ಮಾಜಿ ಸಿಎಂ ಮೊಮ್ಮಗನೇ ಜಾನ್ವಿ ಕಪೂರ್ ಬಾಯ್ ಫ್ರೆಂಡ್! ಅಂಬಾನಿ ಮಗನ ಮದುವೆಯಲ್ಲಿ ಹೊರಬಿತ್ತು ಬಿಗ್ ಸೀಕ್ರೆಟ್

Janhvi Kapoor Boyfriend: ಈ ಜೋಡಿ ಪ್ರಪಂಚದ ಕಣ್ಣುಗಳಿಂದ ಮರೆಯಾಗುತ್ತಿದ್ದ ಕಾಲವಿತ್ತು, ಆದರೆ ಈಗ ಇಬ್ಬರೂ ಸಹ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಜಾನ್ವಿ ಅನೇಕ ಬಾರಿ ಶಿಖು ಎಂಬ ಲಾಕೆಟ್ ಅನ್ನು ಧರಿಸಿಕೊಂಡಿರುವುದು ಕಂಡುಬಂದಿತ್ತು.

Written by - Bhavishya Shetty | Last Updated : Jul 14, 2024, 03:08 PM IST
    • ಹಲವು ವರ್ಷಗಳಿಂದ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ
    • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮ
    • ಶಿಖರ್ ಪಹಾರಿಯಾ ಜೊತೆಗಿನ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾಜಿ ಸಿಎಂ ಮೊಮ್ಮಗನೇ ಜಾನ್ವಿ ಕಪೂರ್ ಬಾಯ್ ಫ್ರೆಂಡ್! ಅಂಬಾನಿ ಮಗನ ಮದುವೆಯಲ್ಲಿ ಹೊರಬಿತ್ತು ಬಿಗ್ ಸೀಕ್ರೆಟ್ title=
Janhvi Kapoor Shikhar Paharia Love Story

Janhvi Kapoor Boyfriend: ನಟಿ ಜಾನ್ವಿ ಕಪೂರ್ ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲೂ ಸುದ್ದಿಯಲ್ಲಿದ್ದಾರೆ. ಅವರು ಹಲವು ವರ್ಷಗಳಿಂದ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಬಾಲಿವುಡ್ ಲೋಕದಲ್ಲಿ ಸದ್ದು ಮಾಡುತ್ತಿರುವ ಸುದ್ದಿ.

ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: Darshan: ಜೈಲಿನಲ್ಲಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿರುವ ನಟ ದರ್ಶನ್!   

ಈ ಜೋಡಿ ಪ್ರಪಂಚದ ಕಣ್ಣುಗಳಿಂದ ಮರೆಯಾಗುತ್ತಿದ್ದ ಕಾಲವಿತ್ತು, ಆದರೆ ಈಗ ಇಬ್ಬರೂ ಸಹ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಜಾನ್ವಿ ಅನೇಕ ಬಾರಿ ಶಿಖು ಎಂಬ ಲಾಕೆಟ್ ಅನ್ನು ಧರಿಸಿಕೊಂಡಿರುವುದು ಕಂಡುಬಂದಿತ್ತು.

ಅಷ್ಟೇ ಅಲ್ಲದೆ, ಶಿಖರ್ ಪಹಾರಿಯಾ ಜೊತೆಗಿನ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಶಿಖರ್ ಪಹಾರಿಯಾ ಪ್ರಸಿದ್ಧ ಉದ್ಯಮಿ ಸಂಜಯ್ ಪಹಾರಿಯಾ ಮತ್ತು ಸ್ಮೃತಿ ಸಂಜಯ್ ಪಹಾರಿಯಾ ಅವರ ಮಗ. ಇನ್ನು ಸಹೋದರ ವೀರ್ ಪಹಾರಿಯಾ 'ಸ್ಕೈ ಫೋರ್ಸ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ.

ಬಾಂಬೆ ಸ್ಕಾಟಿಷ್ ಸ್ಕೂಲ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌’ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ಶಿಖರ್, ನಂತರ ಲಂಡನ್‌’ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ಜಾಗತಿಕ ಹಣಕಾಸು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ, ತಂದೆ ಸಂಜಯ್ ಪಹಾರಿಯಾ ಅವರ ವ್ಯವಹಾರಕ್ಕೆ ಕಾಲಿಡುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ. ಸ್ಮೃತಿ ಸಂಜಯ್ ಪಹಾರಿಯಾ ಅವರು ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಶಿಂಧೆ ಕುಟುಂಬವು ಹಲವು ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌’ನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಇದನ್ನೂ ಓದಿ: ರೋಹಿತ್’ರನ್ನು ನಾಯಕನನ್ನಾಗಿ ಮಾಡಿದ್ದು ನಾನೇ... ಟೀಂ ಇಂಡಿಯಾದ ದಿಗ್ಗಜನ ಹೇಳಿಕೆ ವೈರಲ್

ಅಂದಹಾಗೆ ಶಿಖರ್ ಒಬ್ಬ ವೃತ್ತಿಪರ ಕುದುರೆ ಸವಾರ. ವ್ಯವಹಾರದ ಜೊತೆಗೆ, ವೃತ್ತಿಪರ ಪೋಲೋ ಆಟಗಾರನೂ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News