ಈ ಕೆಲಸ ಮಾಡಿ ಪೇಚಿಗೆ ಸಿಲುಕಿದ ರವೀನಾ, ಫರಾಹ್ ಮತ್ತು ಭಾರತಿ ಸಿಂಗ್

ಷೋವೊಂದರ ವೇಳೆ ಫರಾಹ್ ಖಾನ್ ಭಾರತಿ ಸಿಂಗ್ ಹಾಗೂ ರವೀನಾ ಟಂಡನ್ ಆಂಗ್ಲಭಾಷೆಯಲ್ಲಿ ಶಬ್ದವೊಂದರ ಸ್ಪೆಲ್ಲಿಂಗ್ ಬರೆಯಲು ಸೂಚಿಸಿದ್ದಾರೆ. ಈ ಶಬ್ದ ಪವಿತ್ರ ಗ್ರಂಥವೊಂದರ ಶಬ್ದವಾಗಿತ್ತು. ಶಬ್ದದ ಅರ್ಥ ತಿಳಿಯದ ಭಾರತಿ ಸಿಂಗ್, ಕಾಮಿಡಿ ಮಾಡುವ ಉದ್ದೇಶದಿಂದ ಆ ಶಬ್ದದ ವಿಪರೀತ ಅರ್ಥವನ್ನೇ ಹೇಳಿದ್ದಾರೆ. ಇದನ್ನು ತಮಾಷೆ ಎಂದು ತಿಳಿದ ರವೀನಾ ಹಾಗೂ ಫರಾಹ್ ಖಾನ್ ಅವರೂ ಭಾರತಿ ಜೊತೆ ತಮಾಷೆ ಮಾಡಿದ್ದಾರೆ. 

Written by - Nitin Tabib | Last Updated : Dec 26, 2019, 01:35 PM IST
ಈ ಕೆಲಸ ಮಾಡಿ ಪೇಚಿಗೆ ಸಿಲುಕಿದ ರವೀನಾ, ಫರಾಹ್ ಮತ್ತು ಭಾರತಿ ಸಿಂಗ್ title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್, ಭಾರತಿ ಸಿಂಗ್ ಹಾಗೂ ಫರಾಹ್ ಖಾನ್ ನಡೆಸಿರುವ ಒಂದು ಕೃತ್ಯದಿಂದ ಪಂಜಾಬ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪ ಇವರ ಮೇಲಿದೆ. ಇದೆಲ್ಲ ಆರಂಭವಾಗಿದ್ದು ಕಾರ್ಯಕ್ರಮದಿಂದ ಹೊರಹೊಮ್ಮಿದ ವಿಡಿಯೋವೊಂದರಿಂದ ಎನ್ನಲಾಗಿದೆ. ಈ ವಿಡಿಯೋವನ್ನು ತನಿಖೆಗೆ ಒಳಪಡಿಸಲಾಗಿದ್ದು ಬಳಿಕ ಈ ಮೂವರ ಮೇಲೂ FIR ದಾಖಲಿಸಲಾಗಿದೆ.

 
 
 
 

 
 
 
 
 
 
 
 
 

Bahut accha ho rha tha 😂harsh be sab kharab kar Diya yaar #blessed #love#holidays @haarshlimbachiyaa30 @tiktok @indiatiktok ❤️❤️❤️❤️❤️

A post shared by Bharti Singh (@bharti.laughterqueen) on

ಪ್ರಕರಣ ದಾಖಲು
ಮಾಧ್ಯಮಗಳ ವರದಿ ಪ್ರಕಾರ ಅಮೃತಸರ್ ಜಿಲ್ಲೆಯ ಅಜನಾಲಾ ಪೊಲೀಸರು ಬುಧವಾರ ತಡರಾತ್ರಿ ಈ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಕ್ರಮವೊಂದರ ವೇಳೆ ಈ ಮೂವರು ನಡೆಸಿರುವ ಸಂಭಾಷಣೆ ಒಂದು ವಿಶೇಷ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತವೆ ಎನ್ನಲಾಗಿದೆ. ಈ ಷೋ ಕ್ರಿಸ್ಮಸ್ ದಿನ ಪ್ರಸಾರಿತಗೊಂಡಿದೆ. IPCಯ 295-A ಅಡಿ ಈ ಪ್ರಕರಣ ದಾಖಲಿಸಲಾಗಿದೆ.

ನಡೆದಿದ್ದಾದರೂ ಏನು?
ಷೋವೊಂದರ ವೇಳೆ ಫರಾಹ್ ಖಾನ್ ಭಾರತಿ ಸಿಂಗ್ ಹಾಗೂ ರವೀನಾ ಟಂಡನ್ ಆಂಗ್ಲಭಾಷೆಯಲ್ಲಿ ಶಬ್ದವೊಂದರ ಸ್ಪೆಲ್ಲಿಂಗ್ ಬರೆಯಲು ಸೂಚಿಸಿದ್ದಾರೆ. ಈ ಶಬ್ದ ಪವಿತ್ರ ಗ್ರಂಥವೊಂದರ ಶಬ್ದವಾಗಿತ್ತು. ಶಬ್ದದ ಅರ್ಥ ತಿಳಿಯದ ಭಾರತಿ ಸಿಂಗ್, ಕಾಮಿಡಿ ಮಾಡುವ ಉದ್ದೇಶದಿಂದ ಆ ಶಬ್ದದ ವಿಪರೀತ ಅರ್ಥವನ್ನೇ ಹೇಳಿದ್ದಾರೆ. ಇದನ್ನು ತಮಾಷೆ ಎಂದು ತಿಳಿದ ರವೀನಾ ಹಾಗೂ ಫರಾಹ್ ಖಾನ್, ಭಾರತಿಯನ್ನು ಆಲಿಗೆ ನಿಲ್ಲಿಸದೆ ಅವರೂ ಸಹ ಆಕೆಯ ತಮಾಷೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋ ಅನ್ನು ವಿಕ್ಷೀಸಿದವರು ಮೂವರ ಮೇಲೂ ಕೂಡ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪ ಹೊರಿಸಿದ್ದಾರೆ.

Trending News