KVN Productions: ಕೆವಿಎನ್ ಪ್ರೊಡಕ್ಷನ್ಸ್ ಹೆಮ್ಮೆಯಿಂದ "ಜನ ನಾಯಗನ್" ಸಿನಿಮಾದ ಶೀರ್ಷಿಕೆ ಹಾಗೂ ಫರ್ಸ್ಟ್ ಲುಕ್ ಅನ್ನು ಅನಾವರಣ ಮಾಡಿದೆ, ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿದ್ದು, ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಳಪತಿ ವಿಜಯ್ ಅವರ ʻ69ʼ ನೆಯ ಬಹುನಿರೀಕ್ಷಿತ ಚಿತ್ರದ ಫರ್ಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಇಂದು ಅನಾವರನ ಮಾಡಲಾಗಿದೆ, ಇದು ನಟ ವಿಜಯ್ ಅವರ ಐಕಾನಿಕ್ ವೃತ್ತಿಜೀವನದ ಅಂತಿಮ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿ, ಎಚ್. ವಿನೋದ್ ನಿರ್ದೇಶಿಸುತ್ತಿರುವ ಈ ಚಿತ್ರವು ವಿಜಯ್ ಅವರ ಕೊನೆಯ ಸಿನಿಮಾ. ಈ ಸಿನಿಮಾದ ಮೂಲಕ ದಳಪತಿವಿಜಯ್ ಅವರ ಸಿನಿಮಾ ಜರ್ನಿಗೆ ಇದು ಭವ್ಯ ಮತ್ತು ಭಾವನಾತ್ಮಕ ಸೇರ್ಪಡೆಯಾಗಲಿದೆ.
ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅಭಿಮಾನಿಗಳಿಗೆ ಈ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಒಳ್ಳೆಯ ಕಥೆಗಳನ್ನು ಆಯ್ದುಕೊಂಡು ತನ್ನ ಸಿನಿಮಾಗಳ ಮೂಲಕ ಜನರ ವಿಶ್ವಾಸವನ್ನು ಈಗಾಗಲೇ ಗೆದ್ದುಕೊಂಡಿದ್ದು, ಈ ಸಿನಿಮಾ ಕೂಡ ನಿರೀಕ್ಷಿಸಿದ್ದಕ್ಕಿಂತಾ ಚೆನ್ನಾಗಿ ಮೂಡಿ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನೂ, ವಿಜಯ್ ಅವರ ಕೊನೆಯ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆ ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ, ತಮ್ಮ ನೆಚ್ಚಿನ ನಟನ ಸಿನಿಮಾ ಪೋಸ್ಟರ್‌ಗೆ ಕಾಮೆಂಟ್‌ಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ. ಇನ್ನೂ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ ಇದಾಗಿರುವ ಕಾರಣ, ಸಿನಿಮಾ ಬಾಕ್ಸ್ ಆಫಿಸ್ ಧೂಳೆಬ್ಬಿಸುವುದು ಕನ್‌ಫರ್ಮ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕೇವಲ ಅಭಿಮಾನಿಗಳು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡ ಈ ಸಿನಿಮಾಗೆ ಸಿಕ್ಕಾಪಟ್ಟೆ ಸಾಥ್ ಕೊಡುತ್ತಿದ್ದಾರೆ. ಸಿನಿಮಾದ ಫರ್ಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ದಳಪತಿ ಅವರ ಕೊನೆಯ ಸಿನಿಮಾಗೆ ಫುಲ್ ಸಪೋರ್ಟ್ ಕೊಡುತ್ತಿದ್ದಾರೆ.
We call him #JanaNayagan #ஜனநாயகன் ♥️#Thalapathy69FirstLook#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu @Selva_ArtDir… pic.twitter.com/t16huTvbqc
— KVN Productions (@KvnProductions) January 26, 2025
We call him #JanaNayagan ♥️#Thalapathy69FirstLook
Dearest @actorvijay sir #HVinoth @KvnProductions @LohithNK01 @Jagadishbliss pic.twitter.com/LzhjOwMx28
— Anirudh Ravichander (@anirudhofficial) January 26, 2025
We call him #JanaNayagan ♥️#Thalapathy69FirstLook#Thalapathy @actorvijay sir #HVinoth @KvnProductions @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu @Selva_ArtDir… pic.twitter.com/rSwWpRcF5e
— Pooja Hegde (@hegdepooja) January 26, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.