ಭರ್ಜರಿಯಾಗಿ 50 ದಿನ ಕಂಪ್ಲೀಟ್‌ ಮಾಡಿದ KGF Chapter 2

ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿ ಇಂದಿಗೆ 50 ದಿನಗಳನ್ನು ಪೂರೈಸಿದೆ. ಕನ್ನಡದ ಬಲು ದುಬಾರಿ ಸಿನಿಮಾ 'ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ  50 ದಿನಗಳನ್ನು ಪೂರೈಸುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. 

Written by - Zee Kannada News Desk | Last Updated : Jun 2, 2022, 07:32 PM IST
  • ಭರ್ಜರಿಯಾಗಿ 50 ದಿನ ಕಂಪ್ಲೀಟ್‌ ಮಾಡಿದ ಕೆಜಿಎಫ್ 2
  • ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ 2
  • ಈ ಸಿನಿಮಾ ಕನ್ನಡ ಚಿತ್ರರಂಗವನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ
ಭರ್ಜರಿಯಾಗಿ 50 ದಿನ ಕಂಪ್ಲೀಟ್‌ ಮಾಡಿದ KGF Chapter 2  title=
ಕೆಜಿಎಫ್ 2

ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿ ಇಂದಿಗೆ 50 ದಿನಗಳನ್ನು ಪೂರೈಸಿದೆ. ಕನ್ನಡದ ಬಲು ದುಬಾರಿ ಸಿನಿಮಾ 'ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ  50 ದಿನಗಳನ್ನು ಪೂರೈಸುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ 2 ಸಾಧನೆ ಒಂದೆರಡಲ್ಲ. 

ಇದನ್ನೂ ಓದಿ: ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆಗೆ ಯತ್ನ, ಪ್ರಕರಣ ದಾಖಲು

ಈ ಸಿನಿಮಾ ಕನ್ನಡ ಚಿತ್ರರಂಗವನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ. ಭಾರತದ ಎಲ್ಲಾ ಪ್ರಮುಖ ಚಿತ್ರರಂಗದಲ್ಲಿಯೂ ಕೆಜಿಎಫ್‌ 2 ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಳೆದ 50 ದಿನಗಳಲ್ಲಿ ಸುಮಾರು ₹1,239.97 ಕೋಟಿಗಳಿಸಿದೆ. ರಾಜ್ಯದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಕೆಜಿಎಫ್‌ 2 ಭರ್ಜರಿ ಕಲೆಕ್ಷನ್‌ ಮಾಡಿದೆ. ಕರ್ನಾಟಕ- ₹189.50 ಕೋಟಿಗಳಿಸಿದ್ದರೆ, ಆಂಧ್ರ-ತೆಲಂಗಾಣ ₹139.50 ಕೋಟಿ, ತಮಿಳುನಾಡಲ್ಲಿ ₹115.50 ಕೋಟಿ, ಕೇರಳ ₹69.15 ಕೋಟಿ, ಹಿಂದಿ+ROI ₹520.60 ಕೋಟಿಗಳಿದೆ. ಇನ್ನು ವಿದೇಶದಲ್ಲಿ ₹205.72 ಕೋಟಿಗಳಿಸಿದ್ದು ಒಟ್ಟು ₹1239.97 ಕೋಟಿಯನ್ನು ಈ ಸಿನಿಮಾ 50 ದಿನಗಳಲ್ಲಿ ಕಲೆಕ್ಷನ್‌ ಮಾಡಿದೆ.

ಉತ್ತರ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲೂ ಸೂಪರ್‌ ರೆಸ್ಪಾನ್ಸ್ ಸಿಕ್ಕಿದ್ದು ವಿದೇಶದಲ್ಲಿಯೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಅದ್ಭುತಗಳಿಕೆ ಕಂಡಿದೆ. ಉಳಿದಂತೆ ಎಲ್ಲಾ ಐದು ಭಾಷೆಯಲ್ಲೂ 'ಕೆಜಿಎಫ್ 2' ಸೂಪರ್‌ ಹಿಟ್ ಆಗಿದೆ.  ಭಾರತದಲ್ಲಿ ಸುಮಾರು 390ಕ್ಕೂ ಅಧಿಕ ಸೆಂಟರ್‌ಗಳಲ್ಲಿ 50 ದಿನಗಳನ್ನು ಪೂರೈಸಿದೆ. ಇನ್ನು ವಿದೇಶದ 10ಕ್ಕೂ ಅಧಿಕ ಸೆಂಟರ್‌ಗಳಲ್ಲಿ 50 ದಿನ ಭರ್ಜರಿಯಾಗಿ ಸಾಗಿದೆ. 

ಇದನ್ನೂ ಓದಿ: ತಲೆಗೆ ಹುಳ ಬಿಡ್ತಿದೆ ಉಪೇಂದ್ರ ನಿರ್ದೇಶನದ "UI" ಚಿತ್ರದ ಹೊಸ ಪೋಸ್ಟರ್

ಕೆಜಿಎಫ್ 2 50ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ . ನಾಳೆಯಿಂದ ಕೆಜಿಎಫ್ 2 ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಥಿಯೇಟರ್‌ಗೆ ಬಂದು ಸಿನಿಮಾವನ್ನು ಕಣ್ತುಂಬಿಕೊಳ್ಳದವರು ಈಗ ಮನೆಯಲ್ಲೇ ಕೂತು ಸಿನಿಮಾವನ್ನು ಓಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News