ಅಮಾಯಕ ಸಹೋದರಿಯ ಸಾವು ಕಾಡುತ್ತಿತ್ತು; ಜಗ್ಗೇಶ್ ಟ್ವೀಟ್

ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್‌ಕೌಂಟರ್‌ ಮಾಡಲಾಗಿದೆ. ಈ ಕುರಿತು ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

Last Updated : Dec 6, 2019, 02:32 PM IST
ಅಮಾಯಕ ಸಹೋದರಿಯ ಸಾವು ಕಾಡುತ್ತಿತ್ತು; ಜಗ್ಗೇಶ್ ಟ್ವೀಟ್ title=

ಬೆಂಗಳೂರು: ತೆಲಂಗಾಣದಲ್ಲಿ ಪಶು ವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್‌ಕೌಂಟರ್‌ ಮಾಡಲಾಗಿದೆ. 

ಹೈದರಾಬಾದ್ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ; ನಾಲ್ವರು ಆರೋಪಿಗಳ ಎನ್‌ಕೌಂಟರ್‌

ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವರಸ ನಾಯಕ ಜಗ್ಗೇಶ್(Navarasanayaka Jaggesh), 'ಅಮಾಯಕ ಸಹೋದರಿ ಸಾವು ನನ್ನ ಕಾಡುತ್ತಿತ್ತು ವಾರದಿಂದ ಇಂದು ಸಮಾಧಾನವಾಯಿತು! ಈ ಕಾರ್ಯ ಮಾಡಿದ ಆರಕ್ಷಕರೆ ಆ ಮಹಾದೇವಿ ಕೃಪೆ ನಿಮ್ಮ ಮೇಲಿರಲಿ' ಎಂದಿದ್ದಾರೆ.

ನಾಲ್ವರು ಆರೋಪಿಗಳ ಎನ್‌ಕೌಂಟರ್‌; ಸಂತ್ರಸ್ತೆ ತಂದೆ ಹೇಳಿದ್ದೇನು?

ಈ ಕುರಿತು ಟ್ವೀಟ್ ಮಾಡಿರುವ ನಟ ಜಗ್ಗೇಶ್(Jaggesh), "ದುರ್ಗಾಮಾತೆಗೆ ವಿಶೇಷ ನಮಸ್ಕಾರ ಅರ್ಪಿಸಿ ಶ್ರಿಚಕ್ರದ 7ನೇ ಮುದ್ರೆ ಯಲ್ಲಿ 108 ದಕ್ಷಿಣ ಕಾಳಿಕ ಕಿಂಕಿಣಿ ವಿಚ್ಚೆ ಚಪಮಾಡಿ.. ಇನ್ನು ಸತ್ಯವಿದೆ ಭೂಮಿಯಲ್ಲಿ ಎಂದು ದನ್ಯವಾದ ಅರ್ಪಿಸಿದೆ ದೇವಿಗೆ! ಅಮಾಯಕ ಸಹೋದರಿ ಸಾವು ನನ್ನ ಕಾಡುತ್ತಿತ್ತು ವಾರದಿಂದ ಇಂದು ಸಮಾಧಾನವಾಯಿತು! ಈ ಕಾರ್ಯ ಮಾಡಿದ ಆರಕ್ಷಕರೆ ಆ ಮಹಾದೇವಿ ಕೃಪೆ ನಿಮ್ಮ ಮೇಲಿರಲಿ.. ಎಂದು ಬರೆದಿದ್ದಾರೆ.

ಈ ಮೊದಲೂ ಆಸಿಡ್ ದಾಳಿ ಮಾಡಿದ್ದವರನ್ನು ಎನ್‌ಕೌಂಟರ್‌ ಮಾಡಿದ್ದ 'ವಿಸಿ ಸಜ್ಜನರ್'!

Trending News