Jogi Prem: ಮಲ್ಟಿಪ್ಲೆಕ್ಸ್‌ಗಳಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ..? ಸಿಡಿದೆದ್ದ ಡೈರೆಕ್ಟರ್‌ ಜೋಗಿ ಪ್ರೇಮ್..!

ಸಿನಿಮಾ ಹಿಟ್‌ ಆಗಲು ಸೌಂಡ್‌ ಕ್ವಾಲಿಟಿ ತುಂಬಾನೆ ಮುಖ್ಯ. ಕೆಲವು ಬಾರಿ ಮ್ಯೂಸಿಕ್‌ನಿಂದಲೇ ಸಿನಿಮಾ ಹಿಟ್‌ ಆದ ಉದಾಹರಣೆಗಳಿವೆ. ಅದರಲ್ಲೂ ನಿರ್ದೇಶಕ ಪ್ರೇಮ್‌ ತಮ್ಮ ಸಿನಿಮಾಗಳಲ್ಲಿ ಸಂಗೀತಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಈಗಲೂ ಕೂಡ ಸಂಗೀತ ಆಧಾರಿತ ಚಿತ್ರವನ್ನು ಕನ್ನಡಿಗರ ಮುಂದಿಡಲು ಮುಂದಾಗಿದ್ದಾರೆ ಪ್ರೇಮ್.‌ ಮ್ಯೂಸಿಕ್‌ ವಿಚಾರಕ್ಕೆ ಜೋಗಿ ಪ್ರೇಮ್‌ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಸದ್ಯ ಗರಂ ಆಗಿದ್ದಾರೆ. 

Written by - Malathesha M | Edited by - Yashaswini V | Last Updated : Feb 9, 2022, 01:25 PM IST
  • ಸಿನಿಮಾ ಹಿಟ್‌ ಆಗಲು ಸೌಂಡ್‌ ಕ್ವಾಲಿಟಿ ತುಂಬಾನೆ ಮುಖ್ಯ
  • ಕೆಲವು ಬಾರಿ ಮ್ಯೂಸಿಕ್‌ನಿಂದಲೇ ಸಿನಿಮಾ ಹಿಟ್‌ ಆದ ಉದಾಹರಣೆಗಳಿವೆ
  • ಮ್ಯೂಸಿಕ್‌ ವಿಚಾರಕ್ಕೆ ಜೋಗಿ ಪ್ರೇಮ್‌ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಸದ್ಯ ಗರಂ ಆಗಿದ್ದಾರೆ
Jogi Prem: ಮಲ್ಟಿಪ್ಲೆಕ್ಸ್‌ಗಳಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ..? ಸಿಡಿದೆದ್ದ ಡೈರೆಕ್ಟರ್‌ ಜೋಗಿ ಪ್ರೇಮ್..! title=
Injustice by Multiplexes to kannada films said Director of Jogi Prem

ಬೆಂಗಳೂರು: ಆಧುನಿಕ ಕಾಲದಲ್ಲಿ ಮಲ್ಟಿಪ್ಲೆಕ್ಸ್‌ಗಳದ್ದೇ ಹವಾ. ಇದೇ ಕಾರಣಕ್ಕೆ ಸಿಂಗಲ್‌ ಸ್ಕ್ರೀನ್ ಸಿನಿಮಾ ಮಂದಿರಗಳು ಮಾಯವಾಗುತ್ತಿವೆ. ಮತ್ತೊಂದು ಕಡೆ ಮಲ್ಟಿಪ್ಲೆಕ್ಸ್‌ ಹಾಗೂ ಕನ್ನಡ ಚಿತ್ರರಂಗದ ಮಧ್ಯೆ ಹಲವು ಬಾರಿ ತಿಕ್ಕಾಟವೂ ನಡೆದಿದೆ. ಪರಭಾಷೆ ಸಿನಿಮಾಗಳ ಬಿಡುಗಡೆ ಸಂಬಂಧ ಕನ್ನಡ ಚಿತ್ರರಂಗ ಹಲವು ಸಂದರ್ಭಗಳಲ್ಲಿ ಸಿಡಿದೆದ್ದಿದ್ದು ಉಂಟು. ಇದೀಗ ನಿರ್ದೇಶಕ ಜೋಗಿ ಪ್ರೇಮ್‌ ಬೇರೆಯದ್ದೇ ವಿಚಾರಕ್ಕೆ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಗರಂ ಆಗಿದ್ದಾರೆ.

