Rocking Star Yash : ಶುಕ್ರವಾರ ರಾಕಿಭಾಯ್ ಜನುಮದಿನ, ಕೆಜಿಎಫ್ 2 ಟೀಸರ್ ರಿಲೀಸ್ ಕೌಂಟ್ ಡೌನ್ ಶುರು

ಶುಕ್ರವಾರ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ. ರಾಕಿ ಭಾಯ್ ಮತ್ತು ಆಧೀರನ ಝಲಕ್ ಗಾಗಿ ಕೋಟ್ಯಂತರಅಭಿಮಾನಿಗಳು ಕಾಯುತ್ತಿದ್ದಾರೆ. 

Written by - Zee Kannada News Desk | Last Updated : Jan 7, 2021, 12:09 PM IST
  • ಶುಕ್ರವಾರ 10 ಗಂಟೆ 18 ನಿಮಿಷಕ್ಕೆ ಟೀಸರ್ ರಿಲೀಸ್
  • ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿ ಕಾತರ ಹೆಚ್ಚಿಸಿದ ಪ್ರಶಾಂತ್ ನೀಲ್
  • ರಾಕಿಭಾಯ್, ಅಧೀರ, ರಮೀಕಾ ಸೇನ್ ಪೋಸ್ಟರ್ ಹೇಗಿದೆ ಗೊತ್ತಾ..?
Rocking Star Yash : ಶುಕ್ರವಾರ ರಾಕಿಭಾಯ್ ಜನುಮದಿನ, ಕೆಜಿಎಫ್ 2 ಟೀಸರ್ ರಿಲೀಸ್ ಕೌಂಟ್ ಡೌನ್ ಶುರು title=
ಶುಕ್ರವಾರ 10 ಗಂಟೆ 18 ನಿಮಿಷಕ್ಕೆ ಟೀಸರ್ ರಿಲೀಸ್

ಬೆಂಗಳೂರು : ನಾಳೆ ರಾಕಿ ಭಾಯ್ ಬರ್ತ್ ಡೇ.  ಕೆಜಿಎಫ್ 2 ಚಿತ್ರದ ಮಾತು ಎಲ್ಲೆಲ್ಲೂ ಕೇಳಿ  ಬರುತ್ತಿದೆ. ಶುಕ್ರವಾರ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ. ರಾಕಿ ಭಾಯ್ ಮತ್ತು ಆಧೀರನ ಝಲಕ್ ಗಾಗಿ ಕೋಟ್ಯಂತರಅಭಿಮಾನಿಗಳು ಕಾಯುತ್ತಿದ್ದಾರೆ. 

ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್ :
ಇದೀಗ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 (KGF 2) ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಟ್ವೀಟ್ ಮಾಡಿರುವ ನೀಲ್, ಇನ್ನೊಂದೇ ದಿನ ಬಾಕಿ.. Rocky Bhai is back ಎಂದು ಬರೆದುಕೊಂಡಿದ್ದಾರೆ.  ರಫ್ & ಟಫ್ ವ್ಯಕ್ತಿಯೊಬ್ಬ ಕೈಯಲ್ಲಿ ಬಲವಾದ ಸುತ್ತಿಗೆ ಹಿಡಿದು ನಿಂತಿರುವ ಕ್ಲೋಸ್ ಆಫ್ ಫೋಟೋ ಶೇರ್ ಮಾಡಿದ್ದಾರೆ.  ಡಾರ್ಕ್ ಕಪ್ಪು ಬೆಳಕಿನಲ್ಲಿ ವ್ಯಕ್ತಿಯ ಕೈ ಮತ್ತು ಸುತ್ತಿಗೆ ಮಾತ್ರ ಬಲವಾಗಿ ಕಾಣಿಸುತ್ತಿದ್ದು, ಚಿತ್ರದ ಕ್ಯೂರಿಯೋಸಿಟಿ ಇನ್ನಷ್ಟು ಹೆಚ್ಷಿಸಿದೆ. ಜೊತೆಗೆ ಜನವರಿ 8 ರಂದು ಹತ್ತು ಗಂಟೆ 18 ನಿಮಿಷಕ್ಕೆ ಟೀಸರ್ ರಿಲೀಸ್ ಆಗಲಿದೆ ಎಂದು ಬರೆದಿದ್ದಾರೆ. ಇತ್ತೀಚೆಗೆ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದ ಪ್ರಶಾಂತ್ ನೀಲ್ (Prashanth Neel) ರಫ್ & ಟಫ್ ನಿಲುವಿನಲ್ಲಿ ಕುಳಿತಿದ್ದ ಯಶ್ (Yash) ಫೋಟೋ ರಿಲೀಸ್ ಮಾಡಿ, ಕುತೂಹಲ ಹೆಚ್ಚಿಸಿದ್ದರು.

