Karishma Kapoor : ಇತ್ತೀಚಿಗೆ ಸಿನಿ ಇಂಡಸ್ಟ್ರಿಯಿಂದ ʼಕೋಸ್ಟಿಂಗ್ ಕೌಚ್ʼ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿವೆ. ತಮಗಾದ ಅನ್ಯಾಯದ ಬಗ್ಗೆ ನಟಿಯರು ದೂರು ನೀಡುತ್ತಿದ್ದಾರೆ. ಗ್ಲಾಮರ್ ಇಂಡಸ್ಟ್ರಿ ಇರಲಿ, ಸಿನಿಮಾ ಇಂಡಸ್ಟ್ರಿ ಇರಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಕಿರುಕುಳ ಸಾಮಾನ್ಯವಾಗಿ ಬಿಟ್ಟಿದೆ. ಈ ಪೈಕಿ ಇದೀಗ ಮಾಜಿ ಸ್ಟಾರ್ ನಟಿ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ.
ಹೌದು.. ಕಪೂರ್ ಕುಟುಂಬದಿಂದ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಕರಿಷ್ಮಾ ಕಪೂರ್ ಚಿತ್ರರಂಗದಿಂದ ತಾವು ಅನುಭವಿಸಿದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ. ಅದು ಬೇರೆ ಯಾರಿಂದಲೂ ಅಲ್ಲ, ತಮ್ಮ ಪತಿಯಿಂದ. ಡಿ.ರಾಮಾನಾಯ್ಡು ನಿರ್ದೇಶನದ 'ಪ್ರೇಮ ಖೈದಿ' ಹಿಂದಿ ರಿಮೇಕ್ ಮೂಲಕ ಬಾಲಿವುಡ್ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಕರಿಷ್ಮಾ ಕಪೂರ್ ನಂತರ ಬಿ-ಟೌನ್ನ ಟಾಪ್ ನಾಯಕಿಯಾದರು.
ಇದನ್ನೂ ಓದಿ:Kantara 2 : ಕಾಂತಾರ 2 ಬಿಗ್ ಅಪ್ಡೇಟ್..! ರಿಷಬ್ ಶೆಟ್ಟಿ ಸಿನಿಮಾದಲ್ಲಿ ಜೂ.ಎನ್ಟಿಆರ್
ನಾಯಕಿಯಾಗಿ ಉತ್ತಮ ಹಂತದಲ್ಲಿರುವಾಗಲೇ ಸಂಜಯ್ ಕಪೂರ್ ಅವರನ್ನು ಮದುವೆಯಾದರು. ಮದುವೆಯ ನಂತರ ಕೆಲವು ವರ್ಷಗಳವರೆಗೆ ಎಲ್ಲವೂ ಸರಿಯಾಗಿತ್ತು, ಆದರೆ ನಂತರ ವಿಚ್ಛೇದನ ಪಡೆದರು. ಮಾಧ್ಯಮವೊಂದರ ಸಂದರ್ಶನದಲ್ಲಿ ಪತಿಗೆ ವಿಚ್ಛೇದನ ನೀಡಲು ಕಾರಣಗಳನ್ನು ತಿಳಿಸಿರುವ ನಟಿ, ತಮ್ಮ ಪತಿ ತಮ್ಮನ್ನು ಹರಾಜಿಗಿಡುತ್ತಾರೆ ಅಂತ ಹೇಳಿ ಸಂಚಲನ ಮೂಡಿಸಿದ್ದಾರೆ.
ಯಾರು ಹೆಚ್ಚು ಹಣ ನೀಡುತ್ತಾರೋ ಅವರ ಜೊತೆ ಇಡೀ ರಾತ್ರಿ ಕಳೆಯಬೇಕಾಗುತ್ತದೆ. ಇಂತಹ ಹೇಯ ಕೆಲಸಗಳನ್ನು ಮಾಡಲು ನಾನು ಒಪ್ಪುವುದಿಲ್ಲ. ಆತನ ವರ್ತನೆ ತಿಳಿದು ವಿಚ್ಛೇದನ ನೀಡಿದ್ದೆ. ಅಷ್ಟೇ ಅಲ್ಲ, ಮೊದಲ ಪತ್ನಿ ಬೇರೆಯಾಗಿದ್ದರೂ ಸಹ ಆಕೆಯೊಂದಿಗೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಾರೆ. ಆತನ ಕಿರುಕುಳ ಸಹಿಸಲಾಗಲಿಲ್ಲ. ಅದಕ್ಕೇ ನಾನು ವಿಚ್ಛೇದನ ಪಡೆದೆ ಅಂತ ಕರೀಷ್ಮಾ ಡೈವೋರ್ಸ್ಗೆ ಕಾರಣ ಬಿಚ್ಚಿಟ್ಟರು.
ಇದನ್ನೂ ಓದಿ:Bhairathi Ranagal: ʻಭೈರತಿ ರಣಗಲ್ʼ ಚಿತ್ರದಲ್ಲಿ ಶ್ರೀಮುರುಳಿ: ಏನಂದ್ರು ರೋರಿಂಗ್ ಸ್ಟಾರ್!
ಇನ್ನು ಕರೀಷ್ಮಾ ಅವರು 2003 ರಲ್ಲಿ ವಿವಾಹವಾದರು, ಕೆಲವು ವರ್ಷಗಳ ಕಾಲ ಚನ್ನಾಗಿದ್ದ ಜೋಡಿ, 2016 ರಲ್ಲಿ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕರಿಷ್ಮಾ ಕಪೂರ್ ಬಗ್ಗೆ ಹೇಳುವುದಾದರೆ, ಅವರು ಬಾಲಿವುಡ್ ಶೋಮ್ಯಾನ್ ರಾಜ್ ಕಪೂರ್ ಅವರ ಮೊಮ್ಮಗಳು. ರಣಧೀರ್ ಕಪೂರ್ ಅವರ ಮೊದಲ ಮಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.