Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
ಹೌದು, ನಟಿ ಕಲ್ಪನಾ ಅವರಿಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಆಸೆ ಇರುತ್ತೆ, ತನ್ನ ಆಸೆಯನ್ನು ನಟಿ ತನ್ನ ಚಿಕ್ಕಮ್ಮನ ಬಳಿ ಹೇಳಿಕೊಳ್ಳುತ್ತಾರೆ. ಕಲ್ಪನಾ ಆಸೆಗೆ ಮತ್ತೊಂದು ಮಾತಡದೇ ಅವರ ಚಿಕ್ಕಮ ತನಗೆ ಚಿತ್ರರಂಗದಲ್ಲಿ ಪರಿಚಯವಿರುವ ಶಶಿಕುಮಾರ್ ಎಂಬಾತನ ಬಳಿ ಮಾತನಾಡಿ ಕಲ್ಪನಾಳಿಗೆ ಒಂದು ಪಾತ್ರ ಬೇಕಿದೆ ಎಂದು ಕೇಳ್ತಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ರಶ್ಮಿಕಾ..ಖಂಡಿತಾ ಇದು ವಿಜಯ್ ದೇವರಕೊಂಡ ಅವರಿಗಾಗಿಯೇ ಎಂದು ನೆಟ್ಟಿಗರ ವಾದ..!
ನರಸಿಂಹ ರಾಜು ಅವರನ್ನು ಭೇಟಿ ಮಾಡುವ ಶಶಿಕುಮಾರ್ ಕಲ್ಪನಾ ಅವರಿಗೆ ಸಿನಿಮಾದಲ್ಲಿ ಒಂದು ಚಾನ್ಸ್ ಬೇಕು ಎಂದು ಕೇಳ್ತಾರೆ. ಅದಕ್ಕೆ ಉತ್ತರಿಸುವ ನರಸಿಂಹ ರಾಜು"ಈಗಿನ ಇಂಡಸ್ಟ್ರಿ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ, ನಾವೇ ಪಾತ್ರಗಳಿಲ್ಲದೆ ತತ್ತರಿಸಿ ಹೋಗಿದ್ದೇವೆ. ಆ ಹುಡುಗಾಯನ್ನ ಮೊದಲು ಓದು ಹಾಳು ಮಾಡಿಕೊಳ್ಳದೆ, ಓದಿನ ಕಡೆಗೆ ಗಮನ ಕೊಡೋಕೆ ಹೇಳಿ ಅಂತ ಹೇಳಿ ಕಳಿಸಿಬಿಡುತ್ತಾರೆ.
ಆದ್ರೆ ಅವರಿಗೆ ಮನಸ್ಸು ಓಪಲ್ಲ ನಂತರ ಕಲ್ಪನಾ ಅವರನ್ನು ಕರೆದು ಸ್ವಲ್ಪ ಅನುಭವ ಇರ್ಲಿ ಎಂದು ನರಸಿಂಹ ರಾಜು ಅವರು ಕಲ್ಪನಳನ್ನ ಬಳ್ಳಾರಿಯಲ್ಲಿನ ಲಲಿತಮ್ಮ ಎನ್ನುವ ನಾಟಕ ಕಂಪೆನಿಗೆ ಸೇರಿಸುತ್ತಾರೆ. ಅಲ್ಲಿ ಕಲ್ಪನಾ ಒಳ್ಳೆಯ ನಾಟಕ ಮಾಡುತ್ತಲೇ ತನ್ನ ಆಕ್ಟಿಂಗ್ ಮೂಲಕ ಒಳ್ಳೆ ಹೆಸರು ಕೂಡ ಪಡೀತಾರೆ. ಇದನ್ನು ನೋಡಿದ ಮ್ಯಾನೇಜರ್ ಮಂಗಳೂರಿನ ಪ್ರಸಿದ್ಧ ನಾಟಕ ಕಂಪನಿಗೆ ಸೇರುಸ್ತುತ್ತಾರೆ. ಹೀಗೆ ನಾಟಕದಲ್ಲಿ ಅಧ್ಯಯನ ಮಾಡಬೇಕಾದ್ರೆ ಒಂದು ದಿನ , ಡಾ. ರಾಜ್ ಕುಮಾರ್ ಅವರ ʻಸಾಕು ಮಗಳುʼ ಎಂಬ ಚಿತ್ರದ ಒಂದು ಪಾತ್ರದಲ್ಲಿ ನಟಿಸೋಕೆ ಕಲ್ಪನಾ ಅವರಿಗೆ ಒಂದು ಚಾನ್ಸ್ ಸಿಗುತ್ತದೆ. ಇದೇ ಒಂದು ಸಣ್ಣ ಅವಕಾಶಕ್ಕಾಗಿ ಕಾಯುತ್ತಿದ್ದ ಕಲ್ಪನಾ ಅದ್ಬುತ ನಟನೆ ಮಾಡಿ ಎಲ್ಲರಿಂದಲೂ ಬೆಷ್ ಎನಿಸಿಕೊಳ್ಳುತ್ತಾರೆ.
