ದರ್ಶನ್ ಅಪಘಾತ: ಬೇಗ ಚೇತರಿಸಿಕೋ ಗೆಳೆಯ ಎಂದ ಕಿಚ್ಚ, ಜಗ್ಗೇಶ್ ಏನಂದ್ರು ಗೊತ್ತಾ?

ಒಂದು ಕಾಲದಲ್ಲಿ ಕುಚುಕುಗಳಾಗಿ ಸುತ್ತಾಡಿದ ಕಿಚ್ಚ-ದಚ್ಚು ನಡುವೆ ಕೆಲ ವಿಷಯಗಳಿಗೆ ಮನಸ್ತಾಪ ಉಂಟಾಗಿತ್ತು. ಆ ಬಳಿಕ ಈ ಇಬ್ಬರು ಸ್ಟಾರ್​ಗಳು ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ.

Last Updated : Sep 25, 2018, 10:30 AM IST
ದರ್ಶನ್ ಅಪಘಾತ: ಬೇಗ ಚೇತರಿಸಿಕೋ ಗೆಳೆಯ ಎಂದ ಕಿಚ್ಚ, ಜಗ್ಗೇಶ್ ಏನಂದ್ರು ಗೊತ್ತಾ? title=
Pic: Youtube

ಬೆಂಗಳೂರು: ಕಾರು ಅಪಘಾತದಿಂದ ಗಾಯಗೊಂಡಿರುವ ದರ್ಶನ್ ಬೇಗನೇ ಗುಣಮುಖನಾಗಿ ಬನ್ನಿ ಎಂದು ಕಿಚ್ಚ ಸುದೀಪ್ ತನ್ನ ಕುಚಿಕು ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹಾರೈಸಿದ್ದಾರೆ.

ಒಂದು ಕಾಲದಲ್ಲಿ ಕುಚುಕುಗಳಾಗಿ ಸುತ್ತಾಡಿದ ಕಿಚ್ಚ-ದಚ್ಚು ನಡುವೆ ಕೆಲ ವಿಷಯಗಳಿಗೆ ಮನಸ್ತಾಪ ಉಂಟಾಗಿತ್ತು. ಆ ಬಳಿಕ ಈ ಇಬ್ಬರು ಸ್ಟಾರ್​ಗಳು ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅದೆಲ್ಲವೂ ತಾತ್ಕಾಲಿಕ ಎಂಬಂತೆ ಇದೀಗ ದರ್ಶನ್ ಅಪಘಾತದ ಸುದ್ದಿಗೆ ಕಿಚ್ಚ ಸುದೀಪ್ ಟ್ವೀಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ನಾಲ್ವರಿಗೆ ಗಾಯ 

ಹಳೆಯ ಗೆಳೆಯ ಆಸ್ಪತ್ರೆಯಲ್ಲಿ ಇರುವುದನ್ನು ತಿಳಿದಿರುವ ಸುದೀಪ್, ಗೆಳೆಯರಲ್ಲಿ ದರ್ಶನ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರಂತೆ. ಅಲ್ಲದೆ ಟ್ವಿಟ್ಟರ್​ನಲ್ಲಿ ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಬೇಗ ಚೇತರಿಸಿಕೋ ಗೆಳೆಯ ಎಂದು ಟ್ವೀಟ್ ಮಾಡಿದ್ದಾರೆ.

ಅಪಘಾತಕ್ಕೀಡಾದ ದರ್ಶನ್​ ಕಾರು ನಾಪತ್ತೆ; ಚಾಲೆಂಜಿಂಗ್​ ಸ್ಟಾರ್​ ಕೈಗೆ ಆಪರೇಷನ್

ಇನ್ನು ದರ್ಶನ್ ಅವರಿಗೆ ಅಪಘಾತವಾಗಿದೆ ಎಂಬ ಸುದ್ದಿ ಕೇಳಿ ನಾನು ದಿಗ್ಭ್ರಾಂತನಾದೆ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ ಜಗ್ಗೇಶ್, "ಕಲಾಬಂಧು ದರ್ಶನ್‍ಗೆ ಅಪಘಾತವಾದ ಸುದ್ದಿಕೇಳಿ ದಿಗ್ಭ್ರಾಂತನಾದೆ. ಕೋಟ್ಯಾಂತರ ಕನ್ನಡದ ಆತ್ಮಗಳು ಹಾಗೂ ಅಮ್ಮನ ಆಶೀರ್ವಾದ ದರ್ಶನ್ ಅವರನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ ಯಾರ ಕಣ್ಣು ತಾಕದೆ ಸುಖವಾಗಿ ಬಾಳಿ ಶುಭಹಾರೈಕೆ" ಎಂದು ಬರೆದಿದ್ದಾರೆ.

ನನಗೆ ಏನೂ ಆಗಿಲ್ಲ, ಯಾರೂ ಆಸ್ಪತ್ರೆ ಬಳಿ ಬರಬೇಡಿ ಪ್ಲೀಸ್: ಅಭಿಮಾನಿಗಳಿಗೆ ದಚ್ಚು ಮನವಿ

ಇದಕ್ಕೂ ಮುನ್ನ ನಿನ್ನೆ ಮಧ್ಯಾಹ್ನ ಸ್ವತಃ ನಟ ದರ್ಶನ್ ಅವರೇ ಅಭಿಮಾನಿಗಳಲ್ಲಿ, ನನಗೆ ಏನೂ ಆಗಿಲ್ಲ, ಗಾಬರಿಯಾಗಬೇಡಿ, ಹುಷಾರಾಗಿದ್ದೇನೆ, ಆಸ್ಪತ್ರೆಯತ್ತ ಯಾರೂ ಬರಬೇಡಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಾನೇ ನಿಮಗೆ ಸಿಗುತ್ತೇನೆ ಎಂದು ದಚ್ಚು ತಿಳಿಸಿದ್ದರು.

ಘಟನೆ ಹಿನ್ನೆಲೆ:
ಮೈಸೂರಿನ ಹೊರವಲಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು,  ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
 

Trending News