Jayamalini: ಪ್ರೇಮಪತ್ರಗಳನ್ನು ನೋಡಲೆಂದೇ ವಿಶೇಷ ಮ್ಯಾನೇಜರ್‌ ನೇಮಿಸಿಕೊಂಡಿದ್ದ ಡಾನ್ಸರ್‌..ಆದರೂ ಫಲಿಸಲಿಲ್ಲ ಪ್ರೀತಿ..!

Jayamalini Love Story : ಇಡೀ ಸೌತ್‌ ಚಿತ್ರರಂಗವನ್ನು ಆಳಿದ ಐಟಂ ಡಾನ್ಸರ್‌ ಎಂದರೆ ಅದು ಜಯಮಾಲಿನಿ. ಸಾಕಷ್ಟು ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಡಾನ್ಸರ್‌ ಆಗಿದ್ದ ನಟಿಗೆ ಒಂದಲ್ಲ ಎರಡಲ್ಲ ಸಾಕಷ್ಟು ಪ್ರೇಮ ಪತ್ರಗಳು ಬಂದಿದ್ದವು. ಅವುಗಳನ್ನು ಓದಲೆಂದೇ ಸ್ಪೆಷಲ್‌ ಮ್ಯಾನೇಜರ್‌ವೊಬ್ಬರನ್ನು ನೇಮಿಸಿಕೊಂಡಿದ್ದರಂತೆ ಜಯಮಾಲಿನಿ.

Written by - Savita M B | Last Updated : Jul 29, 2023, 02:39 PM IST
  • ಮಾದಕ ನೃತ್ಯದ ಮೂಲಕವೇ ಎಲ್ಲರ ನಿದ್ದೆ ಕದ್ದಿದ್ದ ಚೆಲುವೆ ಜಯಮಾಲಿನಿ.
  • ಬಹುಭಾಷಾ ಸಿನಿಮಾಗಳಲ್ಲಿ ಅಂದಿನ ಕ್ಯಾಬ್ರೆ ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ
  • ಆಡದಾನಿ ಅದೃಷ್ಟಂ ಸಿನಿಮಾ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
Jayamalini: ಪ್ರೇಮಪತ್ರಗಳನ್ನು ನೋಡಲೆಂದೇ ವಿಶೇಷ ಮ್ಯಾನೇಜರ್‌ ನೇಮಿಸಿಕೊಂಡಿದ್ದ ಡಾನ್ಸರ್‌..ಆದರೂ ಫಲಿಸಲಿಲ್ಲ ಪ್ರೀತಿ..!  title=

Jayamalini : ಆ ಕಾಲದಲ್ಲಿಯೇ ಅಪಾರ ಅಭಿಮಾನಿಗಳು, ಲೆಕ್ಕವಿಲ್ಲದಷ್ಟು ಪ್ರೇಮಪತ್ರಗಳನ್ನು ಪಡೆದಿದ್ದ, ಸೌತ್‌ ಸಿನಿ ರಂಗದಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಮಾದಕ ನೃತ್ಯದ ಮೂಲಕವೇ ಎಲ್ಲರ ನಿದ್ದೆ ಕದ್ದಿದ್ದ ಚೆಲುವೆ ಜಯಮಾಲಿನಿ. ಬಹುಭಾಷಾ ಸಿನಿಮಾಗಳಲ್ಲಿ ಅಂದಿನ ಕ್ಯಾಬ್ರೆ ಹಾಡುಗಳಲ್ಲಿ ಹೆಜ್ಜೆ ಹಾಕಿ ಎಲ್ಲರ ಹಾಟ್‌ ಫೇವರಿಟ್‌ ಆಗಿದ್ದ ನಟಿ ಇವರು.

