Toxic: 'ಟಾಕ್ಸಿಕ್' ಚಿತ್ರದಿಂದ ಕರೀನಾ ಕಪೂರ್ ಔಟ್‌: ರಾಕಿಂಗ್‌ ಸ್ಟಾರ್‌ಗೆ ಜೋಡಿಯಾಗ್ತಾರ ಈ ಬಾಲಿವುಡ್‌ ಬ್ಯೂಟಿ!

Toxic Update: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾದಿಂದ ನಟಿ ಕರೀನಾ ಕಪೂರ್‌ ಖಾನ್‌ ಔಟ್‌ ಆಗಿದ್ದಾರೆ. ಇದೀಗ ಈ ಚಿತ್ರತಂಡಕ್ಕೆ ಮತ್ತೊಬ್ಬ ಬಾಲಿವುಡ್‌ ನಟಿಮಣಿಯ ಎಂಟ್ರೀ ಆಗಲಿದೆ. ಹಾಗಾದ್ರೇ ಈ ಬಿ-ಟೌನ್‌ ಬೆಡಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Apr 15, 2024, 03:37 PM IST
  • ಈಗಾಗಲೇ ಸಿನಿಮಾದ ತಾರಾಂಗಣದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಇದರಲ್ಲಿ ಯಶ್‌ಗೆ ಬಾಲಿವುಡ್‌ ನಟಿಯೊಬ್ಬರು ಜೋಡಿಯಾಗಲಿದ್ದಾರೆ ಎನ್ನಲಾಗಿದೆ.
  • ಸದ್ಯ 'ಟಾಕ್ಸಿಕ್' ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.
  • ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕ್ರೂ ಚಿತ್ರದಲ್ಲಿ ನಟಿಸಿದ್ದು, ಸದ್ಯ ಸಿಂಗಂ ಅಗೇನ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
Toxic: 'ಟಾಕ್ಸಿಕ್' ಚಿತ್ರದಿಂದ ಕರೀನಾ ಕಪೂರ್ ಔಟ್‌: ರಾಕಿಂಗ್‌ ಸ್ಟಾರ್‌ಗೆ ಜೋಡಿಯಾಗ್ತಾರ ಈ ಬಾಲಿವುಡ್‌ ಬ್ಯೂಟಿ! title=

Kareena Kapoor Out From Toxic: ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಿಂದ ನಟಿ ಕರೀನಾ ಕಪೂರ್‌ ಖಾನ್‌ ಹೊದ ನಡೆದಿದ್ದಾರೆ. 'ಟಾಕ್ಸಿಕ್' ಚಿತ್ರದ ಶೂಟಿಂಗ್‌ ಇದೇ ತಿಂಗಳಿಂದ ಶುರುವಾಗಲು ಸಜ್ಜಾಗಿದೆ. ಈಗಾಗಲೇ ಸಿನಿಮಾದ ತಾರಾಂಗಣದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಇದರಲ್ಲಿ ಯಶ್‌ಗೆ ಬಾಲಿವುಡ್‌ ನಟಿಯೊಬ್ಬರು ಜೋಡಿಯಾಗಲಿದ್ದಾರೆ ಎನ್ನಲಾಗಿದೆ.

ಟಾಕ್ಸಿಕ್‌ ಚಿತ್ರದಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಹಿಂದಿ ನಟ ನವಾಜುದ್ದೀನ್ ಸಿದ್ದಿಕ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಹಾಗೆಯೇ ಇತ್ತೀಚೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸಲು ಸಿದ್ದರಾಗಿದ್ದಾರೆ ಎನ್ನಲಾಗಿದೆ. ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ನಟಿಗೆ ಇದು ಚೊಚ್ಚಲ ಕನ್ನಡ  ಸಿನಿಮಾವಾಗಲಿದೆ.  

ಇದನ್ನೂ ಓದಿ: ಕೋಟಿಗಳ ಒಡೆಯನಾಗಿದ್ದರೂ ಸಲ್ಮಾನ್ ಖಾನ್ ವಾಸಿಸುವುದು 1 BHK ಮನೆಯಲ್ಲಿಯೇ!ಈ ಮಹಿಳೆಯೇ ನಟನ ಈ ನಿರ್ಧಾರಕ್ಕೆ ಕಾರಣ

ಈಗಾಗಲೇ ಬಾಲಿವುಡ್‌ನ ಹಲವಾರು ನಟಿಮಣಿಯರು  ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದವರು, ಇದೀಗ ಕನ್ನಡ ಸಿನಿಮಾಗಳ ಜನಪ್ರಿಯತೆಯಿಂದಾಗಿ ಚಂದನವನದಲ್ಲಿ ನಟಿಸಲು ಸಹ ನಟ-ನಟಿಯರು ಮುಂದಾಗುತ್ತಿದ್ದಾರೆ. ಸದ್ಯ ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಟಾಕ್ಸಿಕ್‌ ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಈ ನಟಿ ಕ್ರೂ ಚಿತ್ರದಲ್ಲಿ ನಟಿಸಿದ್ದು, ಸದ್ಯ ಸಿಂಗಂ ಅಗೇನ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ  ಸಿನಿಮಾದ ಇತರೆ ಪಾತ್ರವರ್ಗದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು  ಘೋಷಣೆ ಮಾಡಲು ಯೋಜಿಸಿದೆ.

ಇದನ್ನೂ ಓದಿ:ಮೋಸ್ಟ್ ಪಾಪ್ಯುಲರ್ ಹೀರೋಯಿನ್..12 ಜನರ ಜೊತೆ ಅಫೇರ್.. ಮದುವೆಯಾಗಿ ವಿಚ್ಛೇದನ ಪಡೆದು ಒಂಟಿಯಾಗಿರುವ ನಟಿ ಈಕೆ!!

ಟಾಕ್ಸಿಕ್‌ ಚಿತ್ರಕ್ಕೆ ಸಂಗೀತ ಸಂಯೋಜಕ  ಜೆರೆಮಿ ಸ್ಟಾಕ್  ಮ್ಯೂಸಿಕ್‌ ಕಂಪೋಸ್‌ ಮಾಡುತ್ತಿದ್ದು, ಇನ್ನೂ ಸಿನಿಮಾದ ದೃಶ್ಯಗಳನ್ನು ಛಾಯಾಗ್ರಹಕ ರಾಜೀವ್ ರವಿ ಸೆರೆಹಿಡಿಯಲಿದ್ದಾರೆ. ಇದು ಪ್ಯಾನ್‌ ವರ್ಲ್ಡ್‌ ಚಿತ್ರವಾಗಿ ಮುಂದಿನ ವರ್ಷ ತೆರೆಕಾಣಲಿದ್ದು, ಸಿನಿರಸಿಕರಲ್ಲಿ ಈ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.  

Trending News