ಪುಷ್ಪಾ, ರಣವೀರ್ ಸಿಂಗ್ ಗೆ 'ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ'.. ಸಂಪೂರ್ಣ ಪಟ್ಟಿ ಇಲ್ಲಿದೆ

DPIFF Awards: ಫೆಬ್ರವರಿ 20 ರಂದು ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2022 ಪ್ರಶಸ್ತಿಯನ್ನು ನೀಡಲಾಗಿದೆ. 

Written by - Chetana Devarmani | Last Updated : Feb 21, 2022, 11:31 AM IST
  • ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2022
  • ಫೆಬ್ರವರಿ 20 ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
  • 'ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ' ಸಂಪೂರ್ಣ ಪಟ್ಟಿ ಇಲ್ಲಿದೆ
ಪುಷ್ಪಾ, ರಣವೀರ್ ಸಿಂಗ್ ಗೆ 'ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ'.. ಸಂಪೂರ್ಣ ಪಟ್ಟಿ ಇಲ್ಲಿದೆ title=
ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ನವದೆಹಲಿ: ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2022 ಪ್ರಶಸ್ತಿಯನ್ನು ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಮತ್ತು ರಣವೀರ್ ಸಿಂಗ್ ಗೆದ್ದಿದ್ದಾರೆ. 

ಫೆಬ್ರವರಿ 20 ರಂದು ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2022  (The Dadasaheb Phalke International Film Festival Awards 2022) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. 

ಇದನ್ನೂ ಓದಿ: Ashwini Puneeth Rajkumar : ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗೆ ಮತ್ತೊಂದು ಆಘಾತ

ಚಿತ್ರೋತ್ಸವದಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್, ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೇರ್ ಷಾ ಮತ್ತು ವಿಕ್ಕಿ ಕೌಶಲ್ ಅವರ ಸರ್ದಾರ್ ಉದಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ನಿರ್ದೇಶಕ ಕಬೀರ್ ಖಾನ್ ಅವರ '83' ಚಿತ್ರದಲ್ಲಿನ ಅಸಾಧಾರಣ ಅಭಿನಯಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅವರು 1983 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ವಿಶ್ವ ಕಪ್ ಗೆಲುವನ್ನು ಆಧರಿಸಿದ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದರು.

ಮಿಮಿ (Mimi) ಚಿತ್ರದಲ್ಲಿನ ಅಭಿನಯಕ್ಕಾಗಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ತೆಲುಗು ಚಿತ್ರ, ಪುಷ್ಪ: ದಿ ರೈಸ್ ಅನ್ನು ವರ್ಷದ ಚಲನಚಿತ್ರವೆಂದು ಘೋಷಿಸಲಾಯಿತು.

'ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ' ಸಂಪೂರ್ಣ ಪಟ್ಟಿ ಇಲ್ಲಿದೆ:

  • ವರ್ಷದ ಸಿನಿಮಾ: ಪುಷ್ಪ
  • ಅತ್ಯುತ್ತಮ ಸಿನಿಮಾ: ಶೇರ್​ಷಾ
  • ಅತ್ಯುತ್ತಮ ನಟ: ರಣವೀರ್​ ಸಿಂಗ್​
  • ಅತ್ಯುತ್ತಮ ನಟಿ ಕೃತಿ ಸನೋನ್​
  • ಅತ್ಯುತ್ತಮ ನಿರ್ದೇಶಕ: ಕೆನ್​ ಘೋಷ್​
  • ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್​
  • ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್​
  • ಅತ್ಯುತ್ತಮ ಹೊಸ ನಟ: ಅಹಾನ್​ ಶೆಟ್ಟಿ
  • ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್​ ರೌಂಡ್​
  • ಅತ್ಯುತ್ತಮ ವೆಬ್​ ಸಿರೀಸ್​: ಕ್ಯಾಂಡಿ
  • ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟ: ಮನೋಜ್​ ಭಾಜಪೇಯಿ​
  • ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್​
  • ಅತ್ಯುತ್ತಮ ಪೋಷಕ ನಟ: ಸತೀಶ್​ ಕೌಶಿಕ್​
  • ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ
  • ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ
  • ಅತ್ಯುತ್ತಮ ಕಿರುಚಿತ್ರ: ಪೌಲಿ
  • ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್​ ಮಿಶ್ರಾ
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್​
  • ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ
  • ಅತ್ಯುತ್ತಮ ಖಳ ನಟ: ಆಯುಷ್​ ಶರ್ಮಾ
  • ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್​ ಉದ್ಧಮ್​
  • ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್​ ಮಲ್ಹೋತ್ರ
  • ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ
  • ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ
  • ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್​ ಶೇಖ್​
  • ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ
  • ಕಿರುತೆರೆಯ ಭರವಸೆಯ ನಟ: ಧೀರಜ್​ ಧೂಪರ್​
  • ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ

ಇದನ್ನೂ ಓದಿ: Govinde Gowda - Divyashree :'ಅಪ್ಪು'ಗೆ ವಿಶೇಷವಾಗಿ ಗೌರವ ಸಲ್ಲಿಸಿದ 'ಕಾಮಿಡಿ ಕಿಲಾಡಿಗಳು' ಖ್ಯಾತಿ ದಂಪತಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News