭವಿ ಮಹಾಮುದ್ರಾ ಕ್ರಿಯಾ'ಗೆ ಇನಿಶಿಯೇಟ್ ಆಗಿದ್ದು, ಸದ್ಯ ಈ ನಟಿ ಶಾಂಭವಿಯನ್ನು ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸದ್ಗುರುಗಳಿಂದ ದೀಕ್ಷೆ ಪಡೆದ ಮಿಲ್ಕಿ ಬ್ಯೂಟಿ: ತಮನ್ನಾ ಹಿಂಗ್ಯಾಕೆ ಮಾಡಿದ್ರು? title=

Actress Tamannaah Bhatia Practising Yoga Mudras: ದಕ್ಷಿಣ ಭಾರತದ ನಟಿ ತಮನ್ನಾ ಭಾಟಿಯಾ ಬಹುಭಾಷಾ ನಟಿ ಮಾತ್ರವಲ್ಲದೆ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ನಟಿ ತಮನ್ನಾ ಭಾರತದಲ್ಲಿ ಮಾತ್ರವಲ್ಲದೇ, ಇವರ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ. ಇನ್ನೂ ಆಧ್ಯಾತ್ಮಿಕ ಗುರುಗಳು ಹಾಗೂ ಚಿಂತಕರಾಗಿರುವ ಸದ್ಗುರು ಜಗ್ಗಿ ವಾಸುದೇವ್  ಅವರಿಗಿರುವ ಫಾಲೋವರ್ಸ್‌ನಲ್ಲಿ ತಮನ್ನಾ ಕೂಡ ಒಬ್ಬರು. ಇದೀಗ ಈ ನಟಿ ಆಧ್ಯಾತ್ಮಿಕ ಗುರು 'ಸದ್ಗುರು' ಖ್ಯಾತಿಯ ಜಗ್ಗಿ ವಾಸುದೇವ್‌ರಿಂದ ದೀಕ್ಷೆ ಪಡೆದಿದ್ದಾರೆ. 

ಹೌದು.. ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾ ಕಳೆದ ಹಲವಾರು ವರ್ಷಗಳಿಂದ ಕೊಯಮುತ್ತೂರಿನಲ್ಲಿರುವ ಈಶಾ ಯೋಗಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ಅವರು ಸದ್ಗುರುಗಳ ಜತೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅದೇ ದಾರಿಯಲ್ಲಿ ಹಲವಾರು ಕೋರ್ಸುಗಳ ಮೂಲಕ ಸಾಗುತ್ತಿದ್ದಾರೆ. ಈ ನಟಿ ತಮಿಳುನಾಡಿನ ಕೊಯಮುತ್ತೂರ್‌ನಲ್ಲಿರುವ ಸದ್ಗುರುಗಳ 'ಈಶಾ ಯೋಗ ಸೆಂಟರ್ ನಲ್ಲಿ ಯೋಗ ತರಬೇತಿ ಪಡೆಯುತ್ತಿದ್ದು, ಇದೀಗ ಈ ನಟಿ ತಮ್ಮ ಆಧ್ಯಾತ್ಮಿಕ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Shruti Hassan: ಕಮಲ್‌ ಹಾಸನ್‌ ಪುತ್ರಿ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗೋದು ಫಿಕ್ಸ್‌!

ಬಹುಭಾಷಾ ತಾರೆ ತಮನ್ನಾ ಸದ್ಗುರುಗಳಿಂದ 'ಶಾಂಭವಿ ಮಹಾಮುದ್ರಾ ಕ್ರಿಯಾ'ಗೆ ಇನಿಶಿಯೇಟ್ ಆಗಿದ್ದು, ಸದ್ಯ ಈ ನಟಿ ಶಾಂಭವಿಯನ್ನು ಪ್ರಾಕ್ಟಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಸ್ವತಃ ನಟಿ ತಮನ್ನಾನೇ  ಮಾತನಾಡಿದ್ದು, "ನಾನು  ಶಾಂಭವಿ ಮಹಾಮುದ್ರಾ ಕ್ರಿಯಾಗೆ ಸದ್ಗುರುಗಳಿಂದ ಇನಿಶಿಯೇಟ್ ಆಗಿರುವೆ. ಈ ಕೋರ್ಸ್ ನನಗೆ ಹೊಸ ಅನುಭವ ನೀಡಿದೆ. ನಾನು ಇದನ್ನು ಪ್ರಾಕ್ಟಿಸ್ ಮಾಡದೇ ಇರಲಾರೆ. ನಿಜವಾಗಿಯೂ ನನ್ನ ಮನಸ್ಸಿಗೆ ಶಾಂಭವಿ ಹೊಸ ಹೊಳಪು, ಶಾಂತಿಯನ್ನು ನೀಡಿದೆ" ಎಂದು ಹೇಳಿದ್ದಾರೆ.

ಸೌತ್‌ ನಟಿ ತಮ್ಮನಾ ಮಾತ್ರವಲ್ಲದೆ ನಟಿ ಸಮಂತಾ, ಕಾಜಲ್ ಅಗರವಾಲ್, ಹರಿಪ್ರಿಯಾ, ಕಂಗನಾ ರಣಾವತ್ ಸೇರಿದಂತೆ ಹಲವಾರು ನಟಿಯರು ಸದ್ಗರುಗಳ ಅನುಯಾಯಿಗಳು. ಕೇವಲ ನಟಿಮಣಿಗಳು ಮಾತ್ರವಲ್ಲದೆ, ನಟ ವಿಜಯ್, ವಿಜಯ್ ದೇವರಕೊಂಡ, ರಣವೀರ್ ಸಿಂಗ್, ಅನುಪಮ್ ಖೇರ್, ಶಾರುಖ್ ಖಾನ್, ನಾನಿ ಸೇರಿದಂತೆ ಹಲವಾರು ನಟರೂ ಸಹ ಸದ್ಗುರುಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿ,  ಫಾಲೋ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News