Mahesh Babu : ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!

ಸೂಪರ್ ಸ್ಟಾರ್ ಮಹೇಶ್‌ ಬಾಬು ಅವರ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಮೂರು ದುರಂತ ಘಟನೆಗಳು ಸಂಭವಿಸಿವೆ. ಕೆಲವು ತಿಂಗಳ ಹಿಂದೆ ಮಹೇಶ್‌ ಬಾಬು ಅವರ ಅಣ್ಣ ರಮೇಶ್ ಬಾಬು ನಿಧನರಾಗಿದ್ದರು. ಇದಾದ ನಂತರ ಅವರ ತಾಯಿ ಇಂದಿರಾ ದೇವಿ, ಆ ನಂತರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಕೂಡ ಸಾವನ್ನಪ್ಪಿದ್ದರು. ಇದೀಗ ಈ ಸರಣಿ ಸಾವುಗಳಿಗೆ ಮಹೇಶ್ ಬಾಬು ಅವರ ಜಾತಕ ಕಾರಣ ಎಂದು ಖ್ಯಾತ ಜೋಷಿತಿಯೊಬ್ಬರು ಹೇಳಿದ್ದಾರೆ.

Written by - Krishna N K | Last Updated : Dec 25, 2022, 12:59 PM IST
  • ಮಹೇಶ್‌ ಬಾಬು ಅವರ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಮೂರು ದುರಂತ ಘಟನೆಗಳು ಸಂಭವಿಸಿವೆ.
  • ಈ ಸರಣಿ ಸಾವುಗಳಿಗೆ ಮಹೇಶ್ ಬಾಬು ಅವರ ಜಾತಕ ಕಾರಣ ಎಂದು ಖ್ಯಾತ ಜೋಷಿತಿಯೊಬ್ಬರು ಹೇಳಿದ್ದಾರೆ.
  • ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಹೇಳಿರುವುದು ಎಷ್ಟರ ಮಟ್ಟಿಗೆ ನಿಜ ಎಂಬುವುದೇ ಪ್ರಶ್ನಾರ್ಥಕವಾಗಿದೆ.
Mahesh Babu : ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..! title=

Mahesh Babu's Astrology : ಸೂಪರ್ ಸ್ಟಾರ್ ಮಹೇಶ್‌ ಬಾಬು ಅವರ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಮೂರು ದುರಂತ ಘಟನೆಗಳು ಸಂಭವಿಸಿವೆ. ಕೆಲವು ತಿಂಗಳ ಹಿಂದೆ ಮಹೇಶ್‌ ಬಾಬು ಅವರ ಅಣ್ಣ ರಮೇಶ್ ಬಾಬು ನಿಧನರಾಗಿದ್ದರು. ಇದಾದ ನಂತರ ಅವರ ತಾಯಿ ಇಂದಿರಾ ದೇವಿ, ಆ ನಂತರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಕೂಡ ಸಾವನ್ನಪ್ಪಿದ್ದರು. ಇದೀಗ ಈ ಸರಣಿ ಸಾವುಗಳಿಗೆ ಮಹೇಶ್ ಬಾಬು ಅವರ ಜಾತಕ ಕಾರಣ ಎಂದು ಖ್ಯಾತ ಜೋಷಿತಿಯೊಬ್ಬರು ಹೇಳಿದ್ದಾರೆ.

ಈ ದುರಂತ ಘಟನೆಗಳ ಸರಣಿಯ ಹಿಂದೆ ಯಾವುದಾದರೂ ಜಾತಕ ಕಾರಣಗಳಿವೆಯೇ? ಎಂದು ಇತ್ತೀಚೆಗಷ್ಟೇ ವೇಣು ಸ್ವಾಮಿ ಎಂಬ ಸೆಲೆಬ್ರಿಟಿ ಜ್ಯೋತಿಷಿಯನ್ನು ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಅವರು ನಡೆದ ಸಾವುಗಳಿಗೆಲ್ಲಾ ಮಹೇಶ್ ಬಾಬು ಅವರ ಜಾತಕವೇ ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ. 2016-17ರ ವರೆಗೆ ಎಲ್ಲ ಕಾರ್ಯಕ್ರಮಗಳನ್ನು ಅವರ ಕೈಯಿಂದಲೇ ಮಾಡಲಾಗಿದೆ. ಪದ್ಮಾಲಯ ಸ್ಟುಡಿಯೋದಲ್ಲಿ ಹೆಚ್ಚಾಗಿ ನಾನು ಇದ್ದೆ ಎಂದು ವೇಣು ಸ್ವಾಮಿ ಹೇಳಿದರು.

ಇದನ್ನೂ ಓದಿ: ಗಂಡುಮೆಟ್ಟಿದ ನಾಡಿನಲ್ಲಿ ʼಗಜʼ : ಹುಬ್ಬಳ್ಳಿಯಲ್ಲಿಂದು ರಿಲೀಸ್‌ ಆಗಲಿದ್ದಾಳೆ ʼಪುಷ್ಪಾವತಿʼ..!

ಅಲ್ಲದೆ, ವಿಜಯನಿರ್ಮಲ ಅವರು ವಿನಾಯಕ ಚವತಿಯಂದು ಜಾತಕ ನೋಡುವಂತೆ ಕೇಳಿದ್ದರು. 2020ರ ನಂತರ ಈ ಮನೆಯಲ್ಲಿ ಸರಣಿ ಸಾವು ಸಂಭವಿಸಲಿದೆ ಎಂದು ಹೇಳಿದ್ದಾಗಿ ವೇಣು ಸ್ವಾಮಿ ಬಹಿರಂಗಪಡಿಸಿದರು. ಮಹೇಶ್ ಬಾಬು ಅವರ ಜಾತಕಕ್ಕೆ ತಕ್ಕಂತೆ ಶನಿ ಮತ್ತು ಗುರು ಬದಲಾಗುತ್ತಿದ್ದು, ಆ ಪರಿಣಾಮ ತಂದೆ ಹಾಗೂ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವೇಣು ಸ್ವಾಮಿ ತಿಳಿಸಿದರು.

ಇನ್ನು ತಂದೆ, ತಾಯಿ, ಅಣ್ಣನ ಕಳೆದುಕೊಂಡಿರುವ ಮಹೇಶ್‌ ಬಾಬು ಹಾಗೂ ಕುಟುಂಬ ನೋವಿನಲ್ಲಿ ಮುಳುಗಿದೆ. ಮಹೇಶ್‌ ಬಾಬು ಅಪ್ಪ ಅಮ್ಮನ ನೆನಪಿನ ನೋವಿನಲ್ಲಿದ್ದಾರೆ. ಇದೀಗ ಅವರ ಪೋಷಕರ ಸಾವಿಗೆ ಅವರ ಜಾತಕವೇ ಕಾರಣ ಎಂದು ಜ್ಯೋತಿಷಿ ವೇಣುಸ್ವಾಮಿ ಹೇಳಿರುವುದು ಎಷ್ಟರ ಮಟ್ಟಿಗೆ ನಿಜ ಎಂಬುವುದೇ ಪ್ರಶ್ನಾರ್ಥಕವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News