ಕರೋನಾ ವೈರಸ್‌ನಿಂದ ಹೇಗೆ ಸುರಕ್ಷಿತವಾಗಿರಬೇಕು: Watch ಅಮಿತಾಬ್ video

ಈ ಹಿಂದೆ ಅಮಿತಾಬ್ ಬಚ್ಚನ್ ಅವರು ಕರೋನವೈರಸ್ ಹೆದರಿಕೆಯ ಬಗ್ಗೆ ಒಂದು ಕವಿತೆಯನ್ನು ಹಂಚಿಕೊಂಡಿದ್ದರು.

Last Updated : Mar 18, 2020, 06:40 AM IST
ಕರೋನಾ ವೈರಸ್‌ನಿಂದ ಹೇಗೆ ಸುರಕ್ಷಿತವಾಗಿರಬೇಕು: Watch ಅಮಿತಾಬ್ video title=

ನವದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್(Amitabh Bachchan) ಸಾರ್ವಜನಿಕ ಸುರಕ್ಷತಾ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ರೈಲ್ವೆ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್ ಬಚ್ಚನ್ ಸಾರ್ವಜನಿಕ ಸುರಕ್ಷತಾ ವೀಡಿಯೊವನ್ನು ಹಂಚಿಕೊಂಡಿದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಜಿ ಅವರು ಕರೋನಾ ವೈರಸ್ (CoronaVirus)  ಅನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಾಗೃತರಾಗಿರಿ ಮತ್ತು ಇತರರಿಗೂ ಅರಿವು ಮೂಡಿಸಿ. # COVID2019 ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಸೀನುವಾಗ ನಿಮ್ಮ ಬಾಯಿಯನ್ನು ಹೇಗೆ ಮುಚ್ಚಿಕೊಳ್ಳಬೇಕು ಮತ್ತು ಸೋಂಕು ತಪ್ಪಿಸಲು ಕಣ್ಣು, ಮೂಗು ಮತ್ತು ಮುಖವನ್ನು ಮುಟ್ಟಬಾರದು ಎಂಬುದರ ಕುರಿತು ಎಲ್ಲರಿಗೂ ಮಾರ್ಗದರ್ಶನ ನೀಡುವುದನ್ನು ಇದರಲ್ಲಿ ಕಾಣಬಹುದು. ಅಲ್ಲದೆ, ಮಾರಣಾಂತಿಕ COVID-19 ಏಕಾಏಕಿ ಹರಡುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ಹಲವಾರು ಇತರ ಮುನ್ನೆಚ್ಚರಿಕೆಗಳನ್ನು ಅವರು ಪಟ್ಟಿ ಮಾಡುತ್ತಾರೆ.

ಈ ಹಿಂದೆ ಅಮಿತಾಬ್ ಬಚ್ಚನ್ ಅವರು ಕರೋನವೈರಸ್ ಹೆದರಿಕೆಯ ಬಗ್ಗೆ ಒಂದು ಕವಿತೆಯನ್ನು ಹಂಚಿಕೊಂಡಿದ್ದರು. ಬಿಗ್ ಬಿ ಅವರ ಪ್ರಸಿದ್ಧ 1996 ರ ಮ್ಯೂಸಿಕ್ ವಿಡಿಯೋ 'ಇರ್ ಬಿರ್ ಫಟ್ಟೆ' ಅನ್ನು ಉಲ್ಲೇಖಿಸಿ ಕವಿತೆಯನ್ನು ವಾಚಿಸಿದರು.

ಚೀನಾದ ವುಹಾನ್ ನಗರದಲ್ಲಿ ಮೊದಲು ಹೊರಹೊಮ್ಮಿದ ಕೊರೊನಾವೈರಸ್ ಈಗ ಜಗತ್ತಿನಾದ್ಯಂತ ಆತಂಕ ಸೃಷ್ಟಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ್ದು, ವಿಶ್ವಾದ್ಯಂತ ಸರ್ಕಾರಗಳು ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಅಸಾಧಾರಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು.

Trending News