 

ಇದನ್ನೂ ಓದಿ : KGF chapter 2 ಟೀಸರ್ ಬಿಡುಗಡೆ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಪ್ರಶಾಂತ್ ನೀಲ್

ಕತ್ತಿ ಹಿಡಿದ ಅಧೀರನ ಪೋಸ್ಟರ್ ವೈರಲ್ : 
ಕೆಜಿಎಫ್ 2 ನ ಮತ್ತೊಂದು ಪೋಸ್ಟರ್ ಒಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟರ್ ರಿಲೀಸ್ ಮಾಡಿದ್ದು ಸಂಜುಬಾಬಾ. ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ ಸಂಜಯ್ ದತ್ (Sanjay Dutt).  ಅವರು ರಿಲೀಜ್ ಮಾಡಿರುವ ಪೋಸ್ಟರ್ ನಲ್ಲಿ ಕೇವಲ ಅಧೀರನ ಕತ್ತಿ ಹಿಡಿದ ಕೈ ಮಾತ್ರವೇ ಕಾಣಿಸುತ್ತಿದೆ. ಬೆರಳಿನಲ್ಲಿ ಮಿನುಗುತ್ತಿರುವ ಸಿಂಹ ಮುಖಿ ರಿಂಗ್ ಅಧೀರನ (Adheera) ಪಾತ್ರಕ್ಕೆ ಮುನ್ನುಡಿ ಬರೆದಂತಿದೆ.  ಜನವರಿ 8ಕ್ಕೆ ಟೀಸರ್ ರಿಲೀಸ್ (Teaser Release) ನೆನಪಿಟ್ಟುಕೊಳ್ಳಿ ಎಂದಿದ್ದಾರೆ ಸಂಜುಬಾಬ.

 

‘ರಮಿಕಾ ಸೇನ್’ ಎಕ್ಸೈಟೆಡ್..!
ಕೆಜಿಎಫ್ ವಿಚಾರದಲ್ಲಿ ರವೀನಾ ಟಂಡನ್ (Raveena Tandon) ಕೂಡಾ ಎಕ್ಸೈಟೆಡ್ ಆಗಿದ್ದಾರೆ.  ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ರಿಲೀಸ್ ಮಾಡಿರುವ ರವೀನಾ, ಈ ಕಾಯುವಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಕ್ಸೈಟ್ ಆಗಿ ಹೇಳಿದ್ದಾರೆ. ತನ್ನ ರಮಿಕಾ ಸೇನ್ (Ramika Sen) ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ.  ರಾಕ್ ಭಾಯ್ ಗೆ ಫಿದಾ ಆಗಿರುವ ರವೀನ್ ಟಂಡನ್, ಯಶ್ ಒಂದು ರತ್ನ ಎಂದು  ಕೊಂಡಾಡಿದ್ದಾರೆ.  ಸಂದರ್ಶನವೊಂದರಲ್ಲಿ ಇತ್ತೀಚೆಗೆ ಅವರು ಈ ಮಾತು ಹೇಳಿದ್ದಾರೆ.

 

ಇದನ್ನೂ ಓದಿ : KGF Chapter 2: ಬಿಡುಗಡೆಯಾಗುತ್ತಿದ್ದಂತೆ ಟ್ರೆಂಡ್ ಸೃಷ್ಟಿಸಿದೆ ಈ ಚಿತ್ರದ ಫಸ್ಟ್ ಲುಕ್

ದೇಶಾದ್ಯಂತ ಕುತೂಹಲ ಕೆರಳಿಸಿರುವ  ಈ ಚಿತ್ರದಲ್ಲಿ ರಾಕಿ ಭಾಯ್ ಆಗಿ ಯಶ್, ಸಂಜು ಬಾಬಾ ಅಧೀರನಾಗಿ, ರವೀನಾ ಟಂಡನ್ ರಮಿಕಾ ಸೇನ್ ಆಗಿ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News