Dr. Puneeth Rajkumar Book Launch: ಡಾ.ಪುನೀತ್ ರಾಜ್‌ಕುಮಾರ್ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

Kiccha Sudeep Launches Puneeth Rajkumar Book: ಅಪ್ಪು (Appu) ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ. ಸದ್ಯ 'ಜೇಮ್ಸ್‌' (James) ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾಯುತ್ತಿದೆ. 

Written by - Malathesha M | Edited by - Nitin Tabib | Last Updated : Mar 16, 2022, 01:59 PM IST
  • ಪುನೀತ್ ರಾಜ್ ಕುಮಾರ್ ಅವರ 'ನೀನೆ ರಾಜಕುಮಾರ' ಬಯೋಗ್ರಫಿ ಬಿಡುಗಡೆ
  • ಕಿಚ್ಚ ಸುದೀಪ್ ಅವರಿಂದ ಪುಸ್ತಕ ಬಿಡುಗಡೆ
  • ಪುಸ್ತಕ ಬಿಡುಗಡೆಯ ವೇಳೆ ಪುನೀತ್ ನೆನೆದು ಭಾವುಕರಾದ ನಟ ಸುದೀಪ್
Dr. Puneeth Rajkumar Book Launch: ಡಾ.ಪುನೀತ್ ರಾಜ್‌ಕುಮಾರ್ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ title=
Kiccha Sudeep Launches Puneeth Rajkumar Book

Kiccha Sudeep Launches Puneeth Rajkumar Book: ಅಪ್ಪು (Appu) ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ. ಸದ್ಯ 'ಜೇಮ್ಸ್‌' (James) ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾಯುತ್ತಿದೆ. ಈ ಹೊತ್ತಲ್ಲೇ ಪವರ್‌ ಸ್ಟಾರ್‌ ಡಾ.ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ ಬಯೋಗ್ರಫಿ (Puneeth Biography) ಕೂಡ ರಿಲೀಸ್‌ ಆಗಿದೆ.  'ನೀನೇ ರಾಜಕುಮಾರ' (Neene Rajakumara) ಕೃತಿಯನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಈಗಾಗಲೇ 'ಜೇಮ್ಸ್‌' ಸಿನಿಮಾ ರಿಲೀಸ್‌ ಮಾಡಲು ಸಕಲ ಸಿದ್ಧತೆ ಸಾಗಿದ್ದು, ಅಭಿಮಾನಿಗಳು ಸಂಭ್ರಮದ ತಯಾರಿ ಆರಂಭಿಸಿದ್ದಾರೆ. ಈ ಹೊತ್ತಲ್ಲೇ ಅಪ್ಪು ಬಗೆಗಿನ ಬಯೋಗ್ರಫಿ  'ನೀನೇ ರಾಜಕುಮಾರ' ಪುಸ್ತಕ ರಿಲೀಸ್‌ ಆಗಿರುವುದು ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ-Puneeth Rajkumar : ಪುನೀತ್ ರಾಜ್‍ಕುಮಾರ್ ನಿಧನ: ರಾಜ್ಯದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳ!

ಸುದೀಪ್‌ ಭಾವುಕ ನುಡಿ
ಇನ್ನು 'ನೀನೇ ರಾಜಕುಮಾರ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್‌ (Kiccha Sudeep), ಒಂದೊಳ್ಳೆ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ ಎಂದರು. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ. ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ' ಎಂದು ಪವರ್‌ ಸ್ಟಾರ್‌ ನೆನಪು ಮಾಡಿಕೊಂಡರು‌ ಕಿಚ್ಚ ಸುದೀಪ್.

ಇದನ್ನೂ ಓದಿ-Vishal : 'ಮುಂದಿನ ವರ್ಷದಿಂದ ಪುನೀತ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಜವಾಬ್ದಾರಿ ನನ್ನದು'

ಪವರ್‌ ಸ್ಟಾರ್‌ ಡಾ.ಪುನೀತ್ ರಾಜ್ ಕುಮಾರ್ ಅವರ ಕುರಿತಾಗಿ ಪ್ರಕಟವಾಗಿರುವ 'ನೀನೇ ರಾಜಕುಮಾರ' ಪುಸ್ತಕ 260‌ ಪುಟಗಳನ್ನು ಹೊಂದಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 'ನೀನೇ ರಾಜಕುಮಾರ' ಪುಸ್ತಕ. ಪುನೀತ್ ಅವರ ಖಾಸಗಿ ಜೀವನ ಹಾಗೂ ವೃತ್ತಿ ಜೀವನ, ಅಪರೂಪದ ಸಂಗತಿಗಳು, ಫೋಟೋಗಳನ್ನು 'ನೀನೇ ರಾಜಕುಮಾರ' ಪುಸ್ತಕದಲ್ಲಿ ಲೇಖಕ ಶರಣು ಹುಲ್ಲೂರು ವಿವರಿಸಿದ್ದಾರೆ.

ಇದನ್ನೂ ಓದಿ-Puneeth Rajkumar: ನಟ ಪುನೀತ್ ರಾಜ್ ಕುಮಾರ್ ಕಣ್ಣು ನಾಲ್ವರಿಗೆ ಅಳವಡಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News