ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್ 2..!

ಕೆಜಿಎಫ್ 2 ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸಾರ್ವಕಾಲಿಕ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇನ್ನು ಕೆಲವೇ ದಿನಗಳಲ್ಲಿ 50 ದಿನಗಳ ಬಾಕ್ಸ್ ಆಫೀಸ್ ಯಾನವನ್ನು ಪೂರೈಸಲಿದೆ.ಇದೆ ಸಂದರ್ಭದಲ್ಲಿ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತವಾಗಿ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಬಹುದಾಗಿದೆ.

Written by - Zee Kannada News Desk | Last Updated : May 31, 2022, 06:45 PM IST
  • ಭಾರತದಲ್ಲಿನ ಪ್ರಮುಖ ಚಂದಾದಾರರು ಮತ್ತು ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ದೇಶಗಳ ಜನರು ತಮ್ಮ ಮನೆಯಿಂದಲೇ ಈ ಬ್ಲಾಕ್ ಬಸ್ಟರ್ ಚಿತ್ರವನ್ನು ನೋಡಬಹುದಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್ 2..!   title=
file photo

ಬೆಂಗಳೂರು: ಕೆಜಿಎಫ್ 2 ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸಾರ್ವಕಾಲಿಕ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇನ್ನು ಕೆಲವೇ ದಿನಗಳಲ್ಲಿ 50 ದಿನಗಳ ಬಾಕ್ಸ್ ಆಫೀಸ್ ಯಾನವನ್ನು ಪೂರೈಸಲಿದೆ.ಇದೆ ಸಂದರ್ಭದಲ್ಲಿ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತವಾಗಿ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: RRR ಮೇಕಿಂಗ್ ವಿಡಿಯೋ: ಸೆಟ್​ನಲ್ಲಿ ತೆಗೆದ ಸೀನ್‌ಗೆ ಇಷ್ಟೊಂದು ಗ್ರಾಫಿಕ್ಸ್​!?

ಹೌದು, ಜೂನ್ 3 ರಂದು ಅಮೆಜಾನ್ ಪ್ರೈಮ್ ವೀಡಿಯೊ ಗ್ರಾಹಕರು ಕೆಜಿಎಫ್ 2  ಚಿತ್ರವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಮನೆಯಲ್ಲಿಯೇ ನೋಡಬಹುದಾಗಿದೆ.ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಎಂಬ 5 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಇದನ್ನೂ ಓದಿ: Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ

ಭಾರತದಲ್ಲಿನ ಪ್ರಮುಖ ಚಂದಾದಾರರು ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ದೇಶಗಳ ಜನರು ತಮ್ಮ ಮನೆಯಿಂದಲೇ ಈ ಬ್ಲಾಕ್ ಬಸ್ಟರ್ ಚಿತ್ರವನ್ನು ನೋಡಬಹುದಾಗಿದೆ.

ಪ್ರಶಾಂತ್ ನೀಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್, ಈಶ್ವರಿ ರಾವ್, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Trending News