ಚಿತ್ರದ ನಾಯಕಿಗಿಂತ ಹೆಚ್ಚು ಬೇಡಿಕೆ ಹೊಂದಿದ್ದ ಈ ನಟಿ ಆಡದಾನಿ ಅದೃಷ್ಟಂ ಸಿನಿಮಾ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಸಾಲು ಸಾಲು ಅವಕಾಶಗಳನ್ನು ಗೀಟಿಸಿಕೊಂಡ ನಟಿಗೆ ಮತ್ತೆ ಹಿಂದೆ ತಿರುಗಿ ನೋಡುವ ಪ್ರಮೆಯವೇ ಬರಲಿಲ್ಲ. ಆಗಿನ ಕಾಲದ ಎಲ್ಲಾ ಸೂಪರ್‌ ಸ್ಟಾರ್‌ಗಳ ಜತೆ ಸೊಂಟ ಬಳುಕಿಸಿದ್ದರು. ಸಹೋದರರ ಸವಾಲ್‌ ಸಿನಿಮಾದಲ್ಲಿ ವಿಷ್ಣುವರ್ಧನ್‌ ಜೊತೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿರಂಗಕ್ಕೂ ಎಂಟ್ರಕೊಟ್ಟರು. 

ಇದನ್ನೂ ಓದಿ-Kantara : ದೇಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಕಾಂತಾರ, ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ..!

ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನೃತ್ಯ ಮಾಡಿರುವ ಜಯಮಾಲಿನಿ ತನ್ನ ಮೈಮಾಟದ ಮೂಲಕವೇ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇನ್ನು ಈ ಚೆಲುವೆಗೆ ಆ ಕಾಲದಲ್ಲಿಯೇ ಸಾಕಷ್ಟು ಅಭಿಮಾನಿಗಳು ಜೊತೆಗೆ  ಉದ್ಯಮದ ಪರಚಯಸ್ಥರು ಸಹ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದರು. ಈ ವಿಚಾರವನ್ನು ಸ್ವತಃ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಸಿನಿಮಾದಲ್ಲಿ ಹೆಜ್ಜೆ ಹಾಕುತ್ತಿದ್ದ ನನಗೆ ಸಾಕಷ್ಟು ಪ್ರೇಮಪತ್ರಗಳು ಬಂದವು. ಮದುವೆ ಆಗುವುದಾಗಿ ಕೇಳಿದವರು ಇದ್ದಾರೆ. ನನ್ನ ವರ್ಕ್‌ ಸ್ಟ್ರೇಸ್‌  ನಡುವೆ ನನಗೆ ಆ ಕಡೆ ಗಮನ ಕೊಡಲು ಆಗುತ್ತಿರಲಿಲ್ಲ. ಹಾಗೆ ಬಂದ ಪ್ರೇಮಪತ್ರಗಳನ್ನು ಓದಲೆಂದೇ ನಾನು ಸ್ಪೆಷಲ್‌ ಮ್ಯಾನೇಜರ್‌ವೊಬ್ಬರನ್ನು ನೇಮಿಸಿಕೊಂಡಿದ್ದೆ. ಇನ್ನು ಕೆಲವರು ತಮ್ಮ ರಕ್ತದಿಂದ ನನಗೆ ಪ್ರೇಮ ಪತ್ರಗಳನ್ನು ಬರೆದು ಕಳಿಸಿದ್ದರು. ನಮ್ಮ ಅಪ್ಪನ ಜೊತೆ ಮಾತಾಡಿ ಎಂದು ಹೇಳಿದ್ದೇ ಆಗ ಅವರು ಅದಕ್ಕೆ ಹೆದರಿ ಮುಂದೆ ಬರಲಿಲ್ಲ" ಎಂದು ಹೇಳಿಕೊಂಡಿದ್ದಾರೆ. ಸದ್ಯ ನಟಿ ಜಯಮಾಲಿನಿ ಚೆನ್ನೈನಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಈ ನಟಿ ಸುಖದ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ-ಉರ್ಫಿ ಜಾವೇದ್ ವಿಚಿತ್ರ ವೇಷ.. ಬೇರು, ಎಲೆಗಳಿಂದ ಮೈ ಮುಚ್ಚಿಕೊಂಡ ಉರ್ಫಿ ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News