ಹಾಟ್‌ ಡ್ರೇಸ್‌ನಲ್ಲಿ ಜಾನ್ವಿ ಕ್ಯೂಟ್‌ ಆಕ್ಟ್‌ : ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ಫ್ಯಾನ್ಸ್‌..!

ಧಡಕ್ ಬೆಡಗಿ ಜಾನ್ವಿ ಕಪೂರ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಮುದ್ದು ಚೆಲುವೆ. ಇದೀಗ ಜಾನ್ವಿ ಹೊಸ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

Written by - Krishna N K | Last Updated : Nov 12, 2022, 05:45 PM IST
  • ಹಾಟ್‌ ಡ್ರೇಸ್‌ನಲ್ಲಿ ಜಾನ್ವಿ ಕಪೂರ್‌ ಕ್ಯೂಟ್‌ ಆಕ್ಟ್‌ ವಿಡಿಯೋ ವೈರಲ್‌
  • ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ಫ್ಯಾನ್ಸ್‌
  • ಪೋಸ್ಟ್‌ಗೆ ʼಯೇ ಶಾಂತಿ ಕುಚ್ ಅಲಗ್ ಲಗ್ ರಹೀ ಹೈʼ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
ಹಾಟ್‌ ಡ್ರೇಸ್‌ನಲ್ಲಿ ಜಾನ್ವಿ ಕ್ಯೂಟ್‌ ಆಕ್ಟ್‌ : ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ಫ್ಯಾನ್ಸ್‌..! title=

Janhvi Kapoor reels : ಧಡಕ್ ಬೆಡಗಿ ಜಾನ್ವಿ ಕಪೂರ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಮುದ್ದು ಚೆಲುವೆ. ಇದೀಗ ಜಾನ್ವಿ ಹೊಸ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ಜಾನ್ವಿ ಕಪೂರ್ ಆಗಾಗ್ಗೆ ತನ್ನ ಸಿಬ್ಬಂದಿಯೊಂದಿಗೆ ಕಾಮಿಡಿ ರೀಲ್ಸ್‌ ಮಾಡುತ್ತಿರುತ್ತಾರೆ. ಆ ವಿಡಿಯೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಅವರು ದೀಪಿಕಾ ಪಡುಕೋಣೆಯ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ'ದ ಪ್ರಸಿದ್ಧ ದೃಶ್ಯವನ್ನು ಮರುಸೃಷ್ಟಿಸಿದ ರಿಲ್ಸ್‌ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಪೋಸ್ಟ್‌ಗೆ ʼಯೇ ಶಾಂತಿ ಕುಚ್ ಅಲಗ್ ಲಗ್ ರಹೀ ಹೈʼ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. 

ಇದನ್ನೂ ಓದಿ: ಕಾಂತಾರ ʼವರಾಹ ರೂಪಂʼ ಹಾಡು ಡಿಲೀಟ್‌ : ʼತೈಕ್ಕುಡಂ ಬ್ರಿಡ್ಜ್‌ʼಗೆ ಲಭಿಸಿತಾ ಜಯ..!

ವಿಡಿಯೋದಲ್ಲಿ ಜಾನ್ವಿ ಓಂ ಶಾಂತಿ ಓಂ ಸಿನಿಮಾದ ಫೇಮಸ್‌ ಡೈಲಾಗ್‌ ಹೇಳುತ್ತಾರೆ. ಜಾನ್ವಿ ಸ್ನೇಹಿತ ವೈಷ್ಣವ್ ಪ್ರವೀಣ್ ನೆಲದ ಮೇಲೆ ಮಲಗಿದ್ದು, ಸತ್ತಂತೆ ನಟಿಸಿದ್ದು, ನಗು ಬರಿಸುವಂತಿದೆ. ಸದ್ಯ ಈ ವಿಡಿಯೋ ನೋಡುಗರನ್ನು ನಗೆಗಡಲಿದೆ ತೇಲುವಂತೆ ಮಾಡುತ್ತಿದೆ. ಕ್ಯೂಟ್‌ ಬೆಡಗಿಯ ಡ್ರೇಸ್‌ ವಿಚಾರಕ್ಕೆ ಬರುವುದಾದ್ರೆ, ಡೀಪ್ ಪ್ಲಂಗಿಂಗ್ ನೆಕ್‌ಲೈನ್ ಫಿಶ್ ಕಟ್ ಸಿಲ್ವರ್ ಡ್ರೆಸ್‌ನಲ್ಲಿ ಜಾನ್ವಿ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ನಿರ್ದೇಶಕ ಮಾತುಕುಟ್ಟಿ ಕ್ಸೇವಿಯರ್ ಅವರ ಥ್ರಿಲ್ಲರ್ ʼಮಿಲಿʼಯಲ್ಲಿ ಜಾನ್ವಿ ಕಪೂರ್ ಅಭಿನಯಿಸಿದ್ದು ಸಿನಿಮಾ ವ್ಯಾಪಕ ಮೆಚ್ಚುಗೆ ಪಡೆದಿದೆ. ʼಮಿಲಿʼ ಚಿತ್ರದಲ್ಲಿ ಸನ್ನಿ ಕೌಶಲ್, ಮನೋಜ್ ಪಹ್ವಾ ಮತ್ತು ಸೀಮಾ ಪಹ್ವಾ ಪ್ರಮುಖ ಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ವಿಜಯ್ ದೇವರಕೊಂಡ ಮತ್ತು ಪೂಜಾ ಹೆಗ್ಡೆ ಅಭಿನಯದ ಜನ ಗಣ ಮನ ಸಿನಿಮಾದಲ್ಲಿಯೂ ಜಾನ್ವಿ ನಟಿಸಿದ್ದಾರೆ. ಇದನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News