ಹೊಸ ಅಪ್‌ಡೇಟ್‌ ಕೊಟ್ಟ ‘ಕೆಜಿಎಫ್’ ಟೀಂ..! ಹೇಗಿದೆ ಗೊತ್ತಾ ರಾಕಿ v/s ಅಧೀರನ ಫೈಟ್..?

ಈಗಾಗಲೇ ‘ಕೆಜಿಎಫ್‌-2’ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಅಭಿಮಾನಿಗಳು ಕೂಡ ‘ಕೆಜಿಎಫ್‌-2’ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

Written by - Malathesha M | Edited by - Puttaraj K Alur | Last Updated : Mar 15, 2022, 08:04 PM IST
  • ‘ಕೆಜಿಎಫ್-2’ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್‌ ಕೊಟ್ಟ ಚಿತ್ರತಂಡ
  • ರಾಕಿ v/s ಅಧೀರನ ಫೈಟ್ ಬಗ್ಗೆ ಹಿಂಟ್‌ ನೀಡಿದ ‘ಕೆಜಿಎಫ್’ ಟೀಂ
  • ‘ಕೆಜಿಎಫ್-2’ ಚಿತ್ರದ ಟ್ರೈಲರ್ ಗಾಗಿ ಕಾಯುತ್ತಿದ್ದಾರೆ ಯಶ್ ಫ್ಯಾನ್ಸ್
ಹೊಸ ಅಪ್‌ಡೇಟ್‌ ಕೊಟ್ಟ ‘ಕೆಜಿಎಫ್’ ಟೀಂ..! ಹೇಗಿದೆ ಗೊತ್ತಾ ರಾಕಿ v/s ಅಧೀರನ ಫೈಟ್..? title=
ಹೇಗಿದೆ ಗೊತ್ತಾ ರಾಕಿ v/s ಅಧೀರನ ಫೈಟ್..?

ಬೆಂಗಳೂರು: ‘ಕೆಜಿಎಫ್‌-2’ ಸಿನಿಮಾಗಾಗಿ ಇಡೀ ಜಗತ್ತೇ ಕಾಯುತ್ತಿದೆ. ಇದು ಕನ್ನಡ ಸಿನಿಮಾ ಅನ್ನೋದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ ಕೂಡ ಹೌದು. ಇಷ್ಟೆಲ್ಲದರ ಮಧ್ಯೆ ‘ಕೆಜಿಎಫ್‌-2’ ಟ್ರೈಲರ್‌ ರಿಲೀಸ್‌ಗೂ ಕೌಂಟ್‌ಡೌನ್‌ ಶುರು ಆಗಿದ್ದು, ಅಷ್ಟರೊಳಗೆ ಒಂದೊಂದೇ ಸರ್ಪ್ರೈಸ್‌ ನೀಡುತ್ತಿದೆ ಚಿತ್ರತಂಡ. ಇದೀಗ ರಾಕಿ v/s ಅಧೀರನ ಫೈಟ್(Rocky vs Adheera Fight) ಬಗ್ಗೆ ಹಿಂಟ್‌ ಕೊಡಲಾಗಿದೆ. ಹೇಗೆ ಅಂತಾ ತಿಳಿಯಲು ಮುಂದೆ ಓದಿ.

‘ಕೆಜಿಎಫ್‌-2’(KGF Chapter 2) ನಿರ್ಮಾಣ ಮಾಡಿರುವ ‘ಹೊಂಬಾಳೆ’ ಬ್ಯಾನರ್ಸ್‌ ರಾಕಿಂಗ್‌ ಸ್ಟಾರ್ ಯಶ್‌(Rocking Star Yash) ಫ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದು, ಒಟ್ಟು 4 ಪೋಸ್ಟರ್‌ಗಳನ್ನು ಬೇರೆ ಬೇರೆ ಸಂದೇಶಗಳ ಮೂಲಕ‌ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದೆ. ಈ ಪೋಸ್ಟ್‌ ಮೂಲಕ ‘ಕೆಜಿಎಫ್‌-2’ನಲ್ಲಿ ಅಧೀರ ಹಾಗೂ ರಾಕಿ ಭಾಯ್‌ ನಡುವೆ ದೊಡ್ಡ ಫೈಟ್‌ ಇದೆ ಎಂಬ ಬಗ್ಗೆ ಸುಳಿವು ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಳಿಕ ಗೋವಾದಲ್ಲಿಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ

ಫ್ಯಾನ್ಸ್‌ ಸಂಭ್ರಮ..!

