Max: ಮಹಾ ಶಿವರಾತ್ರಿಯಂದು ಕಿಚ್ಚನಿಂದ ʻಮ್ಯಾಕ್ಸ್‌ʼ ಬಿಗ್‌ ಅಪ್‌ಡೇಟ್‌..!

Max Update: ಚಂದನವನದ ನಟ ಅಭಿನಯ ಚಕ್ರವತಿ ಕಿಚ್ಚ ಸುದೀಪ್‌ ತಮ್ಮ ಅಭಿಮಾನಿಗಳಿಗಾಗಿ ಮಹಾ ಶಿವರಾತ್ರಿಯಂದು ಮ್ಯಾಕ್ಸ್‌ ಸಿನಿಮಾದ ಬಿಗ್‌ ಅಪ್‌ಡೇಟ್‌ ಅನ್ನು ನೀಡಿದ್ದಾರೆ. ಹಾಗಾದ್ರೇ ಆ ಅಪ್‌ಡೇಟ್‌ ಏನು? ಚಿತ್ರ ಯಾವಾಗ ರಿಲೀಸ್‌ ಆಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Mar 9, 2024, 03:53 PM IST
  • ಈ ಹಿಂದೆಯೇ ಬಾದಾಶಾ ಫ್ಯಾನ್ಸ್‌ಗೆ ಒಂದು ಪ್ರಶ್ನೆ ಹಾಕುವುದರ ಜೊತೆಗೆ ಸಮಾಧಾನಕರ ಉತ್ತರ ನೀಡಿದ್ದರು.
  • ಸಂಕ್ರಾಂತಿಯ ಬಳಿಕ ಈ ನಟ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು.
  • ಬಾದ್‌ಶಾ ಸುದೀಪ್‌ ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಶೂಟಿಂಗ್‌ ಕೂಡ ಮುಗಿಸುತ್ತಿದ್ದಾರೆ.
Max: ಮಹಾ ಶಿವರಾತ್ರಿಯಂದು ಕಿಚ್ಚನಿಂದ ʻಮ್ಯಾಕ್ಸ್‌ʼ ಬಿಗ್‌ ಅಪ್‌ಡೇಟ್‌..! title=

Max Movie Update From Sudeep: ಸ್ಯಾಂಡಲ್‌ವುಡ್‌ ಅಭಿನಯ ಚಕ್ರವತಿ ಕಿಚ್ಚ ಸುದೀಪ್‌ ಕೊನೆಯದಾಗಿ ವಿಕ್ರಾಂತ್‌ ರೋಣ ಸಿನಿಮಾದಲ್ಲಿ ಕಾಣಿಸಿಕೊಂಡವರು, ಮತ್ತೆ ಬೆಳ್ಳಿತೆರೆ ಮೇಲೆ ಈ ನಟನ ಯಾವ ಸಿನಿಮಾ ಕೂಡ ರಿಲೀಸ್‌ ಆಗಿಲ್ಲ. ಆದರಿಂದ ಸುದೀಪ್‌ಗೆ ‘ಮ್ಯಾಕ್ಸ್’  ಚಿತ್ರದ ಅಪ್‌ಡೇಟ್‌ಗಾಗಿ ಪದೇ ಪದೇ ಕೇಳುತ್ತಾನೇ ಇದ್ದಾರೆ. ಈ ಹಿಂದೆಯೇ ಬಾದಾಶಾ ಫ್ಯಾನ್ಸ್‌ಗೆ ಒಂದು ಪ್ರಶ್ನೆ ಹಾಕುವುದರ ಜೊತೆಗೆ ಸಮಾಧಾನಕರ ಉತ್ತರ ನೀಡಿದ್ದರು. 

ನಟ ಕಿಚ್ಚ ಸುದೀಪ್‌ ಇದಕ್ಕೂ ಮುಂಚೆ "ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ" ಅಂತ ಪ್ರಶ್ನೆ ಹಾಕಿದ್ದರು. ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ ನವೆಂಬರ್‌ ತಿಂಗಳಲ್ಲಿ ಮಳೆಯಿಂದ ಸಾಧ್ಯವಾಗಿರಲಿಲ್ಲ. ಆದೇ ರೀತಿ ಡಿಸೆಂಬರ್‌ನಲ್ಲಿ ಅಡೆತಡೆಗಳು ಎದುರಾಗಿದ್ದವು. ಸಂಕ್ರಾಂತಿಯ ಬಳಿಕ ಈ ನಟ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Shilpa Shetty:"ಹಣದ ಆಸೆಯಿಂದ ಶಿಲ್ಪ ರಾಜ್ ಕುಂದ್ರಾನ ಮದುವೆಯಾದಳು" ಕರಾವಳಿ ಬೆಡಗಿ ಹೇಳಿದ್ದೇನು..

ಇದೀಗ ನಟ ಸುದೀಪ್‌ ಮ್ಯಾಕ್ಸ್‌ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ ಈ ನಟ "ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದೇವೆ. ಅದೊಂದು ಪ್ರಮುಖ ಘಟ್ಟ. ಜೊತೆಗೆ ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಮುಗಿದಂತೆ. ಎಲ್ಲ ರಫ್ ಕಟ್ ದೃಶ್ಯಗಳನ್ನು ನೋಡಿದೆ. ಸೂಪರ್. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಪ್ರತಿಯೊಬ್ಬರ ಎಫರ್ಟ್ ಕಾಣುತ್ತಿದೆ" ಎಂದು ಪೋಸ್ಟ್‌ನಲ್ಲಿ ಬರೆದು ಹಾಕಿದ್ದಾರೆ.

ಬಾದ್‌ಶಾ ಸುದೀಪ್‌ ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಶೂಟಿಂಗ್‌ ಕೂಡ ಮುಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಕಂಪ್ಲೀಟ್‌ ಮಾಡಿದ್ದು, ಇನ್ನೇನು ಕೆಲವು ದಿನಗಳಲ್ಲಿ ಮ್ಯಾಕ್ಸ್ ಚಿತ್ರದ ಶೂಟಿಂಗ್‌ ಕಂಪ್ಲೀಟ್‌ ಆಗಿ ಮುಗಿಯಲಿದೆ. ಚಿತ್ರತಂಡ ಪ್ಲಾನ್ ಮಾಡಿದಂತೆ ತಿಂಗಳಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ. ಈ ನಟ ಮ್ಯಾಕ್ಸ್‌ ಕೆಲಸ ಮುಗಿಯುತ್ತಿದಂತೆ ಬಹುಶಃ ಅನೂಪ್ ಭಂಡಾರಿ ಚಿತ್ರದಲ್ಲಿ ಮತ್ತೊಮ್ಮೆ ಸುದೀಪ್ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News