Jawan : 'ಜವಾನ್​ನ ಸದ್ದಿಗೆ ಸಿದ್ಧರಾಗಿ...ಬಹುನಿರೀಕ್ಷಿತ 'ಜಿಂದಾ ಬಂದಾ' ಸಾಂಗ್‌ ಇಂದೇ ರಿಲೀಸ್‌..!

Sharukh khan : ಶಾರುಖ್‌ ಖಾನ್‌ ಅಭಿನಯದ ಜವಾನ್‌ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದ್ದು, ಇದೀಗ ಸಿನಿಮಾದ ಬಹುನಿರೀಕ್ಷಿತ 'ಜಿಂದಾ ಬಂದಾ' ಸಾಂಗ್‌ ರಿಲೀಸ್‌ ಮಾಡಲು ಚಿತ್ರತಂಡ ರೆಡಿಯಾಗಿದೆ.   

Written by - Savita M B | Last Updated : Jul 31, 2023, 03:09 PM IST
  • ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜವಾನ್‌ ಸಿನಿಮಾ
  • ಇದೀಗ ಶಾರುಖ್‌ ಅವರು ನಟಿಸಿರುವ ಜವಾನ್‌ ಸಿನಿಮಾದ ಪೋಸ್ಟರ್‌ ಒಂದು ಅನಾವರಣಗೊಂಡಿದೆ.
  • ಜವಾನ್‌ ಸಿನಿಮಾದ ಹಾಡು ಇಂದು ಮಧ್ಯಾಹ್ನ ಬಿಡುಗಡೆಯಾಗಲಿದೆ.
Jawan : 'ಜವಾನ್​ನ ಸದ್ದಿಗೆ ಸಿದ್ಧರಾಗಿ...ಬಹುನಿರೀಕ್ಷಿತ 'ಜಿಂದಾ ಬಂದಾ' ಸಾಂಗ್‌ ಇಂದೇ ರಿಲೀಸ್‌..! title=

ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ಸೇರಿಂದಂತೆ ದೊಡ್ಡ ತಾರಾಬಳಗವೇ ಇದೆ. ಈ ಸಿನಿಮಾದ ಗ್ಲಿಂಪ್ಸ್‌ ಹಾಗೂ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಶಾರುಖ್‌ ಖಾನ್‌ ವಿಭಿನ್ನ ಲುಕ್‌ ನೋಡಿ ಫ್ಯಾನ್ಸ್‌ ಮನಸೋತಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಸುಮಾರು 6 ಹಾಡುಗಳಿದ್ದು, ಚಿತ್ರದ ಟೈಟಲ್‌ ಸಾಂಗ್‌ನಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದ ಸ್ಟಾರ್‌ಕಾಸ್ಟ್  ಅತಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ‘ಜವಾನ್’ ಸಿನಿಮಾ ಹಿರಿತೆರೆಯಲ್ಲಿ ಅವರ ‘ಪಠಾಣ್’ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ ಎನ್ನವ ನಿರೀಕ್ಷೆಯನ್ನು ಹುಟ್ಟುಹಾಕಿದೆ. 

 
 
 
 

 
 
 
 
 
 
 
 
 
 
 

A post shared by Shah Rukh Khan (@iamsrk)

ಇದನ್ನೂ ಓದಿ-Kiara Advani: ಮದುವೆಗೂ ಮುನ್ನವೇ ಗರ್ಭಿಣಿ ಆಗಲು ಬಯಸಿದ್ದರೇ ಈ ಖ್ಯಾತ ನಟಿ!?

ಇದೀಗ ಶಾರುಖ್‌ ಅವರು ನಟಿಸಿರುವ ಜವಾನ್‌ ಸಿನಿಮಾದ ಪೋಸ್ಟರ್‌ ಒಂದು ಅನಾವರಣಗೊಂಡಿದೆ. ಅದನ್ನು ಎಸ್‌ಆರ್‌ಕೆ ಹಂಚಿಕೊಂಡಿದ್ದು, "ದಿ ಸೌಂಡ್‌ ಆಫ್‌ ಜವಾನ್‌! ಹಾಡು ಇಂದು ಮಧ್ಯಾಹ್ನ 12 50ಕ್ಕೆ ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸೆಪ್ಟಂಬರ್‌ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.

ಶಾರುಖ್‌ ಹೊರತು ಪಡಿಸಿ ಈ ಸಿನಿಮಾದಲ್ಲಿ ಹತ್ತು ವಿಶೇಷ ಮುಖಗಳಿದ್ದು, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳು ಅಥಿತಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡು ರಂಜಿಸಲಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ ಬಿಡುಗಡೆಯಾಗಿ ಸಾಕಷ್ಟು ಸದ್ದುಮಾಡುತ್ತಿದೆ. ಈ ನಡುವೆ ಸಿನಿಪ್ರಿಯರು ಬಹುನಿರೀಕ್ಷಿತ ಜವಾನ್‌ ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.. 

ಇದನ್ನೂ ಓದಿ-ವಾ...ವಾ...ವಾ...ವಾಮನ ಹಾಡು ಬಂತು....ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News