ಈಗಾಗಲೇ ‘ಕೆಜಿಎಫ್‌-2’ ಬಿಡುಗಡೆಗೆ(KGF 2 New Updates) ಬೇಕಾದ ಎಲ್ಲಾ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಅಭಿಮಾನಿಗಳು ಕೂಡ ‘ಕೆಜಿಎಫ್‌-2’ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಹಲವು ರಾಜ್ಯಗಳಲ್ಲಿ ಅಭಿಮಾನಿಗಳು ‘ಕೆಜಿಎಫ್‌-2’ ರಿಲೀಸ್‌ ದಿನ ವಿಭಿನ್ನವಾಗಿ ಸಂಭ್ರಮಾಚರಣೆ ನಡೆಸಲಿದ್ದಾರೆ. ಈ ನಡುವೆ ಹೊಸ ಪೋಸ್ಟರ್‌ಗಳ ಮೂಲಕ ‘ಕೆಜಿಎಫ್‌-2’ ನಿರೀಕ್ಷೆ ದುಪ್ಪಟ್ಟಾಗಿದೆ.

ಸಿನಿಮಾ ಬಗ್ಗೆ ಹಲವು ನಿರೀಕ್ಷೆಗಳು

‘ಕೆಜಿಎಫ್‌-1’ ಭರ್ಜರಿ ಹಿಟ್‌ ಕಂಡಿದ್ದೇ ತಡ ಈ ಸಿನಿಮಾಗೆ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡರು. ಕಥೆ, ಸ್ಕ್ರೀನ್‌ ಪ್ಲೇ, ಡೈರೆಕ್ಷನ್‌, ಕ್ಯಾಮರಾ ವರ್ಕ್‌ ಎಲ್ಲದಕ್ಕಿಂತ ಹೆಚ್ಚಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಹೀಗಾಗಿ ‘ಕೆಜಿಎಫ್‌-2’ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವೆ. ಈಗಾಗಲೇ ಟೀಸರ್‌ ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದರ ಝಲಕ್‌ ತೋರಿಸಿದೆ. ಈ ಹೊತ್ತಲ್ಲೇ ಟ್ರೈಲರ್‌ ರಿಲೀಸ್‌ಗೂ ಸಿದ್ಧತೆ ನಡೆದಿದೆ.

ಇದನ್ನೂ ಓದಿ: James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ!

ಅಂದಹಾಗೆ ಹೊಂಬಾಳೆ ಬ್ಯಾನರ್ಸ್‌ ‘ಕೆಜಿಎಫ್‌’(KGF Film Updates) ಫ್ಯಾನ್ಸ್‌ಗೆ  ಟ್ವಿಟ್ಟರ್‌ನಲ್ಲಿ ಪ್ರಶ್ನೆಯೊಂದನ್ನು ಕೇಳಿತ್ತು. ಅದೇನೆಂದರೆ ನಿಮಗೆ ‘ಕೆಜಿಎಫ್‌ ಭಾಗ 2’ರಲ್ಲಿ ಮೊದಲು ಏನನ್ನು ನೋಡಬೇಕು ಅಂದುಕೊಂಡಿದ್ದೀರಿ ಎಂಬುದು. ಈ ಪೈಕಿ ಆಯ್ಕೆಗಳನ್ನು ಕೂಡ ಹೊಂಬಾಳೆ ಬ್ಯಾನರ್ಸ್‌ ನೀಡಿತ್ತು. ಅದರಲ್ಲಿ ಹಾಡು, ಟ್ರೈಲರ್‌ ಮತ್ತು ಸರ್ಪ್ರೈಸ್‌ ಬೇಕಾ? ಎಂದು ಕೇಳಲಾಗಿತ್ತು. ಇದರಲ್ಲಿ ಶೇ.85ಕ್ಕಿಂತ ಹೆಚ್ಚು ಅಭಿಮಾನಿಗಳು ಟ್ರೈಲರ್‌ ಬೇಕು ಎಂದು ಉತ್ತರಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ‘ಕೆಜಿಎಫ್‌-2’ ಟ್ರೈಲರ್‌(KGF Chapter 2 Trailer)ರಿಲೀಸ್‌ ಆಗುವುದು ಪಕ್ಕಾ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News