ಬಾದ್‌ ಶಾ ಸಾಂಗ್‌ನಲ್ಲಿ ಬ್ಯೂಟಿ ಇಲಿಯಾನಾ ಬೋಲ್ಡ್‌ನೆಸ್‌ ನೋಡಿ ಫ್ಯಾನ್ಸ್‌ ಶಾಕ್‌..!

ಗೋವಾ ಸುಂದರಿ ಇಲಿಯಾನಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಅಪರೂಪದ ಸೌಂದರ್ಯದ ಮೂಲಕ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಸದ್ಯ ರ‍್ಯಾಪರ್ ಬಾದ್‌ ಶಾ ಹಾಡಿನಲ್ಲಿ ಇಲಿಯಾನಾ ಕಾಣಿಸಿಕೊಂಡಿದ್ದು, ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹಾರ್ಟ್‌ ಗೆದ್ದಿದ್ದಾರೆ.

Written by - Krishna N K | Last Updated : Mar 5, 2023, 02:33 PM IST
  • ಇಲಿಯಾನಾ ಮುಂಬರುವ ಸಾಂಗ್ ಸಬ್ ಗಜಾಬ್ ಹಾಡಿನ ಪೋಸ್ಟರ್‌ ರಿಲೀಸ್‌ ಆಗಿದೆ.
  • ರ‍್ಯಾಪರ್ ಬಾದ್‌ ಶಾ ಹಾಡಿನಲ್ಲಿ ಇಲಿಯಾನಾ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಈ ಹಾಡಿನ ವೀಡಿಯೊ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಬಾದ್‌ ಶಾ ಸಾಂಗ್‌ನಲ್ಲಿ ಬ್ಯೂಟಿ ಇಲಿಯಾನಾ ಬೋಲ್ಡ್‌ನೆಸ್‌ ನೋಡಿ ಫ್ಯಾನ್ಸ್‌ ಶಾಕ್‌..! title=

Sab Gajab Song Ileana : ಗೋವಾ ಸುಂದರಿ ಇಲಿಯಾನಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಅಪರೂಪದ ಸೌಂದರ್ಯದ ಮೂಲಕ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಸದ್ಯ ರ‍್ಯಾಪರ್ ಬಾದ್‌ ಶಾ ಹಾಡಿನಲ್ಲಿ ಇಲಿಯಾನಾ ಕಾಣಿಸಿಕೊಂಡಿದ್ದು, ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹಾರ್ಟ್‌ ಗೆದ್ದಿದ್ದಾರೆ.

ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಇಲಿಯಾನಾ ಕನ್ನಡದ ʼಹುಡುಗ ಹುಡುಗಿʼ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದಾದ ನಂತರ ಹೆಚ್ಚಾಗಿ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡರು. ಆಮೇಲೆ ಬಾಲಿವುಡ್‌ನತ್ತ ಮುಖ ಮಾಡಿದ ಚೆಲುವೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಪರ್ಯಾಸ ಅಂದ್ರೆ, ಇಲಿಯಾನ್‌ ನಟಿಸಿರುವ ಯಾವುದೇ ಹಿಂದಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.

ಇದನ್ನೂ ಓದಿ: Sharmila Tagore : 60 ರ ದಶಕದಲ್ಲಿ ಬಿಕಿನಿ ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸಿದ್ದರು ಈ ಬೆಡಗಿ

ಇನ್ನು ತಮ್ಮ ಗ್ಲಾಮರ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುವ ಸುಂದರಿ, ತನ್ನ ವಿದೇಶಿ ಲವ್‌ ಸ್ಟೋರಿ ಎಂಡ್‌ ಮಾಡಿ ಮತ್ತೇ ಸಿನಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಎರಡು ಮೂರು ಚಿತ್ರಗಳಲ್ಲಿ ನಟಿಸುತ್ತಿರುವ ಇಲಿಯಾನ ಬಾದ್‌ ಸಾ ಆಲ್ಬಮ್‌ ವಿಡಿಯೋ ಸಾಂಗ್ ನಲ್ಲಿ ಸೊಂಟ ಬಳುಕಿಸಿದ್ದಾರೆ. ಕಳೆದ ವರ್ಷ ಬಾಲಿವುಡ್ ಗಾಯಕ ಕರಣ್ ಅವರೊಂದಿಗೆ ಆಲ್ಬಮ್‌ ವಿಡಿಯೋ ಸಾಂಗ್‌ನಲ್ಲಿ ನಟಿಸಿದ್ದರು.

ಸದ್ಯ ಇಲಿಯಾನಾ ಮುಂಬರುವ ಸಾಂಗ್ ಸಬ್ ಗಜಾಬ್ ಹಾಡಿನ ಪೋಸ್ಟರ್‌ ರಿಲೀಸ್‌ ಆಗಿದೆ. ಪೋಸ್ಟರ್‌ನಲ್ಲಿ ಬಿಟೌನ್‌ ಬೇಬಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ವೀಡಿಯೊ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News