“ಸಿನಿಮಾ ಪ್ರಚಾರ ಮಾಡಲು ಒಂದು ತಿಂಗಳು ಸಾಕಾಗಲ್ವ? ನಮ್ಮದು ನಾರ್ಮಲ್ ಸಿನಿಮಾ ಅಲ್ವಲ್ಲ”: ಕಾಟೇರ ನಿರ್ದೇಶಕ ತರುಣ್‌ ಸುಧೀರ್!

Kateera: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ್‌ ಸಿನಿಮಾ ರಿಲೀಸ್ ಡೇಟ್‌ ಅನೌನ್ಸ್‌ ಆಗುತ್ತಿದ್ದಂತೆ, ತರುಣ್‌ ಸುಧೀರ್‌ ನಮ್ಮದು ನಾರ್ಮಲ್‌ ಚಿತ್ರವಲ್ಲ, ಪ್ರೋಮೋಷನ್‌ಗೆ ಒಂದು ತಿಂಗಳು ಸಾಕು ಎಂದಿದ್ದಾರೆ. ಹೇಗೆ ಕಾಟೇರ ನಿರ್ದೇಶಕ ಹೇಳಲು ಕಾರಣವೇನು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ.  

Written by - Zee Kannada News Desk | Last Updated : Nov 30, 2023, 11:35 AM IST
  • ಡಿಬಾಸ್‌ ಅಭಿಮಾನಿಗಳು 'ಕಾಟೇರ' ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿ ನಿರ್ದೇಶಕ ತರುಣ್ ಸುಧೀರ್ ಬಳಿ ಮನವಿ ಮಾಡಿದ್ದರು.
  • ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಥ್ರಿಲ್ಲಾಗಿ, ಆದರೂ ಇನ್ನೊಂದು ತಿಂಗಳಲ್ಲಿ ಪ್ರಮೋಷನ್, ರಿಲೀಸ್ ಹೇಗೆ ಸಾಧ್ಯ ಸಾಧ್ಯ ಎಂದು ಚರ್ಚಿಸುತ್ತಿದ್ದಾರೆ.
  • ಈ ವರ್ಷ 190ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ದು, ಆದರೆ ದೊಡ್ಡಮಟ್ಟದಲ್ಲಿ ಯಾವುದೇ ಚಿತ್ರ ಸದ್ದು ಮಾಡಲಿಲ್ಲ.
“ಸಿನಿಮಾ ಪ್ರಚಾರ ಮಾಡಲು ಒಂದು ತಿಂಗಳು ಸಾಕಾಗಲ್ವ? ನಮ್ಮದು ನಾರ್ಮಲ್ ಸಿನಿಮಾ ಅಲ್ವಲ್ಲ”: ಕಾಟೇರ ನಿರ್ದೇಶಕ ತರುಣ್‌ ಸುಧೀರ್! title=

Tharun Sudhir About Kateera: ಬಹಳ ದಿನಗಳಿಂದ ಡಿಬಾಸ್‌ ಅಭಿಮಾನಿಗಳು 'ಕಾಟೇರ' ಅಪ್‌ಡೇಟ್ ಕೇಳಿ ಕೇಳಿ  ಸುಸ್ತಾಗಿ ನಿರ್ದೇಶಕ ತರುಣ್ ಸುಧೀರ್ ಬಳಿ ಮನವಿ ಮಾಡಿದ್ದರು.‌ ಫ್ಯಾನ್ಸ್ ಫಸ್ಟ್ ಸಾಂಗ್ ಅಪ್‌ಡೇಟ್‌ ಬರುತ್ತೆ ಎಂದುಕೊಂಡರೇ, ಆದರೆ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿ ದಿಢೀರ್ ಸರ್ಪ್ರೈಸ್‌ ಕೊಟ್ಟಿ ಶಾಕ್ ಕೊಟ್ಟಿದ್ದಾರೆ. 'ಕಾಟೇರ' ಕೊನೆ ಹಂತದ ಚಿತ್ರೀಕರಣ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿತ್ತೇ ಹೊರತು ಇಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಏಕಾಏಕಿ ಇನ್ನೊಂದು ತಿಂಗಳಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. 

ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಥ್ರಿಲ್ಲಾಗಿ, ಆದರೂ ಇನ್ನೊಂದು ತಿಂಗಳಲ್ಲಿ ಪ್ರಮೋಷನ್, ರಿಲೀಸ್ ಹೇಗೆ ಸಾಧ್ಯ ಸಾಧ್ಯ ಎಂದು ಚರ್ಚಿಸುತ್ತಿದ್ದಾರೆ. ಡಿಸೆಂಬರ್ 22ಕ್ಕೆ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ರಿಲೀಸ್ ಆಗುತ್ತಿರುವಾಗ ಒಂದು ವಾರದ ಅಂತರದಲ್ಲಿ 'ಕಾಟೇರ' ಸಿನಿಮಾ ರಿಲೀಸ್ ನಿರ್ಧಾರ ಎಷ್ಟು ಸರಿ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಇನ್ನು ಜಬರ್ದಸ್ತ್‌ ಮೇಕಿಂಗ್ ವಿಡಿಯೋ ಜೊತೆ ಸಣ್ಣ ಟೀಸರ್ ಝಲಕ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆದ್ದ ಚಿತ್ರತಂಡ, ಹೊಸ ವರ್ಷಕ್ಕೆ ಒಳ್ಳೆ ಉಡುಗೊರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇದನ್ನೂ ಓದಿ: ದರ್ಶನ್‌ ಕಾಟೇರ ರಿಲೀಸ್‌ ಡೇಟ್‌ ಫಿಕ್ಸ್‌..‌ ಪ್ರಭಾಸ್‌ - ಶಾರುಖ್‌ ಎದುರು ʻಚಾಲೆಂಜಿಂಗ್‌ʼ ಸ್ಟಾರ್!

ಈ ವರ್ಷ 190ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ದು, ಆದರೆ ದೊಡ್ಡಮಟ್ಟದಲ್ಲಿ ಯಾವುದೇ ಚಿತ್ರ ಸದ್ದು ಮಾಡಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಒಂದೆರಡು ಸಿನಿಮಾಗಳಲ್ಲಿ, ಇದೆಲ್ಲದರ ನಡುವೆ ಇದೇ ವರ್ಷ 'ಕಾಟೇರ' ಚಿತ್ರ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಸಾಕಷ್ಟು ಜನ ಟೀಸರ್‌ನಲ್ಲಿ ಪದೇ ಪದೇ ರಿಲೀಸ್ ಡೇಟ್ ನೋಡಿ ನೋಡಿ ಖಚಿತಪಡಿಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ 'ಕಾಟೇರ' ಅಪ್‌ಡೇಟ್ ಅಚ್ಚರಿ ಮೂಡಿಸಿದೆ. ಒಂದು ತಿಂಗಳಲ್ಲಿ ಪ್ರಚಾರ ಮಾಡೋಕೆ ಸಾಧ್ಯಾನಾ? 'ಸಲಾರ್' ಬೆನ್ನಲ್ಲೇ ರಿಲೀಸ್ ಮಾಡುತ್ತಿರುವುದು ಸರೀನಾ? ಥಿಯೇಟರ್‌ ಸಿಗುತ್ತಾ? ಎನ್ನುವ ಚರ್ಚೆಯ ನಡುವೆ ಚಿತ್ರತಂಡ ಮಾತ್ರ 'ಕಾಟೇರ' ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇದೆ. ಇದೇ ಕಾರಣಕ್ಕೆ ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗೆ ತರುವ ನಿರ್ಧಾರಕ್ಕೆ ಬಂದಿದೆ. 

'ಕಾಟೇರ' ರಿಲೀಸ್ ಡೇಟ್ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದು "ಸಿನಿಮಾ ಪ್ರಚಾರ ಮಾಡಲು ಒಂದು ತಿಂಗಳು ಸಾಕಾಗಲ್ವ? ನಮ್ಮದು ನಾರ್ಮಲ್ ಸಿನಿಮಾ ಅಲ್ವಲ್ಲ.. ಫೋರ್ಸ್ ಇರುವಂತಹ ಸಿನಿಮಾ. ನಾವು ಎಲ್ಲಾ ವಿಧದಲ್ಲೂ ರೆಡಿ ಇದ್ದೀವಿ. ಎಲ್ಲಾ ರೆಡಿ ಮಾಡಿಟ್ಟುಕೊಂಡು ಅನೌನ್ಸ್ ಮಾಡಬೇಕು ಎಂದುಕೊಂಡಿದ್ದೆವು. ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲಾ ಬರುತ್ತೆ" ಎಂದು ಹೇಳಿದ್ದಾರೆ. ತರುಣ್ ಮಾತಿನಲ್ಲೇ ಸಿನಿಮಾ ಬಗ್ಗೆ ಇರುವ ಭರವಸೆ ಗೊತ್ತಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News