ಪಠಾಣ್, RRR ಅಲ್ಲ.. ಕೊರೊನಾ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ!

India’s most profitable film post pandemic: ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಮತ್ತು ಪಠಾಣ್‌‌ನಂತಹ ಸಿನಿಮಾಗಳನ್ನು ಸೋಲಿಸಿ, ಕೊರೊನಾ ಸಾಂಕ್ರಾಮಿಕ ನಂತರದ ಅತ್ಯಂತ ಲಾಭದಾಯಕ ಭಾರತೀಯ ಚಲನಚಿತ್ರವಾಗಿ ಕನ್ನಡದ ಈ ಚಿತ್ರ ಹೊರಹೊಮ್ಮಿದೆ.

Last Updated : Jun 11, 2023, 12:25 PM IST
  • ಕೊರೊನಾ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾ
  • ಪಠಾಣ್, RRR ಅಲ್ಲ.. ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಚಿತ್ರ
  • ಭಾರತದ ಅತ್ಯಂತ ಲಾಭದಾಯಕ ಚಿತ್ರ ಇದು
ಪಠಾಣ್, RRR ಅಲ್ಲ.. ಕೊರೊನಾ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ!     title=

India’s most profitable film post pandemic: ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಭಾರತೀಯ ಚಿತ್ರರಂಗ ಹಲವು ಕಷ್ಟದ ಹಾದಿಗಳಲ್ಲಿ ಸಾಗಬೇಕಾಯಿತು. ಕೊರೊನಾ ತಂದ ಆರ್ಥಿಕ ಸಂಕಷ್ಟದ ಮಧ್ಯೆ ಕೆಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ದೊಡ್ಡ ಯಶಸ್ಸು ಚಿತ್ರೋದ್ಯಮಕ್ಕೆ ಆಸರೆ ನೀಡಿದವು. ಕೊರೊನಾ ಕರಿಛಾಯೆಯ ನಡುವೆ ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾಗಳಲ್ಲಿ ಕನ್ನಡದ ಚಲನಚಿತ್ರ ಟಾಪ್‌ ಸ್ಥಾನದಲ್ಲಿದೆ. ಕೊರೊನಾ ಬಳಿಕ ಪಠಾಣ್‌, ಆರ್‌ಆರ್‌ಆರ್‌ ಸಿನಿಮಗಳ ಭರಾಟೆಯ ಮಧ್ಯೆ ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ. 

ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ : 

ಕಳೆದ ಮೂರು ವರ್ಷಗಳಲ್ಲಿ ದೇಶವು ನೋಡಿದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳ ಬಗ್ಗೆ ಇಂದು ನಾವು ಮಾತನಾಡುತ್ತಿದ್ದೇವೆ. ಈ ವಿಚಾರ ಕೇಳಿದಾಕ್ಷಣ RRR ಮತ್ತು ಪಠಾಣ್‌‌ನಂತಹ ಹೆಸರುಗಳು ನೆನಪಿಗೆ ಬರುತ್ತವೆ. ಈ ಎರಡು ಚಿತ್ರಗಳು ಕಳೆದ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಾಗಿವೆ. ಆದರೆ ಸಂಪೂರ್ಣ ಲಾಭದ ವಿಷಯಕ್ಕೆ ಬಂದಾಗ, ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ಟಾಪ್‌ ಸ್ಥಾನದಲ್ಲಿದೆ. ಆ ಚಿತ್ರ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್‌ 2. 

ಇದನ್ನೂ ಓದಿ: ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು! ಪ್ರೊಡ್ಯೂಸರ್ ಆದ ಫ್ಯಾನ್‌ ಯಾರು ಗೊತ್ತಾ?

ಉದ್ಯಮದ ಮೂಲಗಳ ಪ್ರಕಾರ, ಪಠಾಣ್ ಜಾಗತಿಕವಾಗಿ ರೂ 1050 ಕೋಟಿ ಗಳಿಸಿತು, ನಿರ್ಮಾಪಕರಿಗೆ ಸುಮಾರು ರೂ 600 ಕೋಟಿ ಲಾಭವನ್ನು ಹಿಂದಿರುಗಿಸಿತು. RRR ಜಾಗತಿಕವಾಗಿ 1200 ಕೋಟಿ ರೂಪಾಯಿಗಳನ್ನು ಮುದ್ರಿಸಿತು - ಕೇವಲ 600 ಕೋಟಿ ರೂಪಾಯಿಗಳಿಗಿಂತ ಕಡಿಮೆ ಲಾಭವನ್ನು ಗಳಿಸಿತು. ಈ ಎರಡು ಸಿನಿಮಾಗಳಿಗೆ ಹೋಲಿಸಿದರೆ ಕೆಜಿಎಫ್ 2 ಜಾಗತಿಕವಾಗಿ 1200 ಕೋಟಿ ಗಳಿಕೆ ಮಾಡಿದೆ. ಆದರೆ 900 ಕೋಟಿಗಿಂತ ಹೆಚ್ಚಿನ ಲಾಭವನ್ನು ಗಳಿಸಿದೆ.

RRR, ಪಠಾಣ್‌, ಕೆಜಿಎಫ್ 2 ಬಜೆಟ್ : 

RRR ಮತ್ತು ಪಠಾಣ್‌ಗಳಂತಹ ದೊಡ್ಡ ಚಲನಚಿತ್ರಗಳ ಎದುರು KGF 2 ತುಲನಾತ್ಮಕವಾಗಿ ಕಡಿಮೆ ಬಜೆಟ್ ಸಿನಿಮಾ ಆಗಿದೆ. RRR ನ ವರದಿಯ ಲ್ಯಾಂಡಿಂಗ್ ವೆಚ್ಚ ಸುಮಾರು 500 ಕೋಟಿ ರೂ. ಮತ್ತು ಪಠಾಣ್‌ ಸುಮಾರು 300 ಕೋಟಿ ರೂ. ಬಜೆಟ್‌ ಹೊಂದಿದೆ. ಆದರೆ ಕೆಜಿಎಫ್ 2 ಕೇವಲ 100 ಕೋಟಿ ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ರೆಡಿ ಆಯ್ತು. ಆದರೆ ಲಾಭದ ಪಾಲು ದೊಡ್ಡದಾಗಿದೆ.

ಇದನ್ನೂ ಓದಿ: ರಜನಿಕಾಂತ್‌ಗೆ ʻಸೂಪರ್ ಸ್ಟಾರ್ʼ ಬಿರುದು ತಂದುಕೊಟ್ಟ ಸಿನಿಮಾ ಇದೇ..!

ಭಾರತದ ಅತ್ಯಂತ ಲಾಭದಾಯಕ ಚಿತ್ರ : 

ಕೆಜಿಎಫ್ 2 ರ ದಾಖಲಲೆ ಪ್ರಭಾವಶಾಲಿಯಾಗಿದ್ದರೂ, ಭಾರತದ ಸಾರ್ವಕಾಲಿಕ ಅತ್ಯಂತ ಲಾಭದಾಯಕ ಚಲನಚಿತ್ರವಾದ ಅಮೀರ್ ಖಾನ್ ಅವರ ದಂಗಲ್ ಅನ್ನು ಬೀಟ್‌ ಮಾಡಲು ಸಾಧ್ಯವಾಗಲಿಲ್ಲ. ವಿಶ್ವಾದ್ಯಂತ 2000 ಕೋಟಿ ರೂ.ಗಳ ಗಳಿಕೆ ಮತ್ತು 100 ಕೋಟಿಯ ಸಾಧಾರಣ ನಿರ್ಮಾಣ ಬಜೆಟ್ ಚಿತ್ರವು ಸುಮಾರು 1500 ಕೋಟಿ ಲಾಭ ಗಳಿಸಲು ಸಾಧ್ಯವಾಯಿತು. ಎಸ್‌ಎಸ್ ರಾಜಮೌಳಿ ಅವರ ಅದ್ಭುತ ಕೃತಿ ಬಾಹುಬಲಿ 2: ದಿ ಕನ್‌ಕ್ಲೂಷನ್ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭ ಗಳಿಸಿದ ಏಕೈಕ ಭಾರತೀಯ ಚಲನಚಿತ್ರವಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News