James Movie Release: ಕನ್ನಡಿಗರ ನಾಡಲ್ಲಿ 'ಜೇಮ್ಸ್‌' ಜಾತ್ರೆ ಶುರು..! ಹೇಗಿದೆ ಗೊತ್ತಾ ಅಪ್ಪು ಸಿನಿಮಾ ಸಂಭ್ರಮ..?

James Movie Release: ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಜೇಮ್ಸ್‌ ಸಿನಿಮಾ ರಿಲೀಸ್‌ (James Cinema Release) ಆಗಿದ್ದು, 5 ಭಾಷೆಗಳಲ್ಲಿ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ ತೆರೆಗೆ ಬಂದಿದೆ.   

Written by - Malathesha M | Edited by - Yashaswini V | Last Updated : Mar 17, 2022, 07:51 AM IST
  • ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಜೇಮ್ಸ್‌ ಸಿನಿಮಾ ರಿಲೀಸ್‌
  • 5 ಭಾಷೆಗಳಲ್ಲಿ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಕೊನೆಯ ಸಿನಿಮಾ ತೆರೆಗೆ ಬಂದಿದೆ
  • ಜೊತೆಗೆ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲೂ ಟಿಕೆಟ್ಸ್‌ ಸೋಲ್ಡ್‌ ಔಟ್‌ ಆಗಿದ್ದು, ಮೊದಲ 3 ದಿನಗಳ ಕಾಲ ಟಿಕೆಟ್‌ ಸಿಗೋದೆ ಡೌಟ್‌ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
James Movie Release: ಕನ್ನಡಿಗರ ನಾಡಲ್ಲಿ 'ಜೇಮ್ಸ್‌' ಜಾತ್ರೆ ಶುರು..! ಹೇಗಿದೆ ಗೊತ್ತಾ ಅಪ್ಪು ಸಿನಿಮಾ ಸಂಭ್ರಮ..? title=
Most awaited James film release

James Movie Release: ಎಲ್ಲೆಲ್ಲೂ 'ಜೇಮ್ಸ್‌' (James) ಜಪ ಶುರುವಾಗಿದ್ದು, ಅಪ್ಪು ಅಭಿನಯದ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿದೆ. ಬೆಂಗಳೂರಿನ ಥಿಯೇಟರ್‌ಗಳ ಬಳಿ ಬೆಳ್ಳಂಬೆಳಗ್ಗೆ ಸಂಭ್ರಮ ಮುಗಿಲು ಮುಟ್ಟಿದ್ದು, ಬೆಳಗ್ಗೆಯಿಂದಲೇ 'ಜೇಮ್ಸ್‌' ಜಾತ್ರೆ ಶುರುವಾಗಿದೆ. ಅದರಲ್ಲೂ ವೀರೇಶ್, ವೀರಭದ್ರೇಶ್ವರ ಹಾಗೂ ತ್ರಿವೇಣಿ ಸೇರಿದಂತೆ ಬೆಂಗಳೂರಿನ ನೂರಾರು ಥಿಯೇಟರ್ ಗಳ ಬಳಿ ಅಭಿಮಾನಿಗಳ ಸಾಗರವೇ ನೆರೆದಿದೆ‌.

ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 4 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಜೇಮ್ಸ್‌ ಸಿನಿಮಾ ರಿಲೀಸ್‌ (James Cinema Release) ಆಗಿದ್ದು, 5 ಭಾಷೆಗಳಲ್ಲಿ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ ತೆರೆಗೆ ಬಂದಿದೆ. ಜೊತೆಗೆ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲೂ ಟಿಕೆಟ್ಸ್‌ ಸೋಲ್ಡ್‌ ಔಟ್‌ ಆಗಿದ್ದು, ಮೊದಲ 3 ದಿನಗಳ ಕಾಲ ಟಿಕೆಟ್‌ ಸಿಗೋದೆ ಡೌಟ್‌ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ- Puneeth Rajkumar Birthday: ವಿಶ್ವವಿಖ್ಯಾತ ಹಂಪಿಯಲ್ಲಿ 'ಅಪ್ಪು ಹಬ್ಬ'

ಹಾಲಿನ ಅಭಿಷೇಕ:
ಚಿತ್ರತಂಡ ಕೂಡ ಜೇಮ್ಸ್‌' ಬಿಡುಗಡೆಗೆ (James Release) ಸಕಲ ಸಿದ್ಧತೆ ಮಾಡಿಕೊಂಡಿತ್ತು, ಇದ್ದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಸಿದ್ಧತೆಯೇ ಜೋರಾಗಿತ್ತು. ಇವತ್ತು ಬೆಳ್ಳಂಬೆಳಗ್ಗೆ ಅಪ್ಪು ಕಟೌಟ್ ಗೆ ಪುಷ್ಪಾರ್ಚನೆ ಹಾಗೂ ಹಾಲಿನ ಅಭಿಷೇಕ ನೆರವೇರಿಸಿದ ಅಪ್ಪು ಫ್ಯಾನ್ಸ್, ಮುಗಿಲು ಮುಟ್ಟುವಂತೆ ಘೋಷಣೆ ಕೂಗಿದರು.

ಇದನ್ನೂ ಓದಿ- 9 ನವಜಾತ ಗಂಡು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ!

ಇದಿಷ್ಟೇ ಅಲ್ಲ, ಇಂದು ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವೂ (Dr. Puneeth Rajkumar Birthday) ಆಗಿದ್ದು ಇನ್ನೂ ಹಲವು ವಿಶೇಷ ಕಾರ್ಯಕ್ರಮಗಳನ್ನು ಅಪ್ಪು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅನ್ನದಾಸೋಹ ಕೂಡ ನೆರವೇರಿಸಲಿದ್ದಾರೆ. ಇನ್ನು ರಾಜ್ಯಾದ್ಯಂತ ಗಲ್ಲಿಗಲ್ಲಿಯಲ್ಲೂ ಅಪ್ಪು ಕಟೌಟ್‌ಗಳು ರಾರಾಜಿಸುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News