Game Changer: ರಾಮ್ ಚರಣ್ ನ್ಯೂ ಸಿನಿಮಾದ ಬಿಗ್ ಬಜೆಟ್‌ ಸಾಂಗ್‌ ಲೀಕ್‌!!

Game Changer Song Leaked: ನಟ ರಾಮ್ ಚರಣ್ ತಮ್ಮ ಮುಂಬರುವ ಗೇಮ್ ಚೇಂಜರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸದ್ಯ ಈ ಚಿತ್ರದ ಹಾಡೊಂದು ಲೀಕ್ ಆಗಿದ್ದು, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.   

Written by - Savita M B | Last Updated : Sep 16, 2023, 04:59 PM IST
  • ರಾಮ್‌ ಚರಣ್‌ ತಮ್ಮ ಹೊಸ ಚಿತ್ರ ಗೇಮ್‌ ಚೇಂಜರ್‌ನಲ್ಲಿ ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
  • ಸದ್ಯ ನಟ ಈ ಚಿತ್ರದ ಚಿತ್ರೀಕರಣದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.
  • ಇದೀಗ ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಕಂಟಕವೊಂದು ಎದುರಾಗಿದೆ.
Game Changer: ರಾಮ್ ಚರಣ್ ನ್ಯೂ ಸಿನಿಮಾದ ಬಿಗ್ ಬಜೆಟ್‌ ಸಾಂಗ್‌ ಲೀಕ್‌!!   title=

Game Changer: ರಾಮ್‌ ಚರಣ್‌ ತಮ್ಮ ಹೊಸ ಚಿತ್ರ ಗೇಮ್‌ ಚೇಂಜರ್‌ನಲ್ಲಿ ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟ ಈ ಚಿತ್ರದ ಚಿತ್ರೀಕರಣದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇದೀಗ ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಏನದು ಅಂತೀರಾ ಈ ಸ್ಟೋರಿ ಓದಿ..

ರಾಮ್ ಚರಣ್ ತಮ್ಮ ಹೊಸ ಚಿತ್ರ ಗೇಮ್ ಚೇಂಜರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅವರು ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಬಿಗ್‌ ಬಜೆಟ್‌ ಹಾಡೋಂದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ ಎನ್ನಲಾಗುತ್ತಿದೆ. 

ಹೌದು ವರದಿಗಳ ಪ್ರಕಾರ ಗೇಮ್‌ ಚೇಂಜರ್‌ ಸಿನಿಮಾದ ಬರೋಬ್ಬರಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹಾಡು ಲೀಕ್‌ ಆಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಚೆನ್ನೈನಲ್ಲಿ ಶೂಟಿಂಗ್‌ ನಡೆಯುತ್ತಿರುವಾಗಲೇ ಆ ಹಾಡು ಲೀಕ್‌ ಸೋರಿಯಾಗಿರಬಹುದು ಎನ್ನಲಾಗುತ್ತಿದೆ. 

ಇದನ್ನೂ ಓದಿ-ಪಿಂಕ್‌ ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ ಹೊಸ ಲುಕ್‌

ಆದರೆ ಚಿತ್ರ ತಂಡದ ಪ್ರಕಾರ ಲೀಕ್‌ ಆಗಿರುವ ಈ ಹಾಡು ಅಧಿಕೃತವಾಗಿದ್ದ ಆವೃತ್ತಿಯಲ್ಲ, ಆದರೆ ಹಾಡಿನ ಮೂಲ ಆವೃತ್ತಿಯಾಗಿದೆ. ಇನ್ನು ಈ ಗೇಮ್ ಚೇಂಜರ್ ಸಿನಿಮಾವನ್ನು ಎಸ್ ಶಂಕರ್ ನಿರ್ದೇಶಿಸುತ್ತಿದ್ದು, ಇದು ತೆಲುಗು ಸಿನಿರಂಗದದಲ್ಲಿ ಅವರ ಚೊಚ್ಚಲ ಸಿನಿಮಾ. 

ಚಿತ್ರದ ತಾರಾಗಣದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್ ಸುನಿಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ಇದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ದಿಲ್ ರಾಜು ಮತ್ತು ಸಿರೀಶ್ ನಿರ್ಮಾಪಕರು. ತಮನ್ ಎಸ್ ಚಿತ್ರಕ್ಕೆ ಸಂಗೀತ ನಿರ್ವಹಿಸುತ್ತಿದ್ದಾರೆ.

ಕೆಲವು ಆರಂಭಿಕ ವರದಿಗಳ ಪ್ರಕಾರ, ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಶಂಕರ್ ಚಿತ್ರದ ಹಾಡುಗಳಿಗೆ 90 ಕೋಟಿ ಖರ್ಚು ಮಾಡಿ ಜಾನಿ ಮಾಸ್ಟರ್ ಮತ್ತು ಪ್ರಭುದೇವ ಅವರಂತಹ ನೃತ್ಯ ನಿರ್ದೇಶಕರನ್ನು ಕರೆತಂದಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-ತೆಲಂಗಾಣ ರಾಜಕೀಯಕ್ಕೆ ನಟಿ ಸಮಂತಾ ಎಂಟ್ರಿ! ಆ ಪಕ್ಷದಿಂದ ಸ್ಪರ್ಧೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News