ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..' ಸಾಂಗ್ ಅದ್ಧೂರಿ ರಿಲೀಸ್

ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.  ಅನಿರುದ್ಧ್ ಶಾಸ್ತ್ರಿ, ಅನನ್ಯ ಭಟ್ ಹಾಡಿರುವ ಈ ಹಾಡಿಗೆ ಶಿವು ಬೆರ್ಗಿಯವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ.

Written by - YASHODHA POOJARI | Last Updated : Jun 14, 2024, 04:48 PM IST
    • ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡು
    • ಧೂಳ್ ಎಬ್ಬಿಸಾವ..' ಹಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆ
    • ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ
ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..' ಸಾಂಗ್ ಅದ್ಧೂರಿ ರಿಲೀಸ್ title=
Gowri Cinema

ಹುಬ್ಬಳ್ಳಿ: ಇಂದ್ರಜಿತ್ ಲಂಕೇಶ್ ನಿರ್ದೇಶನದ, ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯ ಅಯ್ಯರ್ ನಟಿಸಿರುವ `ಗೌರಿ' ಚಿತ್ರದ `ಧೂಳ್ ಎಬ್ಬಿಸಾವ..' ಹಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.  ಅನಿರುದ್ಧ್ ಶಾಸ್ತ್ರಿ, ಅನನ್ಯ ಭಟ್ ಹಾಡಿರುವ ಈ ಹಾಡಿಗೆ ಶಿವು ಬೆರ್ಗಿಯವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ `ಧೂಳ್ ಎಬ್ಬಿಸಾವ..' ಸಾಂಗ್ ಸಖತ್ ವೈರಲ್ ಆಗುವ ಮೂಲಕ ಜನಮನಸೂರೆಗೊಂಡಿದೆ.

ಇದನ್ನೂ ಓದಿ: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆದಾಯ ಎಷ್ಟು? ವಿಶ್ವದ ಎಲ್ಲಾ ಬೋರ್ಡ್’ಗಳ ಹಣ ಸೇರಿಸಿದ್ರೂ ಇದಕ್ಕೆ ಸಮವಾಗಲ್ಲ!

ನೈಜ ಘಟನೆ ಆಧರಿಸಿ ದೊಡ್ಡ ಬಜೆಟ್‌’ನಲ್ಲಿ ಸಿನಿಮಾ ಮಾಡಿದ್ದು, ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಅವರ ಮೇಲಿನ ಅಭಿಮಾನದಿಂದ ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರಕ್ಕೆ ಅಕ್ಕನ ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ: ಕೊಹ್ಲಿ, ರೋಹಿತ್’ರನ್ನೂ ಮೀರಿಸಿದ ಈತ ಈ ವರ್ಷವೇ ಘೋಷಿಸಲಿದ್ದಾನೆ ನಿವೃತ್ತಿ!

ಯುವ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌’ಗೆ ಪ್ರವೇಶ ಮಾಡಿದ್ದಾರೆ. ಪ್ರಿಯಾಂಕ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾಲತಿ ಸುಧೀರ್, ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News