ನಂತರ ಕಲ್ಪನಾ ಅವರನ್ನು ಹುಡುಕುತ್ತ ಹಲವಾರು ಅವಕಾಶಗಳು ಬರಲು ಶುರುವಾಗುತ್ತದೆ ಆದರೆ ಅಲ್ಲೇ ನೋಡಿ ಕಲ್ಪನಾ ಅವರಿಗೆ ಅವಮಾನಗಳಾಗೋಕೆ ಶುರುವಾಗೋದು. ಸಿನಿಮಾ ಅವಕಾಶಗಳೇನೋ ಬರೋಕೆ ಶುರುವಾಗುತ್ತೆ ಆದ್ರೆ ನಟಿಯ ಸೌಂದರ್ಯವನ್ನು ನೋಡಿ ನಿರ್ಮಾಪಕರು ಆಕೆಯನ್ನು ಮೆಚ್ಚುತ್ತಾರೆ ಆದ್ರೆ ಕಲ್ಪನಾ ಅವರ ವಾಯ್ಸ್ ಕೇಳಿ ಅವರನ್ನು ಹೀಯಲಳಿಸಲು ಶುರು ಮಾಡ್ತಾರೆ. ಆಕೆಯ ಭಾಷೆಯನ್ನ ನಿಂದಿಸುತ್ತಾರೆ. ಈಕೆ ಕೊಂಕಣಿ ತುಳು ಎಲ್ಲವನು ಬೆರೆಸಿ ಕನ್ನಡ ಮಾತಾಡ್ತಾಳೆ ಈಕೆ ಬಾಷೆ ಎನ್ ಅಷ್ಟೊಂದು ಚೆನ್ನಾಗಿ ಇಲ್ಲ ಅಂತಾ ಕಲ್ಪನಾ ಅವ್ರನ್ನ ರಿಜೆಕ್ಟ್ ಮಾಡ್ತಾರೆ. ಆದ್ರೆ ಇದ್ಯಾವುದನ್ನೂ ಕಲ್ಪನಾ ಸೀರಿಯಸ್ ಆಗಿ ತೆಗೆದು ಕೊಳ್ಳಲ್ಲ ತಮಾಷೆ ಎಂದೇ ಭಾವಿಸಿ ಸುಮ್ಮನಾಗುತ್ತಾರೆ.
ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆದ ರೋಹಿತ್ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..?
ಸಿಕ್ಕ ಸಿನಿಮಾಗಳಲ್ಲಿ ನಟನೆ ಮಾಡಲು ಆರಂಭಿಸುವ ಕಲ್ಪನಾರಿಗೆ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಾಗುತ್ತದೆ. ಪುಟ್ಟಣ್ಣ ಕಣಗಾಲ್, ಕಲ್ಪನಾ ಅವರನ್ನು ಆರ್ ನ್ ಜೈ ಗೋಪಾಲ್ ಅವರ ಬಳಿ ಕರೆದೊಯ್ತಾರೆ. "ಕಲ್ಪನಾರಿಗೆ ಯಾವುದು ಅವಕಾಶ ಸಿಕ್ತ ಇಲ್ಲ ಸ್ವಾಮಿ ಏನಾದ್ರೂ ಮಾಡಿ ಇವರಿಗೆ ಚಾನ್ಸ್ ಕೊಡ್ಸಿ" ಅಂತರೆ. ಇದರಿಂದ ಕಲ್ಪನಾ ಅವರಿಗೆ ಅವಕಾಶಗಳು ಸಿಗಲು ಆರಂಭಿಸುತ್ತದೆ.
