Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ

Kabza Teaser: ರಿಯಲ್ ಸ್ಟಾರ್ ಉಪೇಂದ್ರ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ಆರ್ ಚಂದ್ರು ನಿರ್ದೇಶನದ  ಬಹು ನಿರೀಕ್ಷಿತ ಸಿನಿಮಾ ಕಬ್ಜ ಟೀಸರ್‌ ಬಿಡುಗಡೆಯಾಗಿದೆ.  

Written by - Chetana Devarmani | Last Updated : Sep 17, 2022, 05:32 PM IST
  • ಆರ್​. ಚಂದ್ರು ನಿರ್ದೇಶನದ ಕಬ್ಜ ಸಿನಿಮಾ
  • ಉಪೇಂದ್ರ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್‌
  • 5 ಭಾಷೆಗಳಲ್ಲಿ ರಿಲೀಸ್‌ ಆದ ಕಬ್ಜ ಟೀಸರ್
Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ title=
ಕಬ್ಜ ಟೀಸರ್

Kabza Teaser: ಆರ್​. ಚಂದ್ರು ನಿರ್ದೇಶನ ಮಾಡುತ್ತಿರುವ ಕಬ್ಜ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು​ ನಿರೀಕ್ಷೆಯಿಟ್ಟಿದ್ದಾರೆ. ಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ಮೂಲಕ ಎಲ್ಲರ ಗಮನ ಸೆಳೆದ ಕಬ್ಜ ಸಿನಿಮಾದ ಟೀಸರ ಇದೀಗ ಬಿಡುಗಡೆಯಾಗಿದೆ. ಕಬ್ಜ ಚಿತ್ರದಲ್ಲಿ ಉಪೇಂದ್ರ ಹೀರೋ ಆಗಿದ್ದು, ಅವರ ಜೊತೆ ಕಿಚ್ಚ ಸುದೀಪ್​ ಕೂಡ ನಟಿಸಿದ್ದಾರೆ. ಕಬ್ಜದಲ್ಲಿ ನಾಯಕಿ ನಟಿಯಾಗಿ ಶ್ರೀಯಾ ಶರಣ್​ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಇಂದು (ಸೆ.17) ಸಂಜೆ ರಿಲೀಸ್‌ ಆಗಿದೆ. ಕಬ್ಜ ಒಂದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಜೊತೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. 

ಇದನ್ನೂ ಓದಿ : Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ಇಂದು (ಸೆ.17) ಸಂಜೆ ಕಬ್ಜ ಸಿನಿಮಾ ಟೀಸರ್‌ ರಿಲೀಸ್‌ ಕಾರ್ಯಕ್ರಮ ಬೆಂಗಳೂರಿನ ಓರಾಯನ್​ ಮಾಲ್‌ನಲ್ಲಿ ನಡೆದಿದ್ದು, ತೆಲುಗಿನ ಖ್ಯಾತ ನಟ ರಾಣಾ ದುಗ್ಗುಬಾಟಿ ಮತ್ತು ಕನ್ನಡದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿಗಳಾಗಿ ಟೀಸರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐದು ಭಾಷೆಗಳಲ್ಲಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ನಾಳೆ (ಸೆ.18) ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಚಿತ್ರತಂಡ ಈ ಉಡುಗೊರೆ ನೀಡಿದೆ.

ಇನ್ನೂ ಸಖತ್‌ ಕ್ರೇಜಿ ಆಗಿರುವ ಟೀಸರ್‌ ಇದಾಗಿದ್ದು, ಉಪೇಂದ್ರ ಜತೆ ಕಿಚ್ಚ ಸುದೀಪ್​ ಪಾತ್ರದ ಝಲಕ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನಾಯಕಿ ಶ್ರೀಯಾ ಶರಣ್ ಪಾತ್ರ​ ಕೂಡ ಈ ಟೀಸರ್‌ನಲ್ಲಿದೆ. ಸದ್ಯ ಈ ಚಿತ್ರದ ಟೀಸರ್​ ನೋಡಿ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಚಿತ್ರದ ಶೂಟಿಂಗ್​ ಬಹುತೇಕ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಓರಿಯಾ ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಶುರುವಾಗಿದೆ. ಉಪೇಂದ್ರ ಮತ್ತು ಆರ್​. ಚಂದ್ರು ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ʻಐ ಲವ್​ ಯೂʼ ಸಿನಿಮಾ ಸಖತ್‌ ಹಿಟ್​ ಆಗಿತ್ತು. ಈಗ ಮತ್ತೊಮ್ಮೆ ಕಬ್ಜ ಸಿನಿಮಾಗಾಗಿ ಇವರಿಬ್ಬರು ಒಂದಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತವಿದ್ದು, ಮತ್ತೊಮ್ಮೆ ಸಂಗೀತದ ರಸದೌತಣ ನೋಡುಗರಿಗೆ ಸಿಗಲಿದೆ. 

ಇದನ್ನೂ ಓದಿ : Kriti Sanon: ಈ ಬಾಹುಬಲಿ ನಟನೊಂದಿಗೆ ಬಾಲಿವುಡ್ ನಟಿ ಕೃತಿ ಸನೊನ್ ಡೇಟಿಂಗ್?!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News