ಸಿನಿಮಾ ಹಿಟ್‌ ಆಗಲು ಸೌಂಡ್‌ ಕ್ವಾಲಿಟಿ ತುಂಬಾನೆ ಮುಖ್ಯ. ಕೆಲವು ಬಾರಿ ಮ್ಯೂಸಿಕ್‌ನಿಂದಲೇ ಸಿನಿಮಾ ಹಿಟ್‌ ಆದ ಉದಾಹರಣೆಗಳಿವೆ. ಅದರಲ್ಲೂ ನಿರ್ದೇಶಕ ಪ್ರೇಮ್‌ (Director Prem) ತಮ್ಮ ಸಿನಿಮಾಗಳಲ್ಲಿ ಸಂಗೀತಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಈಗಲೂ ಕೂಡ ಸಂಗೀತ ಆಧಾರಿತ ಚಿತ್ರವನ್ನು ಕನ್ನಡಿಗರ ಮುಂದಿಡಲು ಮುಂದಾಗಿದ್ದಾರೆ ಪ್ರೇಮ್.‌ ಮ್ಯೂಸಿಕ್‌ ವಿಚಾರಕ್ಕೆ ಜೋಗಿ ಪ್ರೇಮ್‌ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಸದ್ಯ ಗರಂ ಆಗಿದ್ದಾರೆ. 

'ಸೌಂಡ್‌ನಲ್ಲೂ ಅನ್ಯಾಯ':
ಅಂದಹಾಗೆ ಕನ್ನಡ ಸಿನಿಮಾಗಳಿಗೆ (Kannada Films) ಸರಿಯಾದ ಸ್ಕ್ರೀನ್‌ಗಳನ್ನು ಕೊಡದೆ, ಶೋ ಸಮಯವನ್ನೂ ಬೇಕಾಬಿಟ್ಟಿ ಕೊಟ್ಟು ಮಲ್ಟಿಪ್ಲೆಕ್ಸ್‌ಗಳು ಅನ್ಯಾಯ ಮಾಡ್ತಿವೆ ಎಂದು ನಿರ್ದೇಶಕ ಪ್ರೇಮ್‌ ಆರೋಪಿಸಿದ್ದಾರೆ. ಸದ್ಯ ಪ್ರದರ್ಶನವಾಗುತ್ತಿರುವ ಕನ್ನಡ ಚಿತ್ರಗಳ ಸೌಂಡ್ ಕ್ವಾಲಿಟಿಯನ್ನೂ ಸರಿಯಾದ ರೀತಿಯಲ್ಲಿ‌ ಪ್ರೇಕ್ಷಕರಿಗೆ ತಲುಪಿಸದೆ ಕನ್ನಡ ಸಿನಿಮಾಗಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ಪ್ರೇಮ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-  Lata Mangeshkar Property Worth : ಲತಾ ಮಂಗೇಶ್ಕರ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?

ಡೈರೆಕ್ಟರ್‌ ಪ್ರೇಮ್‌ ಆಕ್ರೋಶ:
ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.  ಫೆಬ್ರವರಿ 24ಕ್ಕೆ ‘ಏಕ್‌ ಲವ್‌ ಯಾ’  ಬಿಡುಗಡೆಯಾಗಲಿದೆ. ಈ ಕುರಿತು ಡೈರೆಕ್ಟರ್ ಪ್ರೇಮ್‌ ಮಲ್ಟಿಪ್ಲೆಕ್ಸ್‌ಗಳ ಸೌಂಡ್‌ ಸಿಸ್ಟಮ್‌ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ‌ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯ ಈಗಲಾದರೂ ನಿಲ್ಲಬೇಕು ಎಂದು ನಿರ್ದೇಶಕ ಪ್ರೇಮ್‌ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಾಣಿಜ್ಯ ಮಂಡಳಿಗೆ ದೂರು:
‘ನಾವು 4.5 ಸೌಂಡಿಂಗ್‌ನಲ್ಲಿ ಮಿಕ್ಸ್‌ ಮಾಡಿಕೊಂಡಿರುತ್ತೇವೆ. ಮಲ್ಟಿಪ್ಲೆಕ್ಸ್‌ಗಳು ಮೊದಲಿನಿಂದಲೂ ಕನ್ನಡ ಸಿನಿಮಾ ಪ್ರದರ್ಶನವಾಗುವ ಸಂದರ್ಭದಲ್ಲಿ ಸೌಂಡ್‌ ಕೇಳಿಸುವಲ್ಲಿ ಸಮಸ್ಯೆ ಮಾಡುತ್ತಿವೆ. 4.5 ಸೌಂಡಿಂಗ್‌ನಲ್ಲಿ ಮಿಕ್ಸ್‌ ಮಾಡಿರುವಾಗ ಚಿತ್ರಮಂದಿರದಲ್ಲಿ ಅದನ್ನು 7ಕ್ಕೆ ಇಟ್ಟರೆ ಮಾತ್ರ ಸ್ಪಷ್ಟವಾಗಿ ಕೇಳುತ್ತದೆ. ಆದರೆ ಕನ್ನಡ ಸಿನಿಮಾಗಳಿಗೆ 4 ಪಾಯಿಂಟ್‌ ಇಡುತ್ತಾರೆ. ಅದರೆ ಪರಭಾಷೆ ಚಿತ್ರಗಳಿಗೆ 7.4 ಪಾಯಿಂಟ್‌ವರೆಗೆ ಇಡ್ತಾರೆ. ಕನ್ನಡ ಸಿನಿಮಾಗಳಿಗೆ ಮಾತ್ರ ಯಾಕೆ ಹೀಗೆ ಅಂತಾ ಕೇಳಿದರೂ ಹೇಳುವುದಿಲ್ಲ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ’ ಎಂದು ಪ್ರೇಮ್‌ ತಿಳಿಸಿದ್ದಾರೆ.

