Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!

Hide And Seek Update: ಸ್ಯಾಂಡಲ್‌ವುಡ್‌ ನಟ ಅನೂಪ್‌ ರೇವಣ್ಣ ಹಾಗೂ ನಟಿ  ಧನ್ಯಾ ರಾಮ್​ಕುಮಾರ್ ನಟಿಸಿರುವ ‘ಹೈಡ್​ ಆ್ಯಂಡ್​ ಸೀಕ್​’  ಚಿತ್ರದ ಮೋಷನ್​ ಪೋಸ್ಟರ್ ಬಿಡುಗಡೆಯಾಗಿದೆ.  ಹಾಗೇಯೇ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಫಿಕ್ಸ್‌ ಆಗಿದೆ. ಇಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Feb 26, 2024, 10:53 AM IST
  • ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಈಗಾಗಲೇ ಶೀರ್ಷಿಕೆಯಿಂದಲೇ ಕೌತುಕ ಮೂಡಿಸಿದ್ದು, ಇದೀಗ ಮೋಷನ್​ ಪೋಸ್ಟರ್ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದೆ.
  • ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳಿರುವುದರ ಜೊತೆಗೆ ಇದೊಂದಿಗೆ ರಿವರ್ಸ್​ ಸ್ಕ್ರೀನ್​ಪ್ಲೇ ಆಗಿದೆ ಎಂದು ಸಿನಿತಂಡದವರು ತಿಳಿಸಿದ್ದಾರೆ.
  • ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆಗೆ ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್ ಅಂತ ದೊಡ್ಡ ತಾರಾಬಳಗವೇ ಇದೆ.
Hide And Seek: ‘ಹೈಡ್​ ಆ್ಯಂಡ್​ ಸೀಕ್​’  ಮೋಷನ್‌ ಪೋಸ್ಟರ್‌ ಔಟ್! title=

Hide And Seek Motion Poster: ಚಂದನವನದ ಪ್ರತಿಭಾನ್ವತ ನಟ ಅನೂಪ್‌ ರೇವಣ್ಣ ಹಾಗೂ ನಟಿ  ಧನ್ಯಾ ರಾಮ್​ಕುಮಾರ್​ ಅಭಿನಯದ ‘ಹೈಡ್​ ಆ್ಯಂಡ್​ ಸೀಕ್​’  ಸಿನಿಮಾ ಮೋಷನ್​ ಪೋಸ್ಟರ್​ ರಿಲೀಸ್‌ ಆಗಿದೆ.  ಈ ಚಿತ್ರ ಈಗಾಗಲೇ ಶೀರ್ಷಿಕೆಯಿಂದಲೇ  ಕೌತುಕ ಮೂಡಿಸಿದ್ದು, ಇದೀಗ ಮೋಷನ್​ ಪೋಸ್ಟರ್ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದೆ.  ಇದರಲ್ಲಿ ಇವರಿಬ್ಬರ ಗೆಟಪ್‌ ತುಂಬಾ ಚೆನ್ನಾಗಿಯೇ ಹೈಲೈಟ್‌ ಆಗಿದ್ದು. ಇದಕ್ಕಾಗಿ ಸಿನಿರಸಿಕರು ಬಹಳ ದಿನದಿಂದ ಕಾಯುತ್ತಿದ್ದರು.

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳಿರುವುದರ ಜೊತೆಗೆ ಇದೊಂದಿಗೆ ರಿವರ್ಸ್​ ಸ್ಕ್ರೀನ್​ಪ್ಲೇ ಆಗಿದೆ ಎಂದು ಸಿನಿತಂಡದವರು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಅನೂಪ್‌ ರೇವಣ ಕಿಡ್ನಾಪರ್​ ರೋಲ್‌ ಪ್ಲೇ ಮಾಡಿದ್ದಾರೆ. ಇನ್ನು ಸಿನಿಮಾದಲ್ಲಿ ನಟಿ ಧನ್ಯಾ ರಾಮ್‌ಕುಮಾರ್‌  ಉದ್ಯಮಿಯ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರಿಂದ  ಅನೂಪ್​ ರೇವಣ್ಣ ಮತ್ತು ಧನ್ಯಾ ರಾಮ್​ಕುಮಾರ್​ ಈ ಸಿನಿಮಾದ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದಾರೆ.

ಇದನ್ನೂ ಓದಿ: Suhana Khan: ಕೃಷಿ ಭೂಮಿ ಖರೀದಿಸಿದ ಕಿಂಗ್‌ ಖಾನ್‌ ಪುತ್ರಿ! ಬೆಲೆ ಎಷ್ಟು ಗೊತ್ತೇ?

ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆಗೆ  ‘ಹೈಡ್​ ಆ್ಯಂಡ್​ ಸೀಕ್​’  ಚಿತ್ರದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್ ಅಂತ ದೊಡ್ಡ ತಾರಾಬಳಗವೇ ಇದೆ.  ಡೈರೆಕ್ಟರ್‌ ಪುನೀತ್​ ನಾಗರಾಜು ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಇದಕ್ಕೆ ವಸಂತ್​ ಎಂ. ರಾವ್​ ಕುಲಕರ್ಣಿ ಹಾಗೂ ಪುನೀತ್​ ನಾಗರಾಜು​ ಇನ್ನರು ಬಂಡವಾಳ ಹೂಡಿದ್ದಾರೆ.  ಈ ಸಿನಿಮಾ ‘ಸುನೇರಿ ಆರ್ಟ್​ ಕ್ರಿಯೇಷನ್ಸ್​’ ಬ್ಯಾನರ್ ಅಡಿಯಲಲಿ ನಿತ್ಮಾಣ ಮಾಡಲಾಗಿದ್ದು,  ಚಿತ್ರದ ದೃಶ್ಯಗಳನ್ನು ಪಿಜೋ ಪಿ. ಜಾನ್ ಸೆರೆಹಿಡಿದಿದ್ದಾರೆ. 

ಮ್ಯೂಸಿಕ್‌ ಕಂಪೋಸರ್ ಸ್ಯಾಂಡಿ ಅಡ್ಡಂಕಿ  ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ  ಸಂಗೀತ ನೀಡಿದ್ದಾರೆ ಮತ್ತು ಮಧು ತುಂಬೆಕೆರೆ ಸಂಕಲನ ಮಾಡಿದ್ದಾರೆ. ಈಗಾಗಲೇ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರ ರಾಜ್ಯದೆಲ್ಲೆಡೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಸಿನಿಮಾ ಇದೇ ವರ್ಷ  ಮಾರ್ಚ್​ 15ರಂದು ರಿಲೀಸ್‌ ಆಗಲಿದೆ. ಇನ್ನೂ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ  ಎಂಬುದಕ್ಕೆ ಸಿನಿಮಾ ರಿಲೀಸ್‌ ಆಗೊತನಕ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News