ಪ್ರಭಾಸ್ ಅಭಿನಯದ ಸಾಹೋ ತಮ್ಮ ಚಿತ್ರದ ನಕಲಿ ಎಂದ ಫ್ರೆಂಚ್ ನಿರ್ದೇಶಕ..!

ರಾಜಮೌಳಿ ಅವರ 'ಬಾಹುಬಲಿ' ಚಿತ್ರದ ಮೂಲಕ ಭಾರತೀಯ ಸಿನಿಮಾದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ರಭಾಸ್ ಈಗ ಸಾಹೋ ಮೂಲಕ ಆಕ್ಷನ್ ಹವಾ ಸೃಷ್ಟಿಸಿದ್ದಾರೆ.

Last Updated : Sep 3, 2019, 04:22 PM IST
ಪ್ರಭಾಸ್ ಅಭಿನಯದ ಸಾಹೋ ತಮ್ಮ ಚಿತ್ರದ ನಕಲಿ ಎಂದ ಫ್ರೆಂಚ್ ನಿರ್ದೇಶಕ..!  title=

ನವದೆಹಲಿ: ರಾಜಮೌಳಿ ಅವರ 'ಬಾಹುಬಲಿ' ಚಿತ್ರದ ಮೂಲಕ ಭಾರತೀಯ ಸಿನಿಮಾದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ರಭಾಸ್ ಈಗ ಸಾಹೋ ಮೂಲಕ ಆಕ್ಷನ್ ಹವಾ ಸೃಷ್ಟಿಸಿದ್ದಾರೆ.

ಈ ಚಿತ್ರವು ಆಗಸ್ಟ್ 30, 2019 ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿತು. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಕೊಳ್ಳೆ ಹೊಡೆಯುತ್ತಿದ್ದರೂ ಸಹಿತ ಚಲನಚಿತ್ರ ವಿಮರ್ಶೆಗಳು ಮಾತ್ರ ಅಷ್ಟಕಷ್ಟೇ ಎಂದು ವಿಶ್ಲೇಷಿಸಿವೆ.

ಆದರೆ ಈಗ ಈ ಚಿತ್ರ ಹೊಸ ವಿವಾದಕ್ಕೆ ಗುರಿಯಾಗಿದೆ. ಜೆರೋಮ್ ಸಾಲೆ ಎಂಬ ಫ್ರೆಂಚ್ ಚಲನಚಿತ್ರ ನಿರ್ಮಾಪಕ ತನ್ನ 'ಲಾರ್ಗೊ ವಿಂಚ್' ಚಿತ್ರದಿಂದ ಈ ಚಲನಚಿತ್ರವನ್ನು ನಕಲಿಸಲಾಗಿದೆ ಎಂದು ಆರೋಪಿಸಿದ ನಂತರ ಈಗ ವಿವಾದಕ್ಕೆ ಎಳೆಯಲಾಗಿದೆ. ಈ ಕುರಿತಾಗಿ ಅವರು ತಮ್ಮ ಟ್ವೀಟ್ ನಲ್ಲಿ ಆರೋಪ ಮಾಡಿದ್ದಾರೆ. ಆದರೆ ಇದುವರೆಗೆ ಸಾಹೋ ಚಿತ್ರ ತಂಡ ಮಾತ್ರ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.

'ಲಾರ್ಗೊ ವಿಂಚ್' 2008 ರ ಫ್ರೆಂಚ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದು ಬೆಲ್ಜಿಯಂನ ಕಾಮಿಕ್ ಪುಸ್ತಕ ಲಾರ್ಗೊ ವಿಂಚ್ ಅನ್ನು ಆಧರಿಸಿದೆ. ಇದರಲ್ಲಿ ಟೋಮರ್ ಸಿಸ್ಲೆ ಮತ್ತು ಕ್ರಿಸ್ಟಿನ್ ಸ್ಕಾಟ್ ಥಾಮಸ್ ಪ್ರಮುಖ ಪಾತ್ರಗಳಲ್ಲಿದ್ದರು.'ಸಾಹೋ' ಚಿತ್ರವನ್ನು ಸುಜೀತ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ವಿ ವಂಶಿ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ.
 
 

Trending News