"ಕಾಜೋಲ್ ಜೊತೆ ನಟಿಸುವ ಕನಸನ್ನು ನಾನು ಇನ್ನೂ ಬಿಟ್ಟಿಲ್ಲ...ಆದರೆ"

 ಈಗ ವಿಕ್ರಾಂತ ರೋಣ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಇತ್ತೀಚಿಗೆ ಬಾಲಿವುಡ್ ಹಂಗಾಮಾ ಜೊತೆಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ನಟಿ ಕಾಜೋಲ್ ಜೊತೆಗೆ ನಟಿಸುವ ಕನಸನ್ನು ತಾವು ಇನ್ನೂ ಬಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

Written by - Zee Kannada News Desk | Last Updated : Jun 18, 2022, 05:19 PM IST
  • ನಾನು ಕಾಜೋಲ್ ಮೇಡಮ್ ಜೊತೆ ಕೆಲಸ ಮಾಡುವ ದೊಡ್ಡ ಕನಸನ್ನು ಹೊಂದಿದ್ದೆ.
  • ಆದರೆ ಈ ಚರ್ಚೆಯೊಂದಿಗೆ ಇದು ಎಂದಾದರೂ ಆಗುತ್ತೋ ಇಲ್ಲವೋ ಗೊತ್ತಿಲ್ಲ,
"ಕಾಜೋಲ್ ಜೊತೆ ನಟಿಸುವ ಕನಸನ್ನು ನಾನು ಇನ್ನೂ ಬಿಟ್ಟಿಲ್ಲ...ಆದರೆ" title=

ನವದೆಹಲಿ: ಈಗ ವಿಕ್ರಾಂತ ರೋಣ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಇತ್ತೀಚಿಗೆ ಬಾಲಿವುಡ್ ಹಂಗಾಮಾ ಜೊತೆಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ನಟಿ ಕಾಜೋಲ್ ಜೊತೆಗೆ ನಟಿಸುವ ಕನಸನ್ನು ತಾವು ಇನ್ನೂ ಬಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗೆ ದಕ್ಷಿಣ ಭಾರತದ ಸಿನಿಮಾಗಳು ಯಶಸ್ಸಿನ ಹಿನ್ನೆಲೆಯಲ್ಲಿ ಅವುಗಳನ್ನು ಪ್ಯಾನ್ ಇಂಡಿಯಾ ಎನ್ನುವ ಟ್ಯಾಗ್ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುದೀಪ್ ನಾವು ಎಲ್ಲಾ ಪ್ರದೇಶಗಳನ್ನು ತಲುಪುವ ಸಿನಿಮಾಗಳನ್ನು ಮಾಡುತ್ತಿದ್ದೇವೆ ಆದರೆ, ಅವರು ಇದರಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಿದ್ದರು, ಇದೆ ಸಂದರ್ಭದಲ್ಲಿ ಅವರು ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ!

ಇದು ನಂತರ ವಿವಾದದ ರೂಪವನ್ನು ಪಡೆದುಕೊಂಡಿತು, ಇದಕ್ಕೆ ಪ್ರತಿಕ್ರಿಯಿಸುತ್ತಾ ಅಜೇಯ್ ದೇವಗನ್ ಸುದೀಪ್ ಜೊತೆಗೆ ಟ್ವಿಟ್ಟರ್ ಸಮರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕೊನೆಗೆ ಈ ವಿವಾದಕ್ಕೆ ಇಬ್ಬರೂ ನಟರು ತೆರೆ ಎಳೆದಿದ್ದರು.

ಈಗ ಬಾಲಿವುಡ್ ಹಂಗಾಮಾ ಜೊತೆಗಿನ ಸಂದರ್ಶನದಲ್ಲಿ ಸುದೀಪ್ ಮಾತನಾಡುತ್ತಾ "ನಾನು ಕಾಜೋಲ್ ಮೇಡಮ್ ಜೊತೆ ಕೆಲಸ ಮಾಡುವ ದೊಡ್ಡ ಕನಸನ್ನು ಹೊಂದಿದ್ದೆ.ಆದರೆ ಈ ಚರ್ಚೆಯೊಂದಿಗೆ ಇದು ಎಂದಾದರೂ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಕಾಜೋಲ್ ಅವರ ಜೊತೆ ಕೆಲಸ ಮಾಡುವ ನನ್ನ ಭರವಸೆಯನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ. ಆ ವಿಚಾರದಲ್ಲಿ ನಾನು ಸ್ಥಿರವಾಗಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ನಟ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಕಾದಿದೆ ಬಿಗ್‌ ಸರ್ಪ್ರೈಸ್..! ಏನದು ಗೊತ್ತಾ..?

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ ರೋಣ ಚಿತ್ರವು ಜುಲೈ 28ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಈಗಾಗಲೇ ಈ ಚಿತ್ರದ ಸಾಂಗ್ ಮತ್ತು ಟೀಸರ್ ಎಲ್ಲರ ಗಮನ ಸೆಳೆದಿದೆ, ಆ ಮೂಲಕ ಕೆಜಿಎಫ್, ಚಾರ್ಲಿ ನಂತರ ಕನ್ನಡದ ಮತ್ತೊಂದು ಚಿತ್ರವು ದೇಶಾದ್ಯಂತ ಸದ್ದು ಮಾಡುವುದಂತೂ ಪಕ್ಕಾ ಎನ್ನಲಾಗಿದೆ.ಈಗಾಗಲೇ ಚಿತ್ರ ತಂಡವು ಟ್ರೈಲರ್ ನ್ನು ಜೂನ್ 23 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News