ʻಪದವೀಧರ, ಎನ್ನುವ ಸಿನಿಮಾ ಒಂದು ರೆಡಿ ಆಗುವ ಸಮಯ ಕಲ್ಪನಾ ಅವ್ರನ್ನ ಈ ಸಿನಿಮಾಗೆ ಆಯ್ಕೆ ಮಾಡಿಕೊಳ್ಳೊದಕ್ಕಾಗಿ ನಿರ್ಮಾಪಕರು ಅವರ ಮನೆಗೆ ಬರ್ತಾರೆ . ತಲೆಗೆ ಎಣ್ಣೆ ನೀರು ಹಚ್ಚಿ ಕಲ್ಪನಾ ಕೂತಿರುತ್ತಾರೆ ಅದನ್ನು ನೋಡಿದ ನಿರ್ಮಾಪಕರು "ಏನಪ್ಪಾ ಹೀಗಾಯ್ತು ಬೇಡ ಇದು ನಮ್ಮ ಸಿನೆಮಾಗೆ ಅಪಶಕುನ ಆಗಬಹುದು ಅಂತ ಹೊರಟು ಹೋಗ್ತಾರೆ. ನಂತರ ಸಿನಿಮಾದ ನಿರ್ದೇಶಕರು "ಇರಲಿ ಯಾವುದಕ್ಕೂ ಒಂದು ಅವಕಾಶ ಕೊಡೋಣ" ಅಂತ ಹೇಳಿ ಕಲ್ಪನಾ ಅವರನ್ನು ʻಪದವೀಧರʼ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆ ಮಾಡ್ತಾರೆ.
ಇರ್ಲಿ ಈ ಹುಡುಗಿಗೆ ಒಂದು ಚಾನ್ಸ್ ಕೊಡೋಣ ಅಂತಾ ಹೇಳಿದ ನಿರ್ದೇಶಕರು ಕೂಡ , ಈ ಹುಡುಗಿಗೆ ಬೆನ್ನು ಗೂನ್ ಇದೆ ಈಕೆಯ ಸಿನಿಮಾವನ್ನು ಜನ ಒಪ್ಪುತ್ತಾರಾ? ಅಂತಾ ಕಲ್ಪನಾ ಅವರನ್ನು ಹೀಯಳಿಸುತ್ತಾರೆ. ಎಲ್ಲಾ ಅಡೆ ತಡೆಗಳ ನಂತರ ಕಲ್ಪನಾ ಸಿನಿಮಾಗೆ ಹೀರೋಯಿನ್ ಅನ್ನೋದು ಫಿಕ್ಸ್ ಆಗುತ್ತೆ. ʻಪದವೀಧರʼ ಸಿನಿಮಾದಲ್ಲಿ ಕಲ್ಪನಾ ನಟಿಸಿ ಎಲ್ಲರಿಂದಲೂ ಬೆಷ್ ಎನಿಸಿಕೊಳ್ಳುತ್ತಾರೆ. ಹೀಗೆ ಕಲ್ಪನಾ ಅವರ ರೋಚಕ ಸಿನಿಮಾ ಜರ್ನಿ ಶುರುವಾಗುತ್ತೆ. ಹಾಗೆ ಅಂದು ಅವಮಾನಕ್ಕೊಳಗಾಗಿದ್ದ ನಟಿಯನ್ನು ಇಂದು ಹಲವಾರು ಮಂದಿ ಮನದಲ್ಲಿಟ್ಟು ಪೂಜೆ ಮಾಡುತ್ತಾರೆ. ನೋಡಿದ್ರಿ ಅಲ್ವಾ ತನ್ನನ್ನು ಹೀಯಾಳಿಸಿದವರನ್ನು ನಟಿ ಸೀರಿಯಸ್‌ಯಾಗಿ ತೆಗೆದುಕೊಂಡು ಅಂದು ಹಿಂದೆ ಸರಿದಿದ್ದರೆ ಇಂದು ಆಕೆ ದೊಡ್ಡ ನಟಿ ಆಗಲು ಸಾಧ್ಯವೇ ಇರ್ತಾ ಇರಲಿಲ್ಲ. ಜೀವನದಲ್ಲಿ ಇಂತಹವರ ಕಥೆಯೂ ಉದಾಹರೆಣೆಯಾಗಿ ಉಳಿಯುತ್ತದೆ. ಇದು ಯುವ ಪೀಳಿಗೆಗೆ ಪ್ರೇರಣೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