ಖ್ಯಾತ ನಟಿಯ ಕಾರು ಭೀಕರ ಅಪಘಾತ.. ವೃದ್ಧ ದಂಪತಿ ಬಲಿ! ಆಕ್ಸಿಡೆಂಟ್‌ ವಿಡಿಯೋ ವೈರಲ್‌

Bollywood Actress Car Accident: ಅಪಘಾತದಲ್ಲಿ ಫೆರಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೃದ್ಧ ದಂಪತಿಗಳು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Written by - Chetana Devarmani | Last Updated : Oct 4, 2023, 09:51 AM IST
  • ಬಾಲಿವುಡ್‌ ನಟಿಯ ಕಾರು ಅಪಘಾತ
  • ಇಬ್ಬರು ವೃದ್ಧ ದಂಪತಿಗಳು ಸಾವು
  • ಸ್ಥಳಕ್ಕೆ ಆಗಮಿಸಿದ ಪೊಲೀಸರು
ಖ್ಯಾತ ನಟಿಯ ಕಾರು ಭೀಕರ ಅಪಘಾತ.. ವೃದ್ಧ ದಂಪತಿ ಬಲಿ! ಆಕ್ಸಿಡೆಂಟ್‌ ವಿಡಿಯೋ ವೈರಲ್‌   title=
Gayatri Joshi

Gayatri Joshi Car Accident: ಶಾರುಖ್ ಖಾನ್ ಸಿನಿಮಾದ ನಟಿ ಗಾಯತ್ರಿ ಜೋಶಿ ಕಾರು ಅಪಘಾತಕ್ಕೀಡಾಗಿದೆ. ತನ್ನ ಪತಿ ವಿಕಾಸ್ ಒಬೆರಾಯ್ ಜೊತೆ ಲಂಬೋರ್ಗಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಫೆರಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೃದ್ಧ ದಂಪತಿಗಳು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಗಾಯತ್ರಿ ಮತ್ತು ಅವರ ಪತಿ ಐಷಾರಾಮಿ ಕಾರುಗಳೊಂದಿಗೆ ರೇಸಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. 

ವರದಿಗಳ ಪ್ರಕಾರ, ಇಟಲಿಯ ಸಾರ್ಡಿನಿಯಾದಲ್ಲಿ ಈ ಅಪಘಾತ ಸಂಭವಿಸಿದೆ. ಲಂಬೋರ್ಗಿನಿ ಕಾರಿನಲ್ಲಿ ಮಿನಿ ಟ್ರಕ್ ಒಂದನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದು, ಹಿಂಬದಿಯಿಂದ ಬಂದ ಫೆರಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿನಿ ಟ್ರಕ್ ಪಲ್ಟಿಯಾಗಿ ಫೆರಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ : ಪ್ರಭಾಸ್ ನಟನೆಯ ಸಲಾರ್ ಈ ಕನ್ನಡ ಚಿತ್ರದ ರಿಮೇಕ್? ಆಘಾತಕಾರಿ ಮಾಹಿತಿ ರಿವೀಲ್‌!!

ಮೃತರನ್ನು ಸ್ವಿಟ್ಜರ್ಲೆಂಡ್ ಮೂಲದ 63 ವರ್ಷದ ಮೆಲಿಸ್ಸಾ ಕ್ರೌಟ್ಲಿ ಮತ್ತು 67 ವರ್ಷದ ಮಾರ್ಕಸ್ ಕ್ರೌಟ್ಲಿ ಎಂದು ಗುರುತಿಸಲಾಗಿದೆ. ಗಾಯತ್ರಿ ಮತ್ತು ಪತಿ ವಿಕಾಸ್ ಇಟಲಿಯಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾರಿನ ಡೆಸ್ಕ್ ಕ್ಯಾಮ್‌ನಿಂದ ರೆಕಾರ್ಡ್ ಮಾಡಲಾಗಿದೆ. ಹಲವು ಐಷಾರಾಮಿ ಕಾರುಗಳು ರೇಸ್ ಮಾಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ವೇಳೆ ನಟಿಯ ಕಾರು ಮಿನಿ ಟ್ರಕ್ ಅನ್ನು ಹಿಂದಿಕ್ಕಲು ಯತ್ನಿಸಿದಾಗ ಹಿಂದೆ ಬರುತ್ತಿದ್ದ ಫೆರಾರಿ ಕಾರು ಡಿಕ್ಕಿ ಹೊಡೆದಿದೆ.

ಗಾಯತ್ರಿ ಅವರು ಸ್ವದೇಶ್ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. 2004 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅವರು ಶಾರುಖ್ ಖಾನ್ ಅವರೊಂದಿಗೆ ಕಾಣಿಸಿಕೊಂಡರು. ಆದರೆ ಈ ಚಿತ್ರದ ನಂತರ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ಒಬೆರಾಯ್ ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾಗಿದ್ದಾರೆ.

ಇದನ್ನೂ ಓದಿ : ಮಾಸ್‌ ಲುಕ್‌ ಬಳಿಕ ಪೌರಾಣಿಕ ಪಾತ್ರದಲ್ಲಿ ಯಶ್‌.! ಈ ದಿನದಿಂದ ಶೂಟಿಂಗ್‌ ಶುರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News