Kabzaa Hindi teaser : ಕಬ್ಜ ಹಿಂದಿ ಟೀಸರ್ ರಿಲೀಸ್, ಬಾಲಿವುಡ್‌ನಲ್ಲಿ ಮತ್ತೆ ಕನ್ನಡ ಸಿನಿಮಾ ಹವಾ!

Kabzaa Hindi teaser : ಕಬ್ಜದ ಹಿಂದಿ ಟೀಸರ್ ಇಂದು ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಬ್ಜ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

Written by - Chetana Devarmani | Last Updated : Dec 1, 2022, 02:38 PM IST
  • ಕಬ್ಜದ ಹಿಂದಿ ಟೀಸರ್ ಇಂದು ರಿಲೀಸ್‌ ಆಗಿದೆ
  • ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ಸಿನಿಮಾ
  • ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಿರ್ಮಾಣದ ಚಿತ್ರ
Kabzaa Hindi teaser : ಕಬ್ಜ ಹಿಂದಿ ಟೀಸರ್ ರಿಲೀಸ್, ಬಾಲಿವುಡ್‌ನಲ್ಲಿ ಮತ್ತೆ ಕನ್ನಡ ಸಿನಿಮಾ ಹವಾ! title=
ಕಬ್ಜ

Kabzaa Hindi teaser : ಕಬ್ಜದ ಹಿಂದಿ ಟೀಸರ್ ಇಂದು ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಬ್ಜ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 25 ರಂದು ಚಿತ್ರಮಂದಿರಗಳಿಗೆ ಬರಲಿದೆ. ನಿರ್ಮಾಪಕ ಆನಂದ್ ಪಂಡಿತ್ ಅವರು ಕಬ್ಜ ಚಿತ್ರದ ಹಿಂದಿ ಟೀಸರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಫಸ್ಟ್ ಲುಕ್ ಎಲ್ಲವನ್ನೂ ಹೇಳುತ್ತದೆ! #Kabzaa ಟೀಸರ್ ಈಗ ಹೊರಬಂದಿದೆ. ಶೀಘ್ರದಲ್ಲೇ ಭಾರತೀಯ ಚಿತ್ರಮಂದಿರಗಳಲ್ಲಿ ಬರಲಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ : ಡಿ. 11ಕ್ಕೆ ಯಂಗ್‌ ರೆಬಲ್‌ ಸ್ಟಾರ್‌ ಎಂಗೇಜ್‌ಮೆಂಟ್‌! ಇವರೇ ನೋಡಿ ಅಂಬಿ ಸೊಸೆ!

ಕಬ್ಜ ಸಿನಿಮಾದ ಕತೆ ಬ್ರಿಟಿಷರಿಂದ ಕೊಲ್ಲಲ್ಪಟ್ಟ ವೀರ ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಸುತ್ತ ಸುತ್ತುತ್ತದೆ. ಪ್ರತಿಕೂಲ ಪರಿಸ್ಥಿತಿಗಳಿಂದಾಗಿ, ಅವರ ಮಗ ಅರ್ಕೇಶ್ವರ 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾದನು. ಚಿತ್ರದ ನಟ ಉಪೇಂದ್ರ, ಬಾಲಿವುಡ್ ನ ಹೆಸರಾಂತ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮೂಲಕ ಭೂಗತ ಜಗತ್ತಿನ ಹೊಸ ಅಧ್ಯಾಯ ಕಬ್ಜ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಸಹಕಾರ ಹೀಗೆಯೇ ಇರಲಿ ಎಂದಿದ್ದಾರೆ.

 

 

ದಕ್ಷಿಣ ಭಾರತದ ಸಿನಿಮಾ ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಮಯದಲ್ಲಿ ಹೆಸರಾಂತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ಕಬ್ಜಾ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮದ ಪ್ರತಿಫಲ ಎಂದು ಕಿಚ್ಚ ಸುದೀಪ ಹೇಳಿದ್ದಾರೆ. ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಆನಂದ್ ಪಂಡಿತ್, ಆರ್ ಚಂದ್ರು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಿಸಿದ್ದಾರೆ.

ಇದನ್ನೂ ಓದಿ : KGF Actor: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News