ಇದನ್ನೂ ಓದಿ- Pushpa Movie: Samantha ಗೂ ಮುನ್ನ 'O Antava Mava' ಹಾಡಿಗಾಗಿ ಯಾರ್ಯಾರನ್ನು ಸಂಪರ್ಕಿಸಲಾಗಿತ್ತು ಗೊತ್ತಾ?

ಅಪ್ಲೋಡ್‌ಗೂ ಸಮಸ್ಯೆ:
ಇದಿಷ್ಟೇ ಅಲ್ಲ, ಕನ್ನಡ ಸಿನಿಮಾ ಅಪ್ಲೋಡ್‌ ಮಾಡುವಾಗ ಎದುರಾಗುತ್ತಿರುವ ಸಮಸ್ಯೆ ಬಗ್ಗೆ ಕೂಡ ಡೈರೆಕ್ಟರ್‌ ಪ್ರೇಮ್‌  ಧ್ವನಿ ಎತ್ತಿದ್ದಾರೆ. ‘ಸಿನಿಮಾಗಳನ್ನು ಯುಎಫ್‌ಓ ಮತ್ತು ಕ್ಯೂಬ್‌ಗಳಿಗೆ ಅಪ್ಲೋಡ್‌ ಮಾಡಲು ಬೆಂಗಳೂರಿನಲ್ಲಿ ಸೂಕ್ತ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಆದ್ರೆ ಚೆನ್ನೈ, ಹೈದರಾಬಾದ್‌, ಹಾಗೂ ಮುಂಬಯಿಯಲ್ಲಿ ಅಪ್ಲೋಡಿಂಗ್‌ಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದಾರೆ. ನಾವು ಕನ್ನಡ ಸಿನಿಮಾಗಳನ್ನು ಅಪ್ಲೋಡ್‌ ಮಾಡಲು ಚೆನ್ನೈಗೆ ಹೋಗಬೇಕು. ಈ ಸಮಸ್ಯೆ ಬಗ್ಗೆ ಯುಎಫ್‌ಓ, ಕ್ಯೂಬ್‌ ಸಂಸ್ಥೆಗಳಿಗೆ ವಾಣಿಜ್ಯ ಮಂಡಳಿಯಿಂದ 
ಕರೆ ಮಾಡಿ ಮಾತನಾಡಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದಿದ್ದಾರೆ ಡೈರೆಕ್ಟರ್‌ ಜೋಗಿ ಪ್ರೇಮ್.

ಒಟ್ಟಾರೆ ಹೇಳೋದಾದ್ರೆ, ವಿಶ್ವಮಟ್ಟದಲ್ಲಿ ಕನ್ನಡ ಚಿತ್ರಗಳು ಮಿಂಚುತ್ತಿವೆ. ಈಗಲಾದ್ರೂ ಕನ್ನಡ ಚಿತ್ರಗಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಹು ಬೇಗ ಸರಿಪಡಿಸಬೇಕಿದೆ. ಇಲ್ಲವಾದರೆ ಈ ತಿಕ್ಕಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News