Esha Deol divorce: ಹೇಮಾ ಮಾಲಿನಿ ಪುತ್ರಿ ದಾಂಪತ್ಯ ಅಂತ್ಯ, ಇಶಾ ಡಿಯೋಲ್-ಭರತ್ ತಖ್ತಾನಿ ಡಿವೋರ್ಸ್!‌

Esha Deol divorce With Bharat Takhtani:  ನಟಿ ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ ಮದುವೆಯಾಗಿ 12 ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ. 

Written by - Chetana Devarmani | Last Updated : Feb 7, 2024, 11:40 AM IST
  • ʻಧೂಮ್‌ʼ ನಟಿ ಇಶಾ ಡಿಯೋಲ್
  • ಇಶಾ ಡಿಯೋಲ್ - ಭರತ್ ತಖ್ತಾನಿ ವಿಚ್ಛೇದನ
  • ಮದುವೆಯಾಗಿ 12 ವರ್ಷಗಳ ನಂತರ ಡಿವೋರ್ಸ್‌
Esha Deol divorce: ಹೇಮಾ ಮಾಲಿನಿ ಪುತ್ರಿ ದಾಂಪತ್ಯ ಅಂತ್ಯ, ಇಶಾ ಡಿಯೋಲ್-ಭರತ್ ತಖ್ತಾನಿ ಡಿವೋರ್ಸ್!‌  title=

Hema Malini daughter Esha Deol Divorce: ʻಧೂಮ್‌ʼ ನಟಿ ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ ಮದುವೆಯಾಗಿ 12 ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ವಿಚಾರವನ್ನ ಸ್ವತಃ ಇಶಾ ಅವರೇ ಖಚಿತಪಡಿಸಿದ್ದಾರೆ. ಇಶಾ ಮತ್ತು ಭರತ್ ಬೇರೆಯಾಗುತ್ತಿರುವ ವಿಷಯವನ್ನು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಸಂದರ್ಶನದಲ್ಲಿ ಇಶಾ ಮತ್ತು ಭರತ್, ನಾವು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿ ಈ ಬದಲಾವಣೆಯು ನಮ್ಮಿಬ್ಬರ ಮಕ್ಕಳಿಗೂ ಒಳ್ಳೆಯದು ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಒಟಿಟಿಗೆ ಲಗ್ಗೆಯಿಟ್ಟ ದಿ ಕೇರಳ ಸ್ಟೋರಿ.. ಎಲ್ಲಿ ಯಾವಾಗ ಸ್ಟ್ರೀಮಿಂಗ್‌? 

ಇಶಾ ಡಿಯೋಲ್ ಬಾಲಿವುಡ್‌ನ ಖ್ಯಾತ ನಟಿ ಹೇಮಾ ಮಾಲಿನಿ ಮತ್ತು ಸೂಪರ್‌ಸ್ಟಾರ್ ಧರ್ಮೇಂದ್ರ ಅವರ ಪುತ್ರಿ. ಅವರು 2012 ರಲ್ಲಿ ಉದ್ಯಮಿ ಭರತ್ ತಖ್ತಾನಿ ಅವರೊಂದಿಗೆ ವಿವಾಹವಾದರು. ಮದುವೆಯಾದ ಐದು ವರ್ಷಗಳ ನಂತರ ಇಶಾ ಮತ್ತು ಭರತ್ ಪೋಷಕರಾದರು. ಈಗ 2024 ರಲ್ಲಿ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ.

ಇಶಾ ಮತ್ತು ಭರತ್ ದೀರ್ಘಕಾಲ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹೇಮಾ ಮಾಲಿನಿ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಇಶಾ ಕಾಣಿಸಿಕೊಂಡರು, ಆದರೆ ಅವರ ಅಳಿಯ ಭರತ್ ಕಾಣಿಸಲಿಲ್ಲ.

ಇದನ್ನೂ ಓದಿ: ಹುಕ್ಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ನಟಿ ಇಂದು ಕೋಟಿ ಕೋಟಿ ಒಡತಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News