Janhvi Kapoor : ನಟಿ ಜಾಹ್ನವಿ ಕಪೂರ್‌ʼಗೆ ಕಾಡ್ತಿದೆ ಈ ಅನಾರೋಗ್ಯ !

Janhvi Kapoor Viral Video: ಬಾಲಿವುಡ್‌ನ ಸ್ಟಾರ್‌ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೆಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಕ್ಕೆ ಹತ್ತಿರವಾಗಿದ್ದಾರೆ. ತೆಲುಗು ಸಿನಿಮಾ ದೇವರ ಮೂಲಕ ಸೌತ್‌ ಸಿನಿರಂಗಕ್ಕೂ ಎಂಟ್ಟಿಕೊಡಲು ಸಜ್ಜಾಗಿದ್ದಾರೆ.

Written by - Chetana Devarmani | Last Updated : Mar 13, 2024, 02:46 PM IST
  • ಬಾಲಿವುಡ್‌ನ ಸ್ಟಾರ್‌ ನಟಿ ಶ್ರೀದೇವಿ ಪುತ್ರಿ ಜಾಹ್ನವಿ
  • ನಟಿ ಜಾಹ್ನವಿ ಕಪೂರ್ ಗೆ ಅನಾರೋಗ್ಯ
  • ಜಾಹ್ನವಿ ಕಪೂರ್ ಅವರ ಒಂದು ವಿಡಿಯೋ ವೈರಲ್‌
Janhvi Kapoor : ನಟಿ ಜಾಹ್ನವಿ ಕಪೂರ್‌ʼಗೆ ಕಾಡ್ತಿದೆ ಈ ಅನಾರೋಗ್ಯ ! title=

Janhvi Kapoor Suffering with Health Issue: ಬಾಲಿವುಡ್‌ ಬ್ಯೂಟಿ ಜಾಹ್ನವಿ ಕಪೂರ್ ಏನೇ ಮಾಡಲಿ ಅದು ಸುದ್ದಿಯೇ. ನೆಟ್ಟಿಗರಂತೂ ತಮ್ಮ ಕಣ್ಣುಗಳನ್ನು ಇವರ ಮೇಲೆಯೇ ನೆಟ್ಟಿರುತ್ತಾರೆ. ಬಾಲಿವುಡ್‌ನ ಸ್ಟಾರ್‌ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೆಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಕ್ಕೆ ಹತ್ತಿರವಾಗಿದ್ದಾರೆ. ತೆಲುಗು ಸಿನಿಮಾ ದೇವರ ಮೂಲಕ ಸೌತ್‌ ಸಿನಿರಂಗಕ್ಕೂ ಎಂಟ್ಟಿಕೊಡಲು ಸಜ್ಜಾಗಿದ್ದಾರೆ. 

ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಜಾಹ್ನವಿ ಕಪೂರ್ ಅವರ ಒಂದು ವಿಡಿಯೋ ವೈರಲ್‌ ಆಗಿದೆ. ಜಾಹ್ನವಿ ಕಪೂರ್​ ಕಾರಿನಲ್ಲಿ ಹೋಗುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಜಾಹ್ನವಿ ಕಪೂರ್ ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದಾರೆ. ಅವರ ಮೂಗು, ಮುಖ ಎಲ್ಲ ಕೆಂಪಗಾಗಿರುವುದನ್ನು ನೋಡಬಹುದು. ನಟಿ ಮೂಗು ಒರಿಸಿಕೊಳ್ಳುತ್ತ, ಕೆಮ್ಮುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

ಇದನ್ನೂ ಓದಿ : ʻಲಕ್ಷ್ಮೀ ಬಾರಮ್ಮʼ ಕಾವೇರಿʼಯ ರಿಯಲ್‌ ಗಂಡ ಯಾರು ಗೊತ್ತೇ.. ಇವರಿಗೆ ಇಷ್ಟು ದೊಡ್ಡ ಮಗಳಿದ್ದಾಳಾ? 

ನಟಿ ಜಾಹ್ನವಿ ಅವರ ವಿಡಿಯೋ ನೋಡಿದ ಜನರು ಹುಷಾರಾಗಿರಮ್ಮ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ನಟಿ ಜಾಹ್ನವಿ ಕಪೂರ್​ ಬಾಯ್‌ಫ್ರೆಂಡ್​  ಶಿಖರ್​ ಪಹರಿಯಾ (Shikhar Pahariya) ಜೊತೆ ಸಾರ್ಬಜನಿಕವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.  

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಜಾಹ್ನವಿ ಕಪೂರ್​ ಮತ್ತು  ಶಿಖರ್​ ಪಹರಿಯಾ ಒಟ್ಟಿಗೆ ಭೇಟಿ ನೀಡಿದ್ದರು. ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದು ನೆಟ್ಟಿಗರಲ್ಲಿ ಹಲವು ಅನುಮಾನಗಳಿನ್ನು ಹುಟ್ಟು ಹಾಕಿತು.  

 

 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ. ಜಾಹ್ನವಿ ಮತ್ತು ಶಿಖರ್​ ಡೇಟಿಂಗ್​  ಮಾಡುತ್ತಿರುವ ವಿಚಾರ ಬಹಳ ದಿನಗಳಿಂದ ಸುದ್ದಿಯಲ್ಲಿದೆ. 

ನಟಿ ಜಾಹ್ನವಿ ಕಪೂರ್‌ ಶೀತದಿಂದ ಬಳಲುತ್ತಿರಬಹುದು ಎಂದು ಹೇಳಲಾಗ್ತಿದೆ. ಜಾಹ್ನವಿ ಕಪೂರ್‌ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಜಾಹ್ನವಿಗೆ ಹುಷಾರು ಇಲ್ಲದೇ ಇರುವ ವಿಡಿಯೋ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಜಾಹ್ನವಿ ಕಪೂರ್‌ ಫ್ಯಾನ್ಸ್​ ಮಾತ್ರ ಹುಷಾರಮ್ಮಾ ಎಂದು ಹೇಳುತ್ತಿದ್ದಾರೆ. 

ಇದನ್ನೂ ಓದಿ : ಖ್ಯಾತ ನಟನೊಂದಿಗೆ ರಶ್ಮಿಕಾ ಮಂದಣ್ಣ ಡೇಟಿಂಗ್? ಹೊಸ ಫೋಟೋದಿಂದ ಸೀಕ್ರೇಟ್‌ ಲವ್ ರಿವೀಲ್‌ !!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News