ಭಾರತದ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ!

ಲಾಸ್ ಏಂಜಲೀಸ್'ನ ಡೋಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಚಿತ್ರಕ್ಕೆ ಅತ್ಯುತ್ತಮ ಸಾಕ್ಸ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. 

Last Updated : Feb 25, 2019, 01:22 PM IST
ಭಾರತದ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ! title=

ಲಾಸ್ ಏಂಜಲೀಸ್: ಭಾರತ ಕೇಂದ್ರಿತ ಋತುಚಕ್ರ ವಿಷಯಾಧಾರಿತ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಾಕ್ಸ್ಯಚಿತ್ರಕ್ಕೆ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಲಭಿಸಿದೆ. 

ಲಾಸ್ ಏಂಜಲೀಸ್'ನ ಡೋಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಚಿತ್ರಕ್ಕೆ ಅತ್ಯುತ್ತಮ ಸಾಕ್ಸ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸಾನ್, ಲಂಚ್ ಬಾಕ್ಸ್, ಹರಾಮ್ ಕೋರ್ ಖ್ಯಾತಿಯ ಗುನೀತ್ ಮೋಂಗ್ಯಾ ಈ ಚಿತ್ರವನ್ನು ನಿರ್ಮಿಸಿದ್ದು, ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ದಿ ನಿರ್ದೇಶಿಸಿದ್ದಾರೆ.  

ದೆಹಲಿ ಹೊರವಲಯದಲ್ಲಿರುವ ಹಾಪುರ್ ಹಳ್ಳಿಯೊಂದರಲ್ಲಿ ಋತುಸ್ರಾವದ ಬಗ್ಗೆ ಸಂಪ್ರದಾಯಿಕವಾಗಿ ಇದ್ದ ಕಳಂಕದ ವಿರುದ್ಧ ನಿಂತ ಮಹಿಳೆಯರ ಬಗ್ಗೆ ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ನರಕ ಯಾತನೆ, ಉಲ್ಬಣವಾಗುತ್ತಿದ್ದ ಆರೋಗ್ಯ ಸಮಸ್ಯೆಗಳು, ಮನೆಯಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಇವೆಲ್ಲವನ್ನೂ ಎಳೆಎಳೆಯಾಗಿ ಚಿತ್ರದಲ್ಲಿ ತೋರಿಸಲಾಗಿದ್ದು, ಬಳಿಕ ಇಲ್ಲಿನ ಮಹಿಳೆಯರು ಹೊಸ ಕರಾತಿಯನ್ನೇ ಮಾಡಿ ತಾವೇ ಪ್ಯಾಡ್ ಗಳನ್ನು ತಯಾರಿಸುವುದನ್ನು ಕಲಿತು, ಅಲ್ಲಿನ ಹೆಣ್ಣು ಮಕ್ಕಳೆಲ್ಲಾ ಸೇರಿ ಹಣ ಒಗ್ಗೂಡಿಸಿ ಪ್ಯಾಡ್ ಮಾಡುವ ಮಷಿನ್ ಖರೀದಿಸುತ್ತಾರೆ. ಹೀಗೆ ಋತುಸ್ರಾವದ ಸಂದರ್ಭದಲ್ಲಿ ಮಹಿಳೆ ಅನುಭವಿಸುವ ನೋವುಗಳು, ಸಂಪ್ರದಾಯಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ.

ಎಂಡ್ ಗೇಮ್, ಬ್ಲಾಕ್ ಶೀಪ್, ಲೈಫ್ ಬೋಟ್ ಹಾಗೂ ಎ ನೈಟ್ ಎಟ್ ದಿ ಗಾರ್ಡನ್ ಸಿನಿಮಾಗಳು ಸೇರಿದಂತೆ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಒಟ್ಟು ಹತ್ತು ಚಿತ್ರಗಳು ಆಯ್ಕೆಯಾಗಿದ್ದವು.  'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬರೋಬ್ಬರಿ ಒಂದು ದಶಕದ ಬಳಿಕ ಭಾರತ ಆಸ್ಕರ್ ಪ್ರಶಸ್ತಿ ಗಳಿಸಿದೆ. 2009ರಲ್ಲಿ 'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಎ.ಆರ್.ರೆಹಾನ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
 

Trending News