Kichcha Sudeep: ರಾಜಕೀಯ ಪ್ರಚಾರದ ನಡುವೆ ಮುಂದಿನ ಸಿನಿಮಾ ಬಗ್ಗೆ ಬಿಗ್ ಅನೌನ್ಸ್‌ಮೆಂಟ್ ನೀಡಿದ ಕಿಚ್ಚ ಸುದೀಪ್

Kichcha Sudeep New film: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಈಗ ರಾಜಕೀಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ತಮ್ಮ ಹೊಸ ಸಿನಿಮಾದ ಅಧಿಕೃತ ಮಾಹಿತಿಯನ್ನ ಇದೀಗ ಎಲ್ಲರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Apr 29, 2023, 02:40 PM IST
  • ಹೊಸ ಸಿನಿಮಾದ ಅಧಿಕೃತ ಮಾಹಿತಿಯನ್ನು ಹಂಚಿಕೊಂಡ ಕಿಚ್ಚ ಸುದೀಪ್‌
  • ರಾಜಕೀಯ ಪ್ರಚಾರದ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ
  • ಸದ್ಯ ಮುಂಬರುವ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲರುವ ಅಭಿನಯ ಚಕ್ರವರ್ತಿ
Kichcha Sudeep: ರಾಜಕೀಯ ಪ್ರಚಾರದ ನಡುವೆ ಮುಂದಿನ ಸಿನಿಮಾ ಬಗ್ಗೆ ಬಿಗ್ ಅನೌನ್ಸ್‌ಮೆಂಟ್ ನೀಡಿದ  ಕಿಚ್ಚ ಸುದೀಪ್ title=

ಬೆಂಗಳೂರು: ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಈಗ ರಾಜಕೀಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಯಿರವರ ಪರವಾಗಿ ಕೆಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್‌ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಇದೀಗ ಇದರ ನಡುವೆ  ಅವರ ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು  ಕಾಯುತ್ತಿದ್ದಾರೆ. ಕರ್ನಾಟಕ  ಮಾತ್ರವಲ್ಲದೇ ರಾಜ್ಯದಾದ್ಯಂತ ಇವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.  ವರ್ಷಕ್ಕೆ ಮೂರು ಸಿನಿಮಾ ಮಾಡುವುದಾಗಿ ಈ ಹಿಂದೆನೆ ಹೇಳಿದ್ದರು. ಇದೀಗ ಅದರಂತಯೇ ಮೂರು ಸಿನಿಮಾ ಮಾಡಲು  ಸಜ್ಜಾಗಿದ್ದಾರೆ

ಇದನ್ನೂ ಓದಿ: Kannada New Serial: ಪೈಲ್ವಾನ್‌ʼ ನಿರ್ದೇಶಕಿ ಸ್ವಪ್ನ ಕೃಷ್ಣ ಕಡೆಯಿಂದ ಕಿರುತೆರೆಗೆ ಮತ್ತೊಂದು ಉಡುಗೊರೆ! 

ಮುಂಬರುವ ವಿಧಾನ ಸಭೆ ಚುನಾವಣೆ ಪ್ರಚಾರ ನಡುವೆ  ಸಿನಿಮಾ ಬಗ್ಗೆ ಕ್ಲೂಲ್‌ ಬಿಟ್ಟಿದ್ದಾರೆ. ಹೌದು ಕಿಚ್ಚ ಸುದೀಪ್, ತಮ್ಮ ಹೊಸ ಸಿನಿಮಾದ ಅಧಿಕೃತ ಮಾಹಿತಿಯನ್ನ ಇದೀಗ ಎಲ್ಲರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳಲ್ಲಿ ಕೂತುಹಲ ಮೂಡಿಸಿದ್ದಾರೆ. 

ಇದನ್ನೂ ಓದಿ: Alia Bhatt: ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ  ಫಿಲ್ಮ್‌ಫೇರ್ ಪ್ರಶಸ್ತಿ

ರಾಜಕೀಯ ಪ್ರಚಾರದ ನಡುವೆಯು ಅಭಿಮಾನಿಗಳತ್ತ ಗಮನ ವಹಿಸಿ, ಬೇಸರ ಪಡುವ ಅಗತ್ಯ ಇಲ್ಲ. ಅತಿ ಶೀಘ್ರದಲ್ಲಿಯೆ ಹೊಸ ಸುದ್ದಿ ಕೊಡುತ್ತೇನೆ ಅಂತ ಕಿಚ್ಚ ಸುದೀಪ್ ಹೇಳಿದ್ದರು ಅಭಿಮಾನಿಗಳು ಬೇಸರ ಪಡುವ ಅಗತ್ಯ ಇಲ್ಲ. ಅತಿ ಶೀಘ್ರದಲ್ಲಿಯೆ ಹೊಸ ಸುದ್ದಿ ಕೊಡುತ್ತೇನೆ ಅಂತ ಕಿಚ್ಚ  ಹೇಳಿದ್ದಾರೆ.  

ಕಿಚ್ಚನ ಸಲುವಾಗಿ ಮೂವರು ಡೈರೆಕ್ಟರ್ಸ್ ಕೆಲಸ ಮಾಡುತ್ತಿದ್ದಾರೆ. ಮೂರು ಸಿನಿಮಾಗಳು ಸದ್ಯದಲ್ಲೇ ತೆರೆ ಮೇಲೆ ಬರಲಿದೆ.  ಮೇ ತಿಂಗಳ 22 ರಂದು ಅಭಿನಯ ಚಕ್ರವರ್ತಿಯ ಮುಂದಿನ ಸಿನಿಮಾದ ಪ್ರೋಮೊ ಶೂಟ್ ನಡೆಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News