Karnataka Election 2023: ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ

Karnataka Election 2023 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಇತ್ತ ಮತದಾರರು ಕೂಡ ತಾವು ಮತಚಲಾಯಿಸಲು ಸಿದ್ಧರಾಗಿದ್ದಾರೆ. ಈ ಚುನಾವಣಾ ಬಿಸಿಯ ನಡುವೆ ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಯಾವವು ಎಂದು ನಾವು ನಿಮಗೆ ಹೇಳಲಿದ್ದೇವೆ.  

Written by - Chetana Devarmani | Last Updated : May 5, 2023, 01:46 PM IST
  • ಕರ್ನಾಟಕ ವಿಧಾನಸಭೆ ಚುನಾವಣೆ 2023
  • ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ
  • ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳಿವು
Karnataka Election 2023: ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ title=

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ10 ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ.  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕೆಲವು ಸ್ಟಾರ್‌ ನಟ - ನಟಿಯರು ಸಹ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಕೆಲವರು ಮತದಾನ ಮಾಡಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗಕ್ಕೂ ರಾಜಕೀಯಕ್ಕೂ ಒಂದು ನಂಟಿದೆ. ಕೆಲವು ನಟ - ನಟಿಯರು ರಾಜಕಾರಣಿಗಳೂ ಆಗಿದ್ದಾರೆ. ಚುನಾವಣೆಯ ಬಿಸಿಯ ನಡುವೆ ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಯಾವವು ಇಲ್ಲಿ ತಿಳಿಯೋಣ. 

ಇದನ್ನೂ ಓದಿ: ಈ ಬಾಲಕಿ ಇಂದು ಫೇಮಸ್‌ ನಟಿ.. ಇವ್ರು ಕರ್ನಾಟಕದ ಕುಡ್ಲದವರು! ಯಾರೆಂದು ಹೇಳುವಿರಾ?

ಸ್ಯಾಂಡಲ್‌ವುಡ್‌ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಇವು : 

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮತದಾನ ಕ್ಷೇತ್ರ ಕತ್ರಿಗುಪ್ಪೆ, ಸುದೀಪ್ ಅವರದ್ದು ಪುಟ್ಟೇನಹಳ್ಳಿ, ಕಾಂತಾರದಿಂದ ಮನೆ ಮಾತಾದ ನಟ ರಿಷಬ್ ಶೆಟ್ಟಿ ಅವರ ಮತಕ್ಷೇತ್ರ ಕುಂದಾಪುರ ಆಗಿದೆ. ಇನ್ನೂ ರಕ್ಷಿತ್‌ ಶೆಟ್ಟಿ- ಕುಂದಾಪುರ (ಉಡುಪಿ), ರಾಜ್ ಬಿ.ಶೆಟ್ಟಿ- ಕುಂದಾಪುರ, ಶಿವರಾಜ್ ಕುಮಾರ್- ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್- ರಾಜಾಜಿನಗರ, ಉಪೇಂದ್ರ,- ಕತ್ರಿಗುಪ್ಪೆ ಕ್ಷೇತ್ರದ ಮತದಾರರಾಗಿದ್ದಾರೆ. 

ಧ್ರುವ ಸರ್ಜಾ- ತ್ಯಾಗರಾಜನಗರ (ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್ - ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್- ಸದಾಶಿವನಗರ ಮತ್ತು ರಾಧಿಕ ಪಂಡಿತ್- ದೇವಯ್ಯ ಪಾರ್ಕ್ ಕ್ಷೇತ್ರದಲ್ಲಿ ಮತದಾನ ಮಾಡಲಿದ್ದಾರೆ. ಸುಧಾರಾಣಿ- ಮಲ್ಲೇಶ್ವರಂ, ರಕ್ಷೀತಾ ಪ್ರೇಮ್ - ಚಂದ್ರಲೇಔಟ್, ಪ್ರೇಮ್- ಚಂದ್ರಲೇಔಟ್, ಅಮೂಲ್ಯ- ಆರ್ ಆರ್ ನಗರ, ನೆನಪಿರಲಿ ಪ್ರೇಮ್ -ಆರ್ ಆರ್ ನಗರ, ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ( ಬಿಡದಿ), ರಚಿತಾ ರಾಮ್- ಆರ್ ಆರ್ ನಗರ, ಮೇಘನಾ ಸರ್ಜಾ- ಜೆಪಿ ನಗರ, ತಾರಾ - ಜೆಪಿ ನಗರ, ದ್ವಾರಕೀಶ್- ಬೊಮ್ಮನಹಳ್ಳಿ ಮತ್ತು ಸೃಜನ್‌ ಲೋಕೇಶ್‌ - ಕತ್ರಿಗುಪ್ಪೆಯಲ್ಲಿ ಮತದಾನ ಮಾಡುತ್ತಾರೆ. 

ಇದನ್ನೂ ಓದಿ: NEET Exam ದಿನವೇ ಪ್ರಧಾನಿ ರೋಡ್ ಶೋ, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವೇಳಾಪಟ್ಟಿ ಬದಲಿಸಿಕೊಳ್ಳಲು ಎಚ್‌ಡಿ‌ಕೆ ಆಗ್ರಹ

ಅಜಯ್ ರಾವ್- ರಾಜಾಜಿನಗರ, ಬಿ.ಸರೋಜದೇವಿ- ಮಲ್ಲೇಶ್ವರ, ಹರ್ಷಿಕಾ ಪೂಣಚ್ಚ .- ಕೆ.ಆರ್‌ ಪುರ, ಡಾಲಿ ಧನಂಜಯ-ಅರಸೀಕೆರೆ, ಪೂಜಗಾಂಧಿ- ಕತ್ರಿಗುಪ್ಪೆ, ಯೋಗರಾಜ್ ಭಟ್- ಗಿರಿ ನಗರ, ಅನಂತ್ ನಾಗ್ - ಮಲ್ಲೇಶ್ವರ, ಚಂದನ್ ಶೆಟ್ಟಿ- ನಾಗರಭಾವಿ, ದೊಡ್ಡಣ್ಣ- ಬಿದರುಕಲ್ಲು, ಕಾರುಣ್ಯರಾಮ್- ಆರ್‌ ಆರ್‌ ನಗರ, ಅವಿನಾಶ್ - ಆರ್‌ ಆರ್‌ ನಗರ, ಜಗ್ಗೇಶ್- ಮಲ್ಲೇಶ್ವರ, ಶರಣ್- ಹೊಸಕೆರೆಹಳ್ಳಿ, ದುನಿಯಾ ವಿಜಯ್- ಕತ್ತಿಗುಪ್ಪೆ, ಆಶಿಕಾ - ತುಮಕೂರು ಕ್ಷೇತ್ರದ ಮತದಾರರಾಗಿದ್ದಾರೆ. 

ಸಾಧುಕೋಕಿಲ- ನಾಗರಭಾವಿ, ಚಿಕ್ಕಣ್ಣ- ಮೈಸೂರು, ಅರ್ಜುನ್ ಜನ್ಯ- ಹೆಬ್ಬಾಳ, ಶ್ರೀಮುರುಳಿ- ವಸಂತನಗರ, ವಿಜಯ್ ರಾಘವೇಂದ್ರ- ಯಲಹಂಕ, ಸಪ್ತಮಿಗೌಡ- ಜೆಪಿ ನಗರ, ರಮೇಶ್ ಅರವಿಂದ್- ಪದ್ಮನಾಭ ನಗರ, ಮಾಲಾಶ್ರೀ- ಶಿವಾಜಿನಗರ, 
ವಶಿಷ್ಠ ಸಿಂಹ- ಆರ್‌ ಆರ್‌ ನಗರ, ಹರಿಪ್ರಿಯಾ- ಆರ್‌ ಆರ್ ನಗರ‌, ಶೃತಿ - ಹೊಸಕೆರೆ ಹಳ್ಳಿ, ಲೀಲಾವತಿ- ಸೋಲದೇವನಹಳ್ಳಿ,
ವಿನೋದ್ ರಾಜ್ - ಸೋಲದೇವನ ಹಳ್ಳಿ, ಭಾರತಿ-ಜಯನಗರ, ಅನಿರುದ್ದ್- ಜಯನಗರ, ಅಭಿಷೇಕ್ ಅಂಬರೀಶ್ - ಜೆಪಿನಗರ, ಸುಮಲತಾ- ಜೆಪಿ ನಗರ, ಪ್ರಶಾಂತ್ ನೀಲ್- ವಸಂತನಗರ ಕ್ಷೇತ್ರದ ಮತದಾರರಾಗಿದ್ದಾರೆ. 

ಇದನ್ನೂ ಓದಿ:  "ದೇಶಕ್ಕೆ ಮೆಟ್ರೋ ಯೋಜನೆ ತಂದವರು ದೇವೆಗೌಡ್ರು, ರಾಜ್ಯಕ್ಕೆ ಮೆಟ್ರೋ ತಂದದ್ದು ನಾನು" : ಹೆಚ್‌ಡಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News