ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?

Kichha Sudeep: ಕಿಚ್ಚನ ಕಿಚನ್‌ನಲ್ಲಿ ರುಚಿಕರವಾದ ಅಡುಗೆಯನ್ನು ಸೆಲೆಬ್ರೆಟಿಗಳು ಸವಿಯುತ್ತಲೇ ಇರುತ್ತಾರೆ. ಇದೀಗ ಆ ಸಾಲಿಗೆ ನಟ ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಗೂ ನಿರ್ದೇಶಕ ನಂದಕಿಶೋರ್‌ ಸೇರಿದ್ದಾರೆ. 

Written by - Chetana Devarmani | Last Updated : Apr 26, 2022, 10:51 AM IST
  • ಕಿಚ್ಚನ ಕಿಚನ್‌ನಲ್ಲಿ ರುಚಿಕರವಾದ ಅಡುಗೆ
  • ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌!
  • ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?
ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?  title=
ಡಾಲಿ ಧನಂಜಯ್

ಕಿಚ್ಚನ ಅಭಿನಯಕ್ಕೆ ಮನಸೋಲದವರಿಲ್ಲ. ಸುದೀಪ್‌ ಕೈರುಚಿಗೆ ಬಾಯಿಚಪ್ಪರಿಸದವರಿಲ್ಲ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೇವಲ ಸಿನಿಮಾದಲ್ಲಿ ನಟನೆಯಲ್ಲಿ ಮಾತ್ರವಲ್ಲ ಪಾಕಶಾಲೆಯಲ್ಲೂ ಪ್ರವೀಣರು. ಆಗಾಗ ತಮ್ಮ ಪ್ರೀತಿ ಪಾತ್ರರಿಗೆ ಅಡುಗೆ ಮಾಡಿ ಬಡಿಸಿದ್ದಾರೆ ಕಿಚ್ಚ. ಕಿಚ್ಚನ ಕಿಚನ್‌ನಲ್ಲಿ ರುಚಿಕರವಾದ ಅಡುಗೆಯನ್ನು ಸೆಲೆಬ್ರೆಟಿಗಳು ಸವಿಯುತ್ತಲೇ ಇರುತ್ತಾರೆ. ಇದೀಗ ಆ ಸಾಲಿಗೆ ನಟ ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಗೂ ನಿರ್ದೇಶಕ ನಂದಕಿಶೋರ್‌ ಸೇರಿದ್ದಾರೆ. ಸುದೀಪ್ ಈ ಮೂವರಿಗೂ ವಿಶೇಷ ಟ್ರೀಟ್ ಕೊಟ್ಟಿದ್ದಾರೆ.  ತಮ್ಮ ಕೈಯ್ಯಾರೆ ಟೆಸ್ಟಿ ಅಡುಗೆ ಮಾಡಿ ಬಡಿಸಿದ್ದಾರೆ.  

ಇದನ್ನೂ ಓದಿ: ಮಲಬಾರ್ ಗೋಲ್ಡ್ ಕಂಪನಿ ವಿರುದ್ಧ ಹಿಂದೂ ಸಂಘಟನೆ ಆಕ್ರೋಶ: ಚಿನ್ನ ಖರೀದಿಸದಂತೆ ಎಚ್ಚರಿಕೆ

ನಟ ಸುದೀಪ್ ಮನೆಯಲ್ಲಿ ಡಾಲಿ ಧನಂಜಯ್, ವಾಸುಕಿ ವೈಭವ್ ಹಾಗೂ ನಂದ ಕಿಶೋರ್ ಒಟ್ಟಿಗೆ ಸೇರಿದ್ದಾರೆ. ಇವರಿಗೆ ಸ್ವತಃ ಕಿಚ್ಚ ವಿಶೇಷ ಆಮಂತ್ರಣ ನೀಡಿ, ಈ ಟ್ರೀಟ್‌ ಕೊಟ್ಟಿದ್ದಾರೆ. ಸುದೀಪ್ ಈ ವಿಶೇಷ ಟ್ರೀಟ್ ಕೊಟ್ಟಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 

 

 

ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಾಕಿಕೊಂಡಿರುವ ನಟ ಡಾಲಿ ಧನಂಜಯ್‌, "ಯೆಸ್ ಸರ್, ಇಬ್ಬರೂ ಸಂಭ್ರಮಿಸೋಣ. ಆಮಂತ್ರಣ ನೀಡಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಚರ್ಚೆ ನಡೆದಿದೆ. ನಿಮ್ಮ ಕೈ ಅಡುಗೆ ಚೆನ್ನಾಗಿತ್ತು." ಎಂದು ಹೇಳಿದ್ದಾರೆ.  

ಇದನ್ನೂ ಓದಿ: 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್

ಧನಂಜಯ್, ವಾಸುಕಿ ಹಾಗೂ ನಂದಕಿಶೋರ್ ಜೊತೆ ನಿರ್ಮಾಪಕ ಜಾಕ್ ಮಂಜು ಕೂಡ ಸುದೀಪ್‌ ಜೊತೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದು ಕೇವಲ ಟ್ರೀಟ್ ಮಾತ್ರಾನಾ ಅಥವಾ ಇವರೆಲ್ಲಾ ಸೇರಿ ಹೊಸತೇನಾದರೂ ಮಾಡುತ್ತಿದ್ದಾರಾ? ಅನ್ನುವ ಪ್ರಶ್ನೆಯಂತೂ ಕಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News