ಲೇಡಿ ಡೈರೆಕ್ಟರ್‌ ವ್ಯೂನಲ್ಲಿ ಟಾಕ್ಸಿಕ್‌ ಚಿತ್ರ! ಗೀತು ಹೇಳಿದ್ದೇನು?

Toxic Movie: ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಡೈರೆಕ್ಟರ್‌ ಗೀತು ಮೋಹನ್‌ದಾಸ್‌ ಕಾಂಬೂದ ಟಾಕ್ಸಿಕ್‌ ಚಿತ್ರದ ಪೋಸ್ಟರ್‌ ಹಾಗೂ ಟೀಸರ್‌ ಈಗಾಗಲೇ ರಿಲೀಸ್‌ ಆಗಿದ್ದು, ಇದು ಮಹಿಳಾ ದೃಷ್ಟಿಕೋನದ ಚಿತ್ರ ಅಂತ ಹೇಳಲಾಗಿದೆ. ಹಾಗಾದ್ರೆ ಗೀತು ಮೋಹನ್‌ದಾಸ್‌ ಹೇಳಿದ್ದಾದರೂ ಏನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Dec 18, 2023, 12:15 PM IST
  • ಟಾಕ್ಸಿಕ್‌ ಚಿತ್ರದ ಬಗ್ಗೆ ಕ್ಯೂರಿಯೋಸಿಟಿ ಹುಟ್ಟಿಕೊಂಡು, ಸದ್ಯ ನೂರಂಟೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲಿವೆ.
  • ಟಾಕ್ಸಿಕ್ ಸಿನಿಮಾ ಕೂಡ ಒಂದು ಗ್ಯಾಂಗ್‌ಸ್ಟರ್ ಚಿತ್ರವೇ ಆಗಿದ್ದು, ವಿಶೇಷವಾಗಿ ಇದು ರಾಕಿ ಭಾಯ್ ದೃಷ್ಟಿಕೋನದ ಸಿನಿಮಾ ಅಲ್ವೆ ಅಲ್ಲ.
  • ಟಾಕ್ಸಿಕ್ ಚಿತ್ರದಲ್ಲಿ ಡ್ರಗ್ ಮಾಫಿಯಾ ಕಥೆಯಾಗಿದ್ದು, ಇಲ್ಲಿ ಬರೋ ಗ್ಯಾಂಗ್‌ಸ್ಟರ್ ಕಥೆಗೆ ಲೇಡಿ ಡೈರೆಕ್ಟರ್ ಟಚ್ ಇರುತ್ತದೆ.
ಲೇಡಿ ಡೈರೆಕ್ಟರ್‌ ವ್ಯೂನಲ್ಲಿ ಟಾಕ್ಸಿಕ್‌ ಚಿತ್ರ! ಗೀತು ಹೇಳಿದ್ದೇನು? title=

Geethu Mohandas Shares About Toxic Movie: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ನ ಮುಂಬರುವ ಟಾಕ್ಸಿಕ್‌ ಸಿನಿಮಾ, ಡೈರೆಕ್ಟರ್‌ ಗೀತು ಮೋಹನ್‌ದಾಸದ ನಿರ್ದೇಶನ ಮಾಡ್ತಾಯಿದ್ದು, ಈಗಾಗಲೇ ಚಿತ್ರದ ಪೋಸ್ಟರ್‌ ಹಾಗೂ ಟಿಸರ್‌ ರಿಲೀಸ್‌ ಆಗಿದೆ. ಈ ಸಿನಿಮಾ ಬಗ್ಗೆ ಕ್ಯೂರಿಯೋಸಿಟಿ ಹುಟ್ಟಿಕೊಂಡು,  ಹಲವಾರು ಕಲ್ಪನೆಗಳೂ ಮೂಡಿ ಚಿತ್ರ ಆಗಿರಬಹುದು, ಈ ರೀತಿ ಕಾಣಿಸಬಹುದು, ಹೊಸ ರೀತಿಯ ಕಥೆ ಇರಬಹುದು ಎಂದು ಹೀಗೆ ನೂರಂಟೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲಿವೆ. ಸದ್ಯ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಎಲ್ಲ ಕುತೂಹಲಕ್ಕೆ ಒಂದಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಹಂಚಿಕೊಂಡಿದ್ದಾರೆ

ನಟ ಯಶ್, ಮಹಿಳಾ ನಿರ್ದೇಶಕಿಯರ ದೃಷ್ಟಿಕೋನದಲ್ಲಿ ಒಬ್ಬ ಗ್ಯಾಂಗ್‌ಸ್ಟರ್ ಹೇಗೆ ಕಾಣಿಸುತ್ತಾನೆ, ಮ್ಯಾನ್ಲಿ ಲುಕ್, ಸ್ಟೈಲ್ ಗ್ಯಾರಂಟಿ ಅಂತು ಇರುತ್ತದೆ. ಮ್ಯಾನರಿಸಂ ಕಲ್ಪನೆ ಮೀರಿ ಇರಬಹುದು, ವೇರಿ ಸ್ಟ್ರಾಂಗ್ ಅನಿಸೋ ಒಬ್ಬ ಗ್ಯಾಂಗ್‌ಸ್ಟರ್ ಆಗಿರಬಹುದು. ಇದೆಲ್ಲವನ್ನೂ ಮೀರಿ ಒಬ್ಬ ನಿರ್ದೇಶಕಿ ಗ್ಯಾಂಗ್‌ಸ್ಟರ್ ಸಿನಿಮಾ ಮಾಡಬಹುದು. ಲೇಡಿ ಡೈರೆಕ್ಟರ್ ಕಲ್ಪನೆಗಳು ಮತ್ತು ದೃಷ್ಟಿಕೋನಗಳು ನಿರ್ದೇಶಕರಿಗಿಂತಲೂ ವಿಭಿನ್ನವಾಗಿಯೇ ಕಾಣಿಸಬಹುದಂಬ ಈ ಒಂದು ನಂಬಿಕೆ ಮೇಲೇ ಗೀತು ಮೋಹನ್‌ದಾಸ್ ಹೇಳಿದ ಕಥೆಯನ್ನ ಒಪ್ಪಿ, ದುಡ್ಡುಹಾಕಲು ಮುಂದಾಗಿದ್ದಾರೆ ಅಂತಲೂ ಹೇಳಬಹುದು.

ಇದನ್ನೂ ಓದಿ: ಮತ್ತೆ ಮದುವೆಯಾಗ್ತಾರಾ ಸ್ಯಾಮ್? ನೆಟ್ಟಿಗರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಮಂತಾ!

ಟಾಕ್ಸಿಕ್ ಸಿನಿಮಾ ಕೂಡ ಒಂದು ಗ್ಯಾಂಗ್‌ಸ್ಟರ್ ಚಿತ್ರವೇ ಆಗಿದ್ದು, ವಿಶೇಷವಾಗಿ ಇದು ರಾಕಿ ಭಾಯ್ ದೃಷ್ಟಿಕೋನದ ಸಿನಿಮಾ ಅಲ್ವೆ ಅಲ್ಲ. ಒಬ್ಬ ಮಹಿಳಾ ನಿರ್ದೇಶಕಿ ಗೀತು ಮೋಹನ್‌ದಾಸ್ ದೃಷ್ಟಿಕೋನದ ಚಿತ್ರವೇ ಆಗಿದೆಂದು, ಸ್ವತಃ ನಿರ್ದೇಶಕಿ ಗೀತು ಮೋಹನ್‌ದಾಸ್ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡೋವಾಗಿ ಲೇಡಿ ಡೈರೆಕ್ಟರ್‌ ತುಂಬಾ ಹೆಮ್ಮಯಿಂದಲೇ ಈ ವಿಷಯ ಹಂಚಿಕೊಂಡು, "ಟಾಕ್ಸಿಕ್ ಒಂದು ಗ್ಯಾಂಗ್‌ಸ್ಟರ್ ಚಿತ್ರವೇ ಆಗಿದೆ. ವಿಶೇಷವಾಗಿ ಇದು “Female Gaze” ಮಹಿಳಾ ದೃಷ್ಟಿಕೋನದ ಚಿತ್ರ" ಅಂತಲೇ  ಹೇಳಿಕೊಂಡಿದ್ದಾರೆ.

ಟಾಕ್ಸಿಕ್ ಚಿತ್ರದಲ್ಲಿ ಡ್ರಗ್ ಮಾಫಿಯಾ ಕಥೆಯಾಗಿದ್ದು, ಇಲ್ಲಿ ಬರೋ ಗ್ಯಾಂಗ್‌ಸ್ಟರ್ ಕಥೆಗೆ ಲೇಡಿ ಡೈರೆಕ್ಟರ್ ಟಚ್ ಇರುತ್ತದೆ. ಆದರೆ ಇದು ಗ್ಲೋಬಲ್ ಡ್ರಗ್ ಮಾಫಿಯಾ ಸಿನಿಮಾವಾಗಿದ್ದು, ಇದನ್ನ ಗೋವಾ ಮತ್ತು ಶ್ರೀಲಂಕಾದಲ್ಲಿ ಚಿತ್ರೀಕರಿಸೋಕೆ ಪ್ಲಾನ್ ಆಗಿದೆ. ಸದ್ಯ ಲಂಡನ್‌ನಲ್ಲೂ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇದರಲ್ಲಿ ಚಿತ್ರದ ನಾಯಕಿ ಶೃತಿ ಹಾಸನ್ ಎಂಬುದು ತಿಳಿದು ಬಂದಿದೆ. ಹಾಗೇಯೇ ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಈ ಚಿತ್ರದಲ್ಲಿ ಇರ್ತಾರೆ ಅನ್ನುವ ಸುದ್ದಿ ಸಹ ಹರಿದಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News