Team India T20 World Cup 2024 Rohit Sharma Virat Kohli: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಟಿ20 ವಿಶ್ವಕಪ್ 2024 ಆರಂಭವಾಗಿದೆ. ಭಾರತ ತಂಡವೂ ಅಮೆರಿಕದಲ್ಲಿದ್ದು, ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದೆ. ಇದರ ಹೊರತಾಗಿಯೂ ಪ್ರಶಸ್ತಿ ಗೆಲ್ಲಲೇಬೇಕಾದ ಒತ್ತಡ ಟೀಂ ಇಂಡಿಯಾದ ಮೇಲಿದೆ.
ಇದನ್ನೂ ಓದಿ: ತೂಕ ಇಳಿಕೆಗೆ ಈ ಬಣ್ಣದ ಕ್ಯಾರೆಟ್ ವರದಾನ: ತಿಂದರೆ 5 ದಿನದಲ್ಲಿ ಸೊಂಟದ ಬೊಜ್ಜು ಸುಲಭವಾಗಿ ಕರಗುತ್ತೆ! ಸೂಪರ್ ಫಿಗರ್ ಆಗ್ತೀರಿ
2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಅಂದಿನಿಂದ ಪ್ರಶಸ್ತಿಗಾಗಿ ಕಾಯುವಿಕೆ ಮುಂದುವರಿದಿದೆ.
ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ಟಿ20 ವಿಶ್ವಕಪ್’ನಲ್ಲಿ ಯಶಸ್ವಿಯಾಗಲು ರಾಹುಲ್ ದ್ರಾವಿಡ್ ಮತ್ತು ಅವರ ತಂಡವು ಹೆಚ್ಚು ಆರಾಮದಾಯಕವಾಗಿರಬೇಕು ಎಂದು ಹೇಳಿದ್ದಾರೆ. ಅಂದರೆ ಅತಿಯಾದ ಒತ್ತಡವು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
RevSports ನೊಂದಿಗೆ ಮಾತನಾಡಿದ ಗಂಗೂಲಿ, ಭಾರತವು ಹೆಚ್ಚು ಒತ್ತಡವನ್ನು ಅನುಭವಿಸಿ ತಪ್ಪನ್ನು ಮಾಡುತ್ತದೆ, ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪತ್ನಿಯರನ್ನು ನೋಡುವುದರಿಂದ ಸ್ಪಷ್ಟವಾಗುತ್ತದೆ. ರಾಹುಲ್ ದ್ರಾವಿಡ್’ಗೆ ನಾನು ಏನಾದರೂ ಹೇಳುವುದಾದರೆ ಆಟಗಾರರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ಸ್ಟ್ಯಾಂಡ್’ನಲ್ಲಿ ರೋಹಿತ್ ಮತ್ತು ವಿರಾಟ್ ಅವರ ಪತ್ನಿಯರನ್ನು ನೋಡಿದಾಗ ಅವರು ಎಷ್ಟು ಒತ್ತಡದಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
“ನಾವು ಭಾರತದಲ್ಲಿ ಹೆಚ್ಚು ಒತ್ತಡ ಹೇರುವ ತಪ್ಪನ್ನು ಮಾಡುತ್ತೇವೆ. ಉದಾಹರಣೆಗೆ ನಾನು 2003ರ ವಿಶ್ವಕಪ್ ಫೈನಲ್ ಬಗ್ಗೆ ಯೋಚಿಸುತ್ತೇನೆ. ಏನಿದ್ದರೂ ದೊಡ್ಡ ಪಂದ್ಯಗಳನ್ನು ಆಡುವಾಗ ನಾವು ವಿಶ್ರಾಂತಿ ಪಡೆಯಬೇಕು. ಸ್ವತಂತ್ರ್ಯವಾಗಿ ಆಟವಾಡಿ'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಬೇಕಾದ್ರೆ ಎಷ್ಟು ಪಂದ್ಯ ಗೆಲ್ಲಬೇಕು?
ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಕಾರಣ
“ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಂಡ ಸ್ವಲ್ಪ ಶಾಂತವಾಗಿದ್ದರೆ, ಉತ್ತಮ ಪ್ರದರ್ಶನ ನೀಡಬಹುದಿತ್ತು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಸೋತರೂ ಭಾರತ ಅತ್ಯುತ್ತಮ ತಂಡ ಎಂದು ನಾನು ಹೇಳುತ್ತೇನೆ. ಸ್ಪರ್ಧೆಯ ಸಂದರ್ಭದಲ್ಲಿ ನಾವು ಅಮೋಘ ಕ್ರಿಕೆಟ್ ಆಡಿದ್ದೇವೆ. ಫೈನಲ್ ವೇಳೆಗೆ ನಾವು ಸ್ವಲ್ಪ ಶಾಂತವಾಗಬಹುದಿತ್ತು ಎಂಬುದು ನನ್ನ ಅಭಿಪ್ರಾಯ. ಅದನ್ನೇ ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews