Kannada Serial: ರವಿತೇಜ ನಿರ್ದೇಶನದಲ್ಲಿ ಧಾರವಾಹಿಯು ಯಶಸ್ವಿ 100 ಕಂತುಗಳನ್ನು ಪೂರೈಸಿ ಮುನ್ನುಗುತ್ತಿದೆ. ಇದರನ್ವಯ ತಂಡವು ಹಸೆರುಘಟ್ಟದಲ್ಲಿರುವ ’ಕಾವೇರಿ ವನಿತಾ ಸೇವಾ ಶ್ರಮ’ಕ್ಕೆ ಭೇಟಿ ನೀಡಿ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿಕೊಂಡು ಸಂಭ್ರಮವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕಲಾವಿದರು ಸಂತಸವನ್ನು ಹಂಚಿಕೊಂಡರು. ಅಲ್ಲದೆ ಕನ್ನಡದ ಸೀರಿಯಲ್ ತೆಲುಗುದಲ್ಲಿ ’ಭೈರವಿ’ ಮತ್ತು ಮರಾಠಿ ಭಾಷೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಿಮೇಕ್ ಆಗುತ್ತಿರುವುದು ವಿಶೇಷ.
ಕಥೆಯ ಕುರಿತು ಹೇಳುವುದಾದರೆ ಶಿವಗಾಮಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅಗರ್ಭ ಶ್ರೀಮಂತೆ. ಈಕೆಯ ಸಂಸ್ಥೆಗೆ ಶಿಕ್ಷಕನಾಗಿ ಸೇರುವ ನಾಯಕ ಅಶೋಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇಬ್ಬರಿಗೂ ಹುಟ್ಟಿದ ಆರು ವರ್ಷದ ಮಗುವೇ ಶಾಂಭವಿ. ತರುವಾಯ ಮಗು ಕಾಣೆಯಾಗುತ್ತದೆ. ಇದರಿಂದ ಅಮ್ಮ ಹುಚ್ಚಿಯಾಗುತ್ತಾಳೆ.
ಇದನ್ನೂ ಓದಿ-ಮೈಕಲ್ ತಂದೆ ಯಾರು ಗೊತ್ತಾ..? ಫ್ಯಾಮಿಲಿ ಬಗ್ಗೆ ಮೈಕಲ್ ಹೇಳಿದ್ದೇನು..?
ಅದೇ ಸಮಯಕ್ಕೆ ದೇವಿಯ ಪ್ರತಿಷ್ಠಾಪನೆ ಆಗುತ್ತದೆ. ಕಾಣೆಯಾದ ಮಗುವಿಗೂ ದೇವಿ ಇರುವ ಜಾಗಕ್ಕೂ ಸಂಬಂಧವಿರುತ್ತದೆ. ಮುಂದೇ ಅನೇಕ ತಿರುವುಗಳು ಪಡೆದುಕೊಳ್ಳುತ್ತದೆ. ಅದೇನೆಂದು ತಿಳಿಯಲು ಧಾರವಾಹಿ ವೀಕ್ಷಿಸಬೇಕು.
ಶಾಂಭವಿ ಮತ್ತು ಭೈರವಿ ಹೀಗೆ ಎರಡು ಪಾತ್ರದಲ್ಲಿ ಬೇಬಿ ರಚನಾ.ಟಿ.ಬಿ, ಅಮ್ಮನಾಗಿ ಐಶ್ವರ್ಯಸಿಂಧೋಗಿ, ಖಳನಾಗಿ ಚೇತನ್ಗಂಧರ್ವ ಇವರೊಂದಿಗೆ ಸೋನಂರೈ, ಅಂಬುಜಾಕ್ಷಿ, ಪೂಜಿತಾ, ಡಾಲಿರಾಜೇಶ್, ಸೂರ್ಯಕುಂದಾಪುರ, ರೋಹಿತ್ನಾಯರ್, ಶ್ಯಾಮಲಮ್ಮ ಮುಂತಾದವರು ನಟಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಡಾ.ವಿ.ನಾಗೇಂದ್ರಪ್ರಸಾದ್, ವೈಬಿಆರ್.ಮನು ಛಾಯಾಗ್ರಹಣ, ಪರಂ ಸಂಕಲನ, ಪುಗಳ್ಮಣಿ ರಚನೆ-ಚಿತ್ರಕಥೆ, ರಾಧಾವೆಂಕಟ್ ಸಂಭಾಷಣೆ ಇರಲಿದೆ.
ಶಾಂಭವಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ’ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ-ಒಂದು ಟೈಮಲ್ಲಿ ಬಾಡಿಶೇಮಿಂಗ್‌ಗೆ ಒಳಗಾದ 45 ವರ್ಷದ ನಟ.. ಇಂದು ಕಮಲ್, ದಳಪತಿ ರೇಂಜ್‌ಗೆ ಈತನ ಕ್ರೇಜ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.