ರಜನಿಗೆ ವಯಸ್ಸೇ ಆಗಲ್ವಾ...! ಯಂಗ್‌ ಲುಕ್‌ನಲ್ಲಿರುವ ತಲೈವಾ ಫೋಟೋ ವೈರಲ್‌

Jailer movie : ಇಂಡಿಯನ್‌ ಸಿನಿರಂಗದ ಸೂಪರ್‌ ಸ್ಟಾರ್‌ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋಗಳು ವೈರಲ್‌ ಆಗಿವೆ.

Written by - Krishna N K | Last Updated : Jun 1, 2023, 08:03 PM IST
  • ಸೂಪರ್‌ ಸ್ಟಾರ್‌ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯ.
  • ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.
  • ತಲೈವಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.
ರಜನಿಗೆ ವಯಸ್ಸೇ ಆಗಲ್ವಾ...! ಯಂಗ್‌ ಲುಕ್‌ನಲ್ಲಿರುವ ತಲೈವಾ ಫೋಟೋ ವೈರಲ್‌ title=

Rajinikanth Jailer movie : ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮುಂಬರುವ ಚಿತ್ರ ʼಜೈಲರ್‌ʼ ಸಿನಿಮಾದ ಚಿತ್ರೀಕರಣ ಇಂದಿಗೆ ಮುಕ್ತಾಯವಾಗಿದೆ. ಈ ಕುರಿತು ಚಿತ್ರತಂಡ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿರುವ ಫೋಟೋಗಳನ್ನು ಹಂಚಿಕೊಂಡಿದೆ. ಚಿತ್ರದಲ್ಲಿನ ರಜಿನಿ ಲುಕ್‌ ನೋಡಿದ ತಲೈವಾ ಫ್ಯಾನ್ಸ್‌ ಆಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ʼಜೈಲರ್‌ʼ ಶೂಟಿಂಗ್‌ ಮುಕ್ತಾಯವಾದ ಹಿನ್ನೆಲೆ ಕೆಕ್‌ ಕಟ್‌ಮಾಡಿ ಸಂಭ್ರಮಿಸಿರುವ ಚಿತ್ರಗಳನ್ನು ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ತನ್ನ ಅಧಿಕೃತ ಟ್ಟಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ರಜನಿಕಾಂತ್ ಜೊತೆ ತಮನ್ನಾ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸೇರಿದಂತೆ ಚಿತ್ರತಂಡ ಇದೆ. ಸದ್ಯ ರಜಿನಿ ಡ್ಯಾಶಿಂಗ್ ಲುಕ್‌ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿದೆ. ಮಾಹಿತಿಯ ಪ್ರಕಾರ, ಚಿತ್ರತಂಡ ಚಿತ್ರದಲ್ಲಿನ ಹಾಡುಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಂಡರ್ ವಾಟರ್‌ನಲ್ಲಿ ನಿವಿ-ಚಂದನ್ ರೋಮ್ಯಾನ್ಸ್‌ ವಿಡಿಯೋ ವೈರಲ್‌

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳು ಹೊರಬಿದ್ದ ಕೂಡಲೇ ನೆಟಿಜನ್‌ಗಳು ತಲೈವಾ ಲುಕ್‌ ನೋಡಿ ಬೆಚ್ಚಿ ಬಿದ್ದಿದ್ದಾರೆ. ರಜನೀಕಾಂತ್ ಯಂಗ್‌ಲುಕ್‌ ಮೋಡಿ ಮಾಡಿದೆ. ಜೈಲರ್ ಇತಿಹಾಸವನ್ನು ಮಾಡುತ್ತಾನೆ... ಬ್ಲಾಕ್‌ಬಸ್ಟರ್.. ಸೂಪರ್‌ ಸೇರಿದಂತೆ ಹಲವು ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ರಜಿನಿ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿಸುತ್ತಿದ್ದಾರೆ. ಜೈಲರ್‌ ಆಗಸ್ಟ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು ತಲೈವಾ ಸಿನಿಮಾ ಜೊತೆಗೆ ರಣಬೀರ್ ಕಪೂರ್, ಬಾಬಿ ಡಿಯೋಲ್, ಮತ್ತು ರಶ್ಮಿಕಾ ಮಂದಣ್ಣ ಅವರ ಗ್ಯಾಂಗ್‌ಸ್ಟರ್ ಡ್ರಾಮಾ ʼಅನಿಮಲ್ʼ ಮತ್ತು ಸನ್ನಿ ಡಿಯೋಲ್ ಮತ್ತು ಅಮೀಶ್ ಪಟೇಲ್ ಅಭಿನಯದ ʼಗದರ್ 2ʼ ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಘರ್ಷಣೆಗೆ ಸಿದ್ಧವಾಗಿದೆ. ವಿವೇಕ್ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್ ವಾರ್ʼ ಸಹ ಆಗಸ್ಟ್ 15 ರಂದು ತೆರೆಗೆ ಬರಲಿದೆ. ಜೈಲರ್ ಜೊತೆಗೆ ಸೌಂದರ್ಯ ರಜನಿಕಾಂತ್ ಅವರ ಲಾಲ್ ಸಲಾಂ ಚಿತ್ರದಲ್ಲಿಯೂ ರಜನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News