ತೆಲುಗು ಚಿತ್ರದಲ್ಲಿ ಕನ್ನಡತಿ.. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿ!

Shrileela: 'ಮಾಸ್ ಮಹಾರಾಜ' ಬಿರುದಾಂಕಿತ ರವಿತೇಜ ಜೊತೆಗೆ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ. 

Written by - Malathesha M | Edited by - Chetana Devarmani | Last Updated : Feb 16, 2022, 02:35 PM IST
  • ಕನ್ನಡತಿ ಶ್ರೀಲೀಲಾಗೆ ಗೋಲ್ಡನ್‌ ಆಪರ್ಚುನಿಟಿಗಳು ಹುಡುಕಿಕೊಂಡು ಬರುತ್ತಿವೆ
  • ಶ್ರೀಲೀಲಾರ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ
  • 'ಮಾಸ್ ಮಹಾರಾಜ' ಬಿರುದಾಂಕಿತ ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿ
ತೆಲುಗು ಚಿತ್ರದಲ್ಲಿ ಕನ್ನಡತಿ.. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿ!  title=

ಕನ್ನಡತಿ ಶ್ರೀಲೀಲಾಗೆ (https://zeenews.india.com/kannada/photo-gallery/sreeleela-know-the-interesting-facts-about-kannada-actress-sreeleela-49179Shrileela) ಗೋಲ್ಡನ್‌ ಆಪರ್ಚುನಿಟಿಗಳು ಹುಡುಕಿಕೊಂಡು ಬರುತ್ತಿವೆ. ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' (Kiss) ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ರೀಲೀಲಾಗೆ ಈಗ ಮುಟ್ಟಿದ್ದೆಲ್ಲಾ ಚಿನ್ನ. ಸದ್ಯ ‌'ಬೈ ಟು ಲವ್' (By2Love) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಹೊತ್ತಲ್ಲೇ ಶ್ರೀಲೀಲಾರ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.

ಇದನ್ನೂ ಓದಿ:PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!

'ಮಾಸ್ ಮಹಾರಾಜ' ಬಿರುದಾಂಕಿತ ರವಿತೇಜ (Ravi Teja) ಜೊತೆಗೆ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ತೆರೆ ಕಾಣುತ್ತಿರುವ 'ಧಮಾಖಾ' (Dhamaka) ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ವಿಶೇಷವಾಗಿ ಪ್ರೇಮಿಗಳ ದಿನದಂದೇ ಪೋಸ್ಟರ್‌ ರಿಲೀಸ್‌ ಆಗಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Dhamaka

ತೆಲುಗಿನಲ್ಲೂ ಶ್ರೀಲೀಲಾ ಮಿಂಚಿಂಗ್:

ಪೋಸ್ಟರ್‌ನಲ್ಲಿ ಶ್ರೀಲೀಲಾ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಕಟ್ಟೆಯ ಮೇಲೆ ಜೊತೆಯಾಗಿ ಕುಳಿತು ರವಿತೇಜ ಹಾಗೂ ಶ್ರೀಲೀಲಾ ಏನೋ ಸೀರಿಯಸ್‌ ವಿಚಾರದ ಬಗ್ಗೆ ಚರ್ಚಿಸುತ್ತಿರುವಂತೆ ಪೋಸ್ಟರ್‌ನಲ್ಲಿ (Dhamaka Poster) ಕಂಡುಬಂದಿದೆ. ಈ ಸಿನಿಮಾಗೆ ಶ್ರೀಲೀಲಾ ನಾಯಕಿ, ಇನ್ನು 'ಮಾಸ್ ಮಹಾರಾಜ' ರವಿತೇಜ ‌ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆ.

ಇದನ್ನೂ ಓದಿ:'ಡಿ ಬಾಸ್' ಗೆ ಜನ್ಮದಿನದ ಸಂಭ್ರಮ.. ಅಪ್ಪು ನಿಧನದ ಹಿನ್ನೆಲೆ ಬರ್ತ್‌ಡೇ ಆಚರಣೆ ಮಾಡಲ್ಲ ಎಂದ ದರ್ಶನ್

ಅಂದಹಾಗೆ ಶ್ರೀಲೀಲಾ ಹುಟ್ಟಿದ್ದು ಅಮೆರಿಕದಲ್ಲಿ. ಮಿಷಿಗನ್ ರಾಜ್ಯದಲ್ಲಿ ಜನಿಸಿದ ಕನ್ನಡತಿ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದ್ದವರು. ಬಳಿಕ ತೆಲುಗು ಚಿತ್ರರಂಗಕ್ಕೂ (Tollywood) ಎಂಟ್ರಿಕೊಟ್ಟು, ಈಗ ಮತ್ತೊಂದು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.  ಪ್ರೇಮಿಗಳ ದಿನದಂದೇ ಶ್ರೀಲೀಲಾ ನಟನೆಯ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿರುವುದು ಅಭಿಮಾನಿಗಳ ಕ್ರೇಜ್‌ ಹೆಚ್ಚಾಗುವಂತೆ ಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News