ಉಸಿರುಗಟ್ಟಿಸುತ್ತಿದೆ ಜಾನ್ವಿ ಉಟ್ಟ ಬಟ್ಟೆ : ಚಳಿ, ಮಳೆಯ ನಡುವೆಯೂ ಹೆಚ್ಚಾಯ್ತು ಸೆಕೆ..!

ಬಾಲಿವುಡ್‌ ಕ್ಯೂಟ್‌ ಗರ್ಲ್‌, ನಟಿ ಜಾಹ್ನವಿ ಕಪೂರ್‌ ಅಭಿನಯದ ʼಮಿಲಿʼ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಈವೆಂಟ್‌ ಒಂದರಲ್ಲಿ ನೀಲಿ ಗೌನ್ ಧರಿಸಿ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Nov 4, 2022, 06:39 PM IST
  • ನಟಿ ಜಾಹ್ನವಿ ಕಪೂರ್‌ ಅಭಿನಯದ ʼಮಿಲಿʼ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ
  • ಈ ನಡುವೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಈವೆಂಟ್‌ ಒಂದರಲ್ಲಿ ಮಿಂಚಿದ್ದಾರೆ
  • ನೀಲಿ ಗೌನ್ ಧರಿಸಿ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ
ಉಸಿರುಗಟ್ಟಿಸುತ್ತಿದೆ ಜಾನ್ವಿ ಉಟ್ಟ ಬಟ್ಟೆ : ಚಳಿ, ಮಳೆಯ ನಡುವೆಯೂ ಹೆಚ್ಚಾಯ್ತು ಸೆಕೆ..! title=

ನವದೆಹಲಿ : ಬಾಲಿವುಡ್‌ ಕ್ಯೂಟ್‌ ಗರ್ಲ್‌, ನಟಿ ಜಾಹ್ನವಿ ಕಪೂರ್‌ ಅಭಿನಯದ ʼಮಿಲಿʼ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಈವೆಂಟ್‌ ಒಂದರಲ್ಲಿ ನೀಲಿ ಗೌನ್ ಧರಿಸಿ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಜಾನ್ವಿ ತನ್ನ ಮನಮೋಹಕ ನೋಟ ಮತ್ತು ಸೆಕ್ಸಿ ಗೌನ್‌ನೊಂದಿಗೆ ಕ್ಯಾಮರಾ ಮುಂದೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೋ ನೋಡಿದ ನೆಟ್ಟಿಗರು ವ್ಹಾವ್‌ ಎನ್ನುತ್ತಿದ್ದಾರೆ. ಇನ್ನು ಜಾನ್ವಿ ಕಪೂರ್ ಅವರ ಹಿಂದಿನ ಸಿನಿಮಾ ʼಗುಡ್ ಲಕ್ ಜೆರ್ರಿʼ ವಿಮರ್ಶಕರು ಮತ್ತು ಜನಸಾಮಾನ್ಯರಿಂದ ಉತ್ತಮ ಮೆಚ್ಚುಗೆಯನ್ನು ಪಡೆಯಿತು. ಈಗ, ಎಲ್ಲರ ಕಣ್ಣುಗಳು ಮಿಲಿಯ ಮೇಲೆ ಇದೆ. ಮಿಲಿ ಸಿನಿಮಾವನ್ನು ಜಾಹ್ನವಿ ಕಪೂರ್‌ ತಂದೆ ಬೋನಿ ಕಪೂರ್ ನಿರ್ಮಿಸಿದ್ದಾರೆ. ಇದು 2019 ರಲ್ಲಿ ಬಿಡುಗಡೆಯಾದ ಮಲಯಾಳಂ ಥ್ರಿಲ್ಲರ್ ಹೆಲೆನ್‌ನ ರಿಮೇಕ್ ಆಗಿದೆ.

ಇದನ್ನೂ ಓದಿ: ʼಮೈ ಹಾರ್ಟ್ ಇಸ್ ಸ್ಟೀರಿಯೋ..ʼ ಎಂದು ಜಿಂಕೆಯಂತೆ ಜಿಗಿದಾಡಿದ ನಿವೇದಿತಾ..! 

ಇತ್ತೀಚೆಗೆ, ಜಾನ್ವಿ 6421 ಚದರ ಅಡಿ ಕಾರ್ಪೆಟ್ ಪ್ರದೇಶದೊಂದಿಗೆ 8,669 ಚದರ ಅಡಿಗಳಷ್ಟು ವಿಸ್ತಾರವಾದ ಹೊಸ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಬಾಂದ್ರಾದಲ್ಲಿನ ಆಸ್ತಿಯ ಬೆಲೆ 65 ಕೋಟಿ ರೂಪಾಯಿಗಳಷ್ಟಿದೆ ಮತ್ತು ತಂಗಿ ಜೊತೆ ಸೇರಿ ಜಾನ್ವಿ